ನೀನೇ ರಾಮ ನೀನೇ ಶಾಮ
ನೀನೇ ಅಲ್ಲಾ ನೀನೇ ಯೇಸು
ನೀನೇ ಕರ್ಮ ನೀನೇ ಧರ್ಮ
ನೀನೇ ಮರ್ಮ ನೀನೇ ಪ್ರೇಮ
ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ
ಕಣಕಣ ಕಣದೊಳಗೆ ಕುಳಿತಿರುವೆ
ಮುಕುಂದ ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ
ನೀನೇ ರಾಮ ನೀನೇ ಶಾಮ
ನೀನೇ ಅಲ್ಲಾ ನೀನೇ ಯೇಸು
ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ ಬೆವರಲಿರುವೆ ನಾನು
ಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನು
ಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳ ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ ಇರೋ ಮಾರ್ಗವು ಸರಳ
ನನ್ನ ಸೇರಲು ದಾರಿಯು ನೂರು
ಅದಕೇತಕೆ ಈ ತಕರಾರು
ಅಣು ಅಣು ಅಣು ಒಳಗೆ ಕುಳಿತಿರುವೆ
ಮುಕುಂದ ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ
ಯುಗದಯುಗದ ಮೃಗದ ಖಗದ ಉಸಿರಲಿರುವೆ ನಾನು
ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನು
ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು
ನನಗೂ ನಿನಗೂ ನಡುವೆ ನೀನೇ ಗೋಡೆ ಕಟ್ಟಿದವನು
ನಾ ಇರುವೆ ಒಳಗೆ ನೀ ಹುಡುಕಿದೆ ಹೊರಗೆ
ಬಿಚ್ಚು ಮದದ ಉಡುಗೆ ನಡೆ ಬೆಳಕಿನ ಕಡೆಗೆ
ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ಕಣಕಣ ಕಣದೊಳಗೆ ನಾನಿರುವೆ
ಮುಕುಂದ ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ
ನೀನೇ ರಾಮ ನೀನೇ ಶಾಮ
ನೀನೇ ಆಲೇ ನೀನೇ ಎಲ್ಲ