Ellello Oduva Manase Song Lyrics
ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತರವೇ?
ಹರುಷವಾ ತಂದಿಡುವೇ... ವ್ಯಸನವಾ ಬೆಂಬಿಡುವೇ...
ಬಂದರೂ ಅಳುವೂ ನಗಿಸೀ ನಲಿವಾ.... ಮ... ನ... ವೇ...
ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತರವೇ...?
ನಾನು ನನ್ನದೆನ್ನುವಾ ನಿನ್ನಯಾ ತರ್ಕವೇ ಬಾಲಿಶಾ...
ಎಲ್ಲಾ ಶೂನ್ಯವೆನ್ನುವಾ ನಿನ್ನಯಾ ವರ್ಗವೇ ಅಂಕುಶಾ...
ಕಲ್ಮಶಾ ನಿಶ್ಕಲ್ಮಶಾ ಥರ ಥರಾ ನಿನ್ನ ವೇಷ...
ದ್ವಾದಶಿ ಏಕಾದಶಿ ಎಲ್ಲಾ ನಿನ್ನ ಖುಷಿ...
ಇದ್ದರೂ ಜೊತೆಗೆ ದೂರಾ ಇರುವಾ ಮ..ನ..ವೇ
ಎಲ್ಲೆಲ್ಲೊ ಓಡುವ ಮನಸೇ...ಓ...ಓ... ಯಾಕಿಂತ ಹುಚ್ಚುಚ್ಚು ವರಸೇ?
ಇಲ್ಲದ ಸಲ್ಲದ ತರಲೇ ಹಾಂ... ಹಾ... ಹೋದಲ್ಲಿ ಬಂದಲ್ಲಿ ತ ರ ವೇ...?
ಬೇಕು ಬೇಡ ಎನ್ನುವಾ ಗೊಂದಲ ಸೃಷ್ಟಿಸೋ ಮಾಯೆ ನೀ....
ತಪ್ಪು ವಪ್ಪು ಎಲ್ಲವಾ ತೋರುವಾ ಕಾಣದ ಛಾಯೆ ನೀ....
ಕಲ್ಪನೆ ಪರಿಕಲ್ಪನೇ ವಿಧ ವಿಧಾ ನಿನ್ನ ತಾಣಾ...
ಬಣ್ಣನೇ ಬದಲಾವಣೆ ಎಲ್ಲಾ ನಿನ್ನಾ ಹೊಣೇ...
ಕಂಡರೂ ಸಾವೂ... ಬದುಕೂ... ಎನುವಾ ಮ..ನ..ವೇ...
ಎಲ್ಲೆಲ್ಲೊ ಓಡುವ ಮನಸೇ...ಹಾಂ... ಹಾ... ಲಾ...ಲಾ...ಲ...