Showing posts with label Naaniruvude Ninagagi. Show all posts
Showing posts with label Naaniruvude Ninagagi. Show all posts

Monday, 18 December 2017

Naaniruvude Ninagagi Kannada Movie song Lyrics

ಚಿತ್ರ: ನಾನಿರುವುದೆ ನಿನಗಾಗಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೯

ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ

ಕೈಜಾರಿದ ಮುತ್ತೊಂದು ಕೈ ಸೇರಿತು ತಾ ಬಂದು
ಹೊಸ ಹರುಷ ಪ್ರತಿ ನಿಮಿಷ ಶಾಂತಿ ನೀಡಿತು ನನಗಿಂದು

ನಿನಗಾಸರೆ ನಾನಾಗಿ ನನ್ನ ಕೈಸೆರೆ ನೀನಾಗಿ
ಕನಸುಗಳು ನನಸಾಗಿ ಬಾಳು ಹೊನ್ನಿನ ಕಡಲಾಗಿ
ಹೊಸತನ ಕಾಣುವ ಹಾಯಾಗಿ

ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ

ನನ್ನಾಸೆಯ ಹೂವಾಗಿ ನನ್ನೊಲವಿನ ಜೇನಾಗಿ
ಜೊತೆಯಲ್ಲೆ ಒಂದಾಗಿ ಎಂದು ನೀನಿರು ಸುಖವಾಗಿ

ನಾ ನೋಡುವ ಕಣ್ಣಾಗಿ ನಾ ಹಾಡುವ ಹಾಡಾಗಿ
ಬಾಳಿನಲಿ ಬೆಳಕಾಗಿ ಸೇರು ನನ್ನಲಿ ಹಿತವಾಗಿ
ಹೊಸತನ ಕಾಣುವ ಹಾಯಾಗಿ

ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ