Showing posts with label Bayaludaari. Show all posts
Showing posts with label Bayaludaari. Show all posts

Wednesday, 19 April 2017

Elliruve Manava Kaaduva Roopasiye song Lyrics

Elliruve Manava Kaaduva Roopasiye song Lyrics


ಚಿತ್ರ : ಬಯಲುದಾರಿ
ಸಾಹಿತ್ಯ : ಚಿ.ಉದಯಶಂಕರ್
ಸಂಗೀತ : ರಾಜನ್ ನಾಗೇಂದ್ರ
ನಿರ್ದೇಶನ : ದೊರೈ - ಭಗವಾನ್
ಗಾಯಕರು : ಎಸ್.ಪಿ.ಬಾಲಸುಬ್ರಮಣ್ಯಂ

ಎಲ್ಲಿರುವೆ, ಮನವ ಕಾಡುವ ರೂಪಸಿಯೇ
ಬಯಕೆಯಾ, ಬಳ್ಳಿಯಾ, ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ, ಬಳ್ಳಿಯಾ, ನಗುವ ಹೂವಾದ ಪ್ರೇಯಸಿ
ನೀನು, ಎಲ್ಲಿರುವೆ, ಮನವ ಕಾಡುವ ರೂಪಸಿಯೇ

ತೇಲುವ ಈ ಮೂಡದ ಮೇಲೆ, ನೀನಿಂತ ಹಾಗಿದೆ
ನಸುನಗುತ, ನಲಿನಲಿದು, ನನ್ನ ಕೂಗಿದಂತಿದೆ
ಸೇರುವ ಬಾ ಆಗಸದಲ್ಲಿ, ಎಂದು ಹೇಳಿದಂತಿದೆ
ತನುವೆಲ್ಲ, ಹಗುರಾಗಿ, ತೇಲಾಡುವಂತಿದೆ, ಹಾಡುವಂತಿದೆ

ಚೆಲುವೆ, ಎಲ್ಲಿರುವೆ ಮನವ ಕಾಡುವ ರೂಪಸಿಯೇ
ಬಯಕೆಯಾ, ಬಳ್ಳಿಯಾ ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ, ಬಳ್ಳಿಯಾ ನಗುವ ಹೂವಾದ ಪ್ರೇಯಸಿ
ನೀನು, ಎಲ್ಲಿರುವೆ ಮನವ ಕಾಡುವ ರೂಪಸಿಯೇ

ಕಣ್ಣಲ್ಲೇ ಒಲವಿನ ಗೀತೆ, ನೀನು ಹಾಡಿದಂತಿದೆ
ನಿನ್ನಾಸೆ, ಅತಿಯಾಗಿ, ತೂರಾಡುವಂತಿದೆ
ಹಗಲಲ್ಲು ಚಂದ್ರನ ಕಾಣೋ, ಭಾಗ್ಯನನ್ನದಾಗಿದೆ
ಚಂದ್ರಿಕೆಯ, ಚೆಲುವಿಂದ, ಬಾಳು ಭವ್ಯವಾಗಿದೆ,ಭವ್ಯವಾಗಿದೆ

ನಲ್ಲೇ, ಎಲ್ಲಿರುವೆ, ಮನವ ಕಾಡುವ ರೂಪಸಿಯೇ
ಬಯಕೆಯಾ, ಬಳ್ಳಿಯಾ, ನಗುವ ಹೂವಾದ ಪ್ರೇಯಸಿಯೇ
ಬಯಕೆಯಾ, ಬಳ್ಳಿಯಾ, ನಗುವ ಹೂವಾದ ಪ್ರೇಯಸಿ
ನೀನು, ಎಲ್ಲಿರುವೆ ಮನವ ಕಾಡುವ ರೂಪಸಿಯೇ