Showing posts with label Ele Hombisile. Show all posts
Showing posts with label Ele Hombisile. Show all posts

Sunday, 23 April 2017

Ele Hombisile Kannada Song Lyrics

Ele Hombisile Kannada Song Lyrics


ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡೀನಾ ಎಲ್ಲಾರ ಕಂಡಿರಾ
ಎಲೆ ನೀರಿನಲಿ ಎಲೆ ಹಸಿಹಸಿರೆ
ಇಂಥ ಜೋಡೀನಾ ಎಂದಾರ ಕಂಡಿರಾ
ಓ ಕುಹೂ ಇಂಚರವೆ, ಸುಖೀ ಸಂಕುಲವೆ
ಇಂಥಾ ಹಿಂಗಾರಿನ ಮುಂಗಾರಿನ
ಮಿಲನ ಕಂಡಿರಾ...
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡೀನಾ ಎಲ್ಲಾರ ಕಂಡಿರಾ
ನನ್ನ ಒಂದು ಚಂದನ, ಹೆಂಗರುಳ ಹೂಮನ
ಋತುವೇ ಸುರಿಸು ಇವಳಿಗೆ ಹೂಮಳೆ
ಎದೆಯಲಿ ಆದರ, ತುಂಬಿರುವ ಸಾಗರ
ನನ್ನ ದೊರೆಯಾ, ಹೃದಯನಿವಾಸಿ ನಾ
ಅರರೆ ನುಡಿದೆ ಕವನಾ
ನುಡಿಸೋ ಕವಿಗೇ ನಮನ
ಓ, ಮಹಾಮೇಘಗಳೇ, ಹತ್ತೂ ದೈವಗಳೇ
ಇಂಥಾ ಆಂತರ್ಯದ ಸೌಂಧರ್ಯದ
ಸೊಬಗು ಕಂಡಿರಾ...
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡೀನಾ ಎಲ್ಲಾರ ಕಂಡಿರಾ
ಹುಣ್ಣಿಮೆಯ ಆಗಸ, ಬೆಳಕಿನ ಪಾಯಸ
ಸುರಿಸೋ ಕವಿಗೆ ಸತಿಯೇ ನೀ ಸವಿ’
ನಿಮ್ಮ ತುಟಿ ತೋರಿಸಿ, ನನ್ನ ತುಟಿ ಸೇರಿಸಿ
ನೀವು ಸವಿದಾ ಸವಿಗೂ ಇದು ಸವಿ
ಅರರೆ ನುಡಿದೇ ಪ್ರಾಸ
ಕವಿಯ ಜೊತೆಗೇ ವಾಸ
ಓ ಸುಖೀ ತಾರೆಗಳೇ, ಸುಖೀ ಮೇಳಗಳೇ
ಇಂಥ ಸಂಸಾರದ ಸವಿಯೂಟದ
ಸವಿಯ ಕಂಡಿರಾ
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡೀನಾ ಎಲ್ಲಾರ ಕಂಡಿರಾ
ಎಲೆ ನೀರಿನಲಿ ಎಲೆ ಹಸಿಹಸಿರೆ
ಇಂಥ ಜೋಡೀನಾ ಎಂದಾರ ಕಂಡಿರಾ
ಓ ಕುಹೂ ಇಂಚರವೆ, ಸುಖೀ ಸಂಕುಲವೆ
ಇಂಥಾ ಹಿಂಗಾರಿನ ಮುಂಗಾರಿನ
ಮಿಲನ ಕಂಡಿರಾ...
ಎಲೆ ಹೊಂಬಿಸಿಲೆ ಎಲೆ ತಂಬೆಲರೆ
ಇಂಥ ಜೋಡೀನಾ ಎಲ್ಲಾರ ಕಂಡಿರಾ
ಎಲೆ.....