Showing posts with label E Sundara Beladingala. Show all posts
Showing posts with label E Sundara Beladingala. Show all posts

Sunday, 2 April 2017

E Sundara Beladingala Song Lyrics

E Sundara Beladingala Song Lyrics


ಚಿತ್ರ: ಅಮೃತ ವರ್ಷಿಣಿ
ಗಾಯನ: ಎಸ್ ಪಿ ಬಾಲು, ಚಿತ್ರ
ನಟರು: ರಮೇಶ್, ಸುಹಾಸಿನಿ, ಶರತ್ ಬಾಬು

ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ
ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ.....

ದಿನ....ದಿನ.......ಕ್ಷಣ ಕ್ಷಣ ಚಿನ್ನ ನನ್ನ ನಿನ್ನ ಹಾಡಲಿ ಕುಣಿಸಿರುವೆ
ಮನ ಮನ ಮದೋತ್ತರ ಕಣ್ಣ ಅಂಚಲೇ ನಗಿಸಿರುವೆ
ಒಲವೆ........ಒಲವೆ ನಿನ್ನ ನಲಿವೊಂದೆ ವರವೆನ್ನುತ ನಾ ನಲಿವೆ
ಒಲವೆ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ

ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು

ಸಮ....ಸಮ......ಸರಿಗಮ ಸಮಾಗಮ ಇಂತ ವಿಸ್ಮಯ ಇದೆ ಮೊದಲು
ಘಮ ಘಮ ಎದೆಯೆಲ್ಲ ಇನ್ನು ಮಾತು ಬರಿ ತೊದಲು
ಉಸಿರೇ.....ಉಸಿರೇ ನಿನ್ನ ಉಸಿರಾಗಿ ಈ ಉಸಿರ ಬರೆದಿರುವೆ 
ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೇ...
ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ......ಈ ಸುಂದರ......