Showing posts with label Premaloka. Show all posts
Showing posts with label Premaloka. Show all posts

Monday, 10 April 2017

Premalokadinda Thanda Premada Sandesha

Premalokadinda Thanda Premada Sandesha

ಸಾಹಿತ್ಯ / ಸಂಗೀತ: ಹಂಸಲೇಖ
ಗಾಯಕರು: ಕೆ. ಜೆ. ಯೇಸುದಾಸ್, ಎಸ್. ಜಾನಕಿ

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ
ಭೂಮಿಯಲ್ಲಿ ಹಾಡಿ ತಿಳಿಸೋಣ
ಪ್ರೀತಿ ಹಂಚೋಣ
ಆನಂದ ಪಡೆಯೋಣ
ಬನ್ನಿ ಪ್ರೇಮದ ಹಸ್ತ್ರ ಹೇಳೋಣ

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ ||೨||

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

ಗಾಳಿ, ನೀರು , ಹೂವು, ಹಣ್ಣು, ಇರುವುದು ಏತಕ್ಕೆ?
ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?
ಸೂರ್ಯ ಚಂದ್ರ ರಾತ್ರಿ ಹಗಲು ಬರುವುದು ಏತಕ್ಕೆ?
ಪ್ರೀತಿ ಇಂದ ತಾನೆ? ಪ್ರೇಮದಿಂದ ತಾನೆ?

ಬರುವುದು ಹೇಗೆ? ಇರುವುದು ಹೇಗೆ?
ತಿಳಿದಿದೆ ನಮಗೆ, ಆದರೆ ಕೊನೆಗೆ
ಹೋಗುವ ಘಳಿಗೆ ತಿಳಿಯದು ನಮಗೆ
ಒಗಟಿದು ಎಲ್ಲರಿಗೆ

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ

ಪ್ರೇಮಲೋಕದಿಂದ ತಂದ ಪ್ರೇಮದ ಸಂದೇಶ

ರಾಗ ತಾಳ, ಹಾವ ಭಾವ ಸೇರದೆ ಹೋದರೇ
ಗಾನ ನಾಟ್ಯವಿಲ್ಲ, ಪ್ರೇಮ ರಾಗವಿಲ್ಲ

ಜೀವ ಜೀವ ಪ್ರೀತಿಯಿಂದ ಕೂಡದೆ ಹೋದರೆ
ಜೀವ ರಾಗವಿಲ್ಲ, ಶೂನ್ಯಲೋಕವೆಲ್ಲ

ಬದುಕಿನ ಜೊತೆಗೆ ಪ್ರೆಮದ ಬೆಸುಗೆ
ಇರುವುದು ಹೀಗೆ ಒಲವಿನ ತೆರೆಗೆ
ಪ್ರೀತಿಯ ಸವಿಗೆ ತೋರುವ ನಮಗೆ
ಪ್ರೇಮವು ವರತಾನೆ?

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ

|| ಪ್ರೇಮಲೋಕದಿಂದ ||

ಜೀವನವೆಂದರೆ ಪ್ರೀತಿಯೆನ್ನೋಣ
ಲೋಕದ ಸೃಷ್ಠಿಗೆ ಪ್ರೀತಿ ಕಾರಣ ||೨||