Showing posts with label Omme Ninnannu Kanthumba. Show all posts
Showing posts with label Omme Ninnannu Kanthumba. Show all posts

Monday, 18 December 2017

Omme Ninnannu Kanthumba Kannada Song Lyrics

Omme Ninnannu Kanthumba Kannada Song Lyrics


ಆ .... ಆ....
ಆ .... ಆ....ಆ ....

ಒಮ್ಮೆ ನಿನ್ನನು ಕಣ್ತುಂಬ
ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೋ ಬಾನಲ್ಲೋ
ಇನ್ನೆಲ್ಲೋ ನಾ ಕಾಣೆ
ಒಮ್ಮೆ ನಿನ್ನನು ಕಣ್ತುಂಬ
ಕಾಣುವಾಸೆ ಎಲ್ಲಿರುವೆ

ಅರಳಿರುವ ಹೂವಿನಲಿ ನಿನ ನೋಟವ
ಹರಿಯುತಿಹ ನೀರಿನಲ್ಲಿ ನಿನ ಓಟವ
ಇಂಪಾದ ಗಾನದಲ್ಲಿ ನಿನ ಮನದ ಭಾವವ
ಮಳೆಬಿಲ್ಲ ಬಣ್ಣದಲ್ಲಿ ನಿನ ಅಂದವ
ನವಿಲಾಡೋ ನಾಟ್ಯದಲ್ಲಿ ನಿನ ಚೆಂದವ
ತಂಪಾದ ಗಾಳಿಯಲ್ಲಿ ನೀನಾಡೋ ಆಟವ
ದಿನವೆಲ್ಲ ನಾ ಕಂಡೆ ... ನಾ ಕಂಡು ಬೆರಗಾದೆ

ಒಮ್ಮೆ ನಿನ್ನನು ಕಣ್ತುಂಬ
ಕಾಣುವಾಸೆ ಎಲ್ಲಿರುವೆ

ಮಿನುಗುತಿಹ ತಾರೆಯೆಲ್ಲ ನಿನ ಕಂಗಳೋ
ನಗುತಿರಲು ಭೂಮಿಗೆಲ್ಲ ಬೆಳದಿಂಗಳೋ
ಆ ಬೆಳ್ಳಿ ಮೋಡವೆಲ್ಲ ನೀ ಬರೆದ ಬೊಂಬೆಗಳೋ
ಮೂಡಣದ ಅಂಚಿನಿಂದ ನಿನ ಪಯಣವೋ
ಮುಂಜಾನೆ ಕಣೋ ಕೆಂಪು ಚೆಂದುಟಿಯ ಬಣ್ಣವೋ
ಆಗಸದ ನೀಲಿಯೆಲ್ಲ ನೀ ನಡೆವ ಹಾದಿಯೋ
ನಿನಂತೆ ಯಾರಿಲ್ಲ ನಿನಲ್ಲೇ ಮನಸೆಲ್ಲ

ಒಮ್ಮೆ ನಿನ್ನನು ಕಣ್ತುಂಬ
ಕಾಣುವಾಸೆ ಎಲ್ಲಿರುವೆ
ಭುವಿಯಲ್ಲೋ ಬಾನಲ್ಲೋ
ಇನ್ನೆಲ್ಲೋ ನಾ ಕಾಣೆ
ಒಮ್ಮೆ ನಿನ್ನನು ಕಣ್ತುಂಬ
ಕಾಣುವಾಸೆ ಎಲ್ಲಿರುವೆ