Showing posts with label Chandravalli Thota. Show all posts
Showing posts with label Chandravalli Thota. Show all posts

Tuesday, 23 May 2017

Suma Baaleya Premada Siriye Song Lyrics

Suma Baaleya Premada Siriye Song Lyrics


ಚಿತ್ರ: ಚಂದವಳ್ಳಿಯ ತೋಟ (೧೯೬೪/1964)
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ಟಿ.ಜಿ.ಲಿಂಗಪ್ಪ
ಹಾಡಿದವರು: ಎಲ್.ಆರ್.ಈಶ್ವರಿ

ಸುಮ ಬಾಲೆಯ ಪ್ರೇಮದ ಸಿರಿಯೆ
ಇದೇನು ಕೋಪ ಅರಿಯೆ
ಸದಾ ವಿನೋದ ಸರಿಯೆ
ನಾನಿಂದು ನಿನ್ನ ಮರೆಯೆ
ಸುಮ ಬಾಲೆಯ ಪ್ರೇಮದ ಸಿರಿಯೆ
ಇದೇನು ಕೋಪ ಅರಿಯೆ
ಸದಾ ವಿನೋದ ಸರಿಯೆ
ನಾನಿಂದು ನಿನ್ನ ಮರೆಯೆ
ಸುಮ ಬಾಲೆಯ ಪ್ರೇಮದ ಸಿರಿಯೆ

ಕಣ್ಣಿಗೆ ಕಾಣದೆ ಮರೆ ನಿಂತು
ಹೆಣ್ಣನು ಕಾಡುವುದೇಕಿಂತು
ಕಣ್ಣಿಗೆ ಕಾಣದೆ ಮರೆ ನಿಂತು
ಹೆಣ್ಣನು ಕಾಡುವುದೇಕಿಂತು
ಬಳಿಸಾರಿ ಬೇಗಲೇ ಬಾರ
ನಲಿವಿಂದ ಮೊಗವ ನೀ ತೋರ
ಬಳಿಸಾರಿ ಬೇಗಲೇ ಬಾರ
ನಲಿವಿಂದ ಮೊಗವ ನೀ ತೋರ
ನಾ ಕಾದಿಹೆ ನಿನಗಾಗಿಯೆ
ಬಾರೆನ್ನ ಚೆಲುವ ಮರಿಯೆ

ಸುಮ ಬಾಲೆಯ ಪ್ರೇಮದ ಸಿರಿಯೆ
ಇದೇನು ಕೋಪ ಅರಿಯೆ
ಸದಾ ವಿನೋದ ಸರಿಯೆ
ನಾನಿಂದು ನಿನ್ನ ಮರೆಯೆ
ಸುಮ ಬಾಲೆಯ ಪ್ರೇಮದ ಸಿರಿಯೆ

ಮೆಲ್ಲನೆ ಹೆಜ್ಜೆಯ ನೀ ಹಾಕಿ
ಗಲ್ಲಕೆ ಮುತ್ತನು ನೀ ಸೋಕಿ
ಮೆಲ್ಲನೆ ಹೆಜ್ಜೆಯ ನೀ ಹಾಕಿ
ಗಲ್ಲಕೆ ಮುತ್ತನು ನೀ ಸೋಕಿ
ಉಲ್ಲಾಸದಿಂದ ನಾ ಕುಣಿವೆ
ಸಂತೋಷದಿಂದ ನೀ ತಣಿವೆ
ಮನ ಸೋತಿಹೆ ಮೈ ಮರೆತಿಹೆ
ಬಾರೆನ್ನ ಕುರಿಯ ಮರಿಯೆ

ಸುಮ ಬಾಲೆಯ ಪ್ರೇಮದ ಸಿರಿಯೆ
ಇದೇನು ಕೋಪ ಅರಿಯೆ
ಸದಾ ವಿನೋದ ಸರಿಯೆ
ನಾನಿಂದು ನಿನ್ನ ಮರೆಯೆ
ಸುಮ ಬಾಲೆಯ ಪ್ರೇಮದ ಸಿರಿಯೆ