Showing posts with label Naguva_Nayana. Show all posts
Showing posts with label Naguva_Nayana. Show all posts

Monday, 17 April 2017

Naguva Nayana Song Lyrics

Naguva Nayana Song Lyrics


ಪಲ್ಲವಿ ಅನುಪಲ್ಲವಿ (1984) - ನಗುವ ನಯನ...
ಆರ್.ಎನ್.ಜಯಗೋಪಾಲ್ | ಚಿತ್ರಗೀತೆ | ಪಲ್ಲವಿ ಅನುಪಲ್ಲವಿ | ೧೯೮೪
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಂಗೀತ: ಇಳಯರಾಜ
ಸಾಹಿತ್ಯ: ಅರ್.ಎನ್. ಜಯಗೋಪಾಲ್


(ಹೆಣ್ಣು) ಲ ಲ ಲ ಲ ಲ ಲ ಲ ಲ ಲ ಲ ಲಾ
ಲ ಲ ಲ ಲ ಲ ಲ ಲ ಲ ಲಾ ಲ ಲ ಲಾ
(ಗಂಡು) ಮ್..ಮ್..ಮ್..ಮ್ ಹ ಹ ಹಾ ಹ ಹ ಲ ಲ ಲಾ ಲ ಲ ಲಾ ಲ
ನಗುವ ನಯನ ಮಧುರ ಮೌನ
ಮಿಡಿವಾ ಹೃದಯಾ ಇರೆ ಮಾತೇಕೆ?
(ಹೆಣ್ಣು) ಹೊಸ ಭಾಷೆಯಿದು.. ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ?
ನಗುವ ನಯನ ಮಧುರ ಮೌನಾ
(ಗಂಡು) ಮಿಡಿವ ಹೃದಯ ಇರೆ ಮಾತೇಕೆ?
-*-
ನಿಂಗಾಗಿ ಹೇಳುವೆ ಕತೆ ನೂರನು
ನಾನಿಂದು ನಗಿಸುವೆ ಈ ನಿನ್ನನು
(ಹೆಣ್ಣು) ಇರುಳಲ್ಲು ಕಾಣುವೆ ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
(ಗಂಡು) ಜೊತೆಯಾಗಿ ನಡೆವೆ ನಾ ಮಳೆಯಲೂ
ಬಿಡದಂತೆ ಹಿಡಿವೆ ಈ ಕೈಯ್ಯನು
(ಹೆಣ್ಣು) ಗೆಳೆಯ ಜೊತೆಗೆ ಹಾರಿ ಬರುವೆ
ಬಾನಾ ಎಲ್ಲೆ ದಾಟಿ ನಲಿವೆ
(ಗಂಡು) ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ?
-*-
(ಹೆಣ್ಣು) ಈ ರಾತ್ರಿ ಹಾಡು ಪಿಸು ಮಾತಲಿ
ನಾ ತಂದೆ ಇನಿದಾದ ಸವಿ ರಾಗವ
(ಗಂಡು) ನೀನಲ್ಲಿ ನಾನಿಲ್ಲಿ ಏಕಾಂತವೆ
ನಾ ಕಂಡೆ ನನ್ನದೆ ಹೊಸ ಲೋಕವ
(ಹೆಣ್ಣು) ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ
(ಗಂಡು) ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸಾ ಹೊಸಕಿ ಬಿಡದೆ
(ಹೆಣ್ಣು) ನಗುವ ನಯನ ಮಧುರ ಮೌನ
ಮಿಡಿವ ಹೃದಯ ಇರೆ ಮಾತೇಕೆ?
(ಗಂಡು) ಹೊಸ ಭಾಷೆಯಿದು ರಸ ಕಾವ್ಯವಿದು ಇದ ಹಾಡಲು ಕವಿ ಬೇಕೆ?
(ಗಂಡು + ಹೆಣ್ಣು) ಲ ಲ ಲ ಲ ಲ ಲ ಲ ಲ ಲ ಲ ಲಾಆಆಆಆಆಆಆಆಆಅ