Showing posts with label Aseya Bhale. Show all posts
Showing posts with label Aseya Bhale. Show all posts

Sunday 23 April 2017

ರಾಧಾ, ರಾಧಾ ನನ್ನ ನಲ್ಲೆ ಮುದ್ದು ನಲ್ಲೆ

ಚಿತ್ರ: ಆಸೆಯ ಬಲೆ (೧೯೮೭/1987)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್

ರಾಧಾ, ರಾಧಾ
ನನ್ನ ನಲ್ಲೆ ಮುದ್ದು ನಲ್ಲೆ
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ
ನನ್ನ ನಲ್ಲ ಮುದ್ದು ನಲ್ಲ
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ

ನಿನ್ನೆ ನಿನ್ನ ಕಾಣದೇನೆ ನಲ್ಲ ನೊಂದೆನು
ಬೆಂಕಿ ಕಂಡ ಹೂವಿನಂತೆ ಬಾಡಿ ಹೋದೆನು
ಬೀಸೊ ಗಾಳಿಯಂತೆ ನಾನು ಸುತ್ತಿ ಬಂದೆನು
ನನ್ನ ರಾಧೆಯನ್ನೆ ಹುಡುಕಿ ಸೋತು ಹೋದೆನು
ನೀನೆಲ್ಲೊ ನಾನು ಅಲ್ಲೆ ಅಲ್ಲೆ
ನಿನ್ನಂತೆ ನಾನು ನಲ್ಲೆ ನಲ್ಲೆ
ನೀನೆಲ್ಲೊ ನಾನು ಅಲ್ಲೆ ಅಲ್ಲೆ
ನಿನ್ನಂತೆ ನಾನು ನಲ್ಲೆ ನಲ್ಲೆ
ನಗಿಸುವೆ ಕುಣಿಸುವೆ ಸುಖವನು ತರುವೆ

ನನ್ನ ನಲ್ಲ ಮುದ್ದು ನಲ್ಲ
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ

ಮಾತು ಚೆನ್ನ ಮೌನ ಚೆನ್ನ ನೋಟ ಚೆಂದವು
ಚಿನ್ನ ನಿನ್ನ ಸೇರಿದಾಗ ಬಾಳೆ ಚೆಂದವು
ಸೂರ್ಯ ಕೂಡ ಚಂದ್ರನಂತೆ ತಣ್ಣಗಾದನು
ನಿನ್ನ ಪ್ರೀತಿ ಮಾತಿನಿಂದ ಮಂಕನಾದನು
ಬಂಗಾರ ಬೊಂಬೆ ನೀನು ನೀನು
ಒಂದೊಂದೂ ಮಾತು ಜೇನು ಜೇನು
ಬಂಗಾರ ಬೊಂಬೆ ನೀನು ನೀನು
ಒಂದೊಂದೂ ಮಾತು ಜೇನು ಜೇನು
ಸರಸದ ನುಡಿಯಲಿ ಮನವನು ಗೆಲುವೆ

ನನ್ನ ನಲ್ಲೆ ಮುದ್ದು ನಲ್ಲೆ
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ
ನನ್ನ ನಲ್ಲೆ ಮುದ್ದು ನಲ್ಲೆ
ನಿನ್ನ ಆಸೆ ಎಲ್ಲ ಬಲ್ಲೆ
ನೋಡಿಲ್ಲಿ ನಾನಿಲ್ಲೆ