Showing posts with label Belli Moda. Show all posts
Showing posts with label Belli Moda. Show all posts

Tuesday, 23 May 2017

Belli Modada Anchinda Moodi Banda

ಚಿತ್ರ: ಬೆಳ್ಳಿ ಮೋಡ (೧೯೬೭/1967)
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ

ಬೆಳ್ಳಿ ಮೋಡದ ಅಂಚಿನಿಂದ
ಮೂಡಿಬಂದ ಆಶಾಕಿರಣ
ಬೆಳ್ಳಿ ಮೋಡದ ಆಚೆಯಿಂದ
ಓಡಿಬಂದ ಮಿನುಗುತಾರೆ

ವಿಕಸಿತ ಸುಮವೋ, ವನದೇವತೆಯೋ
ಮನಮಂದಿರದ ಅದಿದೇವತೆಯೋ
ವಿಕಸಿತ ಸುಮವೋ, ವನದೇವತೆಯೋ
ಮನಮಂದಿರದ ಅದಿದೇವತೆಯೋ
ದೇವರು ನೀವು ದಾಸಿಯು ನಾನು
ದೇವರು ನೀವು ದಾಸಿಯು ನಾನು
ತನುಮನ ನಿಮದೆ ಇನ್ನೇನು

ಬೆಳ್ಳಿ ಮೋಡದ ಆಚೆಯಿಂದ
ಓಡಿಬಂದ ಮಿನುಗುತಾರೆ

ಅಂತರಂಗ ಭಾವತರಂಗ
ಕಲಕಲ ಹರಿವ ಪ್ರೇಮದ ಗಂಗ
ಅಂತರಂಗ ಭಾವತರಂಗ
ಕಲಕಲ ಹರಿವ ಪ್ರೇಮದ ಗಂಗ
ಪ್ರೇಮದ ಗಂಗ ಜಲದಲಿ ಮಿಂದು
ಪ್ರೇಮದ ಗಂಗ ಜಲದಲಿ ಮಿಂದು
ಪಾವನಳಾದೆ ನಾನಿಂದು

ಬೆಳ್ಳಿ ಮೋಡದ ಆಚೆಯಿಂದ
ಓಡಿಬಂದ ಮಿನುಗುತಾರೆ

ಪ್ರಣಯದ ಕಾವ್ಯ ರಚಿಸಿದೆ ನೀನು
ಪುಟಪುಟವೆಲ್ಲ ತುಂಬಿದೆ ಜೇನು
ಪ್ರಣಯದ ಕಾವ್ಯ ರಚಿಸಿದೆ ನೀನು
ಪುಟಪುಟವೆಲ್ಲ ತುಂಬಿದೆ ಜೇನು
ಜೇನಿನ ದಾರೆ ಸವಿಯುವ ಬಾರೆ
ಜೇನಿನ ದಾರೆ ಸವಿಯುವ ಬಾರೆ
ನೀನೇ ನನ್ನ ಮಿನುಗುತಾರೆ

ಬೆಳ್ಳಿ ಮೋಡದ ಅಂಚಿನಿಂದ
ಮೂಡಿಬಂದ ಆಶಾಕಿರಣ