Showing posts with label Endo Kanda Kanasu. Show all posts
Showing posts with label Endo Kanda Kanasu. Show all posts

Monday, 18 December 2017

Endo Kanda Kanasu Kannada Song Lyrics

Endo Kanda Kanasu Kannada Song Lyrics


ಗಂಡು: ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ

ಹೆಣ್ಣು: ನಿನ್ನ ಒಂದು ಸ್ಪರ್ಶ
ನಂಗೆ ನೂರು ವರುಷ
ನಿನ್ನ ನೆರಳಿಗಾಗಿ ಸೋತೇ

ಗಂಡು: ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ

ಹೆಣ್ಣು: ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
ನೆನೆನೆನೆದು ಏಕಿರುವೆ ಮಾತನಾಡದೆ

ಗಂಡು: ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ

ಗಂಡು: ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ


ಗಂಡು: ಆ ಮೋಡದಿಂದ ಮಳೆಗೆ ಒಂದು ಸ್ಫೂರ್ತಿ ಇದೆ
ತಂಗಾಳಿಯಿಂದ ಹೂವಿಗೊಂದು ಕೀರ್ತಿ ಇದೆ

ಹೆಣ್ಣು: ನಿನ್ನ ಹೃದಯದಾಣೆ ನನ್ನ ಹೃದಯದಲ್ಲಿ ಪ್ರೀತಿ ಇದೆ
ಆ ಕಥೆಗಳೆಲ್ಲ ಕಣ್ಣ ತುಂಬಿ ನೀರಾಗಿದೆ

ಗಂಡು: ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು

ಹೆಣ್ಣು: ಇದು ಮರೆಯದ ಹಾಡು, ಮೌನಗಳೇ ಸಾಕ್ಷಿಗಳು
ಇದು ಮುಗಿಯದ ನೆನಪು, ವಿರಹಗಳೇ ಗುರುತುಗಳು

ಗಂಡು: ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ

ಗಂಡು: ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ

ಹೆಣ್ಣು: ಸಹಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ
ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ

ಗಂಡು: ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ
ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ

ಹೆಣ್ಣು: ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ

ಗಂಡು: ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾನೆನೆಯೋ ಹಾಗಿರಲೀ

ಹೆಣ್ಣು: ಬಾ ಕ್ಷಮಿಸು ಬಾ ಇಂದೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ

ಗಂಡು: ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ

ಗಂಡು: ನೂರಾರು ಮುಳ್ಳುಗಳಾ ನಡುವೆ ಹೂವಿದೇ
ನೂರಾರು ನೋವುಗಳಾ ನಡುವೆ ಒಲವಿದೇ

ಹೆಣ್ಣು: ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ
ನೆನೆನೆನೆದು ಏಕಿರುವೆ ಮಾತನಾಡದೆ

ಗಂಡು: ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀವ

ಗಂಡು: ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ