Showing posts with label Yavudo E Bombe Yavudo. Show all posts
Showing posts with label Yavudo E Bombe Yavudo. Show all posts

Monday, 18 December 2017

Yavudo E Bombe Yavudo Kannada Song Lyrics

Yavudo E Bombe Yavudo Kannada Song Lyrics


ಝುಂ ಝುಝುಂ ಝುಂಝುಝುಂ,
ನಿಸಗರಿಸಾ.. ಈ ತಾಳ ಇದ್ದರೆ...
ಹಾಡು ಬಾರದೆ... ಈ ಹಾಡು ಇದ್ದರೆ...
ನಿದ್ದೆ ಬಾರದೆ... ಈ ನಿದ್ದೆ ಬಂದರೆ...
ಕನಸು ಬಾರದೆ... ಆ ಕನಸಿನಲ್ಲಿ...
ಬೊಂಬೆ ಕಾಣದೆ....

ಯಾವುದೋ……… ಈ ಬೊಂಬೆ ಯಾವುದೋ....
ಊರ್ವಶಿಯ ಕುಲವೊ.... ಮೇನಕೆಯಾ ಚೆಲುವೊ...
ಯಾವುದೋ……… ಈ ಅಂದ ಯಾವುದೋ....
ಬೇಲೂರಿನ ಶಿಲೆಯೋ.... ಶಾಂತಲೆಯ ಕಲೆಯೋ....
ಕಾಳಿದಾಸನಾ... ಪ್ರೇಮಗೀತೆಯೋ....
ಕಾಳಿದಾಸನಾ... ಪ್ರೇಮಗೀತೆಯೋ....

ನೂರಾರು ಹೂಗಳಿದ್ದರೂ.. ಈ ಅಂದ ಬೇರೆ...
ಆ ತಾರೆ ಮಿನುಗುತಿದ್ದರೂ.. ಈ ಕನ್ಯೆ ಬೇರೆ... ನೀನ್ಯಾರೆ………
ನೀನಿಲ್ಲಿ ಸುಮ್ಮನಿದ್ದರೂ.. ಒಳಮಾತೆ ಬೇರೆ...
ಹಾಡಲ್ಲೇ ನೀನು ಇದ್ದರೂ.. ಎದುರಿರುವಾ ತಾರೆ...
ಹಲೋ... ನೀನ್ಯಾರೆ…………
ನನ್ನ ಮನದ ಪ್ರೇಮರಾಗಕೆ,
ನಿನ್ನ ಎದೆಯ ತಾಳ ಇದ್ದರೆ,
ನಾನು ಹಾಡೊ ನೂರು ಭಾವಕೆ,
ನೀನು ಒಮ್ಮೆ ನೋಡಿ ನಕ್ಕರೆ,
ಸಾಕು……………… ಲಲಲ್ಲಲಲಾಲಾಲಲಾಲಲಾ ……ಲಾ…
ತನನ್ನನನಾನಾನನಾನಾನ… ನಾ……
ಯಾವುದೋ……… ಈ ಬೊಂಬೆ ಯಾವುದೋ....
ಯಾವುದೋ……… ಈ ಬೊಂಬೆ ಯಾವುದೋ....

ನೀನ್ಯಾರೊ ತಿಳಿಯದಿದ್ದರೂ.. ನನಗೆ ನೀ ರಾಧೆ....
ಕಲ್ಲಾಗಿ ನಾನು ನಿಂತರೂ.. ಕರಗಿ ನೀರಾದೆ... ಏಕಾದೆ....
ಈ ಹಾಡು ನಿನ್ನದಾದರೂ.. ರಾಗ ನಾನಾದೆ....
ಯಾರೇನು ಹೇಳದಿದ್ದರೂ.. ನನಗೆ ಜತೆಯಾದೆ.... ಹೇಗಾದೆ....
ಇಂದು ನೆನ್ನೆ ನಾಳೆ ಯಾವುದು,
ನನಗೆ ಈಗ ನೆನಪು ಬಾರದು,
ನಿನ್ನ ಬಿಟ್ಟು ನನ್ನ ಮನಸಿದು,
ಬೇರೆ ಏನು ಕೇಳಲಾರದು,
ರಾಧೆ…………… ಲಲಲ್ಲಲಲಾಲಾಲಲಾಲಲಾ ……ಲಾ…
ಲಲಲ್ಲಲಲಾಲಾಲಲಾಲಲಾ ……ಲಾ…

ಯಾವುದೋ……… ಈ ಬೊಂಬೆ ಯಾವುದೋ....
ಊರ್ವಶಿಯ ಕುಲವೊ.... ಮೇನಕೆಯಾ ಚೆಲುವೊ....
ಯಾವುದೋ……… ಈ ಅಂದ ಯಾವುದೋ....
ಬೇಲೂರಿನ ಶಿಲೆಯೋ.... ಶಾಂತಲೆಯ ಕಲೆಯೋ....
ಕಾಳಿದಾಸನಾ... ಪ್ರೇಮಗೀತೆಯೋ....
ಕಾಳಿದಾಸನಾ... ಪ್ರೇಮಗೀತೆಯೋ....