Showing posts with label Jeevana Chaithra. Show all posts
Showing posts with label Jeevana Chaithra. Show all posts

Monday, 18 December 2017

Jeevana Chaithra Kannada Song Lyrics

ಚಿತ್ರ: ಜೀವನ ಚೈತ್ರ
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ಮಂಜುಳಾ ಗುರುರಾಜ್

ಗಂ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
      ನೆನೆಯಲು ಕಾಮನ ಸುಮಬಾಣನ ಅದೇ ದಿನ
      ಕುಣಿಯಿತು ಮನ, ತಣಿಸುತ ನನ್ನಾ
      ನಯನದಿ ನಯನ ಬೆರೆತಾ ಕ್ಷಣ ।2।
ಹೆ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
      ನೆನೆಯಲು ಕಾಮನ ಸುಮಬಾಣನ ಅದೇ ದಿನ
      ಕುಣಿಯಿತು ಮನ, ತಣಿಸುತ ನನ್ನಾ
      ನಯನದಿ ನಯನ ಬೆರೆತಾ ಕ್ಷಣ ।2।
ಜೊ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ

ಗಂ:  ಶೃಂಗಾರದ ಸಂಗೀತದ ಸ್ವರ ಮೂಡುತಲಿರೇ
      ಅನುರಾಗದ ನವಪಲ್ಲವಿ ಎದೆ ಹಾಡುತಲಿರೇ
ಹೆ:  ಹಣ್ಣಾದೆನು ಹೆಣ್ಣಾದೆನು ನಸುಸಾಚಿಕೆ ಬರೇ
      ನಿನ್ನ ಆಸೆಯು ನನ್ನ ಆಸೆಯು  ಜೊತೆಯಾಗುತಲಿರೇ
ಗಂ:  ನಿನ್ನ ಚಲುವಿನಲೀ, ನಿನ್ನ ಒಲವಿನಲೀ, ಹುಸಿ ನಗುವಿನಲೀ, ಮೃದು ನುಡಿಗಳಲೀ
ಹೆ:  ಸಿಹಿ ಜೇನಿನ ಸವಿ ಕಂಡೆನು ನಿನ್ನ ನೋಡುತಲಿರೇ

ಜೊ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ

ಹೆ:  ಉಲ್ಲಾಸದೀ ತಂಗಾಳಿಯು ತನು ಸೋಕುತಲಿರೇ
      ಬಿಳಿಮೋಡವು ನಸುಗೆಂಪಿನ ರಂಗಾಗುತಲಿರೇ
ಗಂ:  ಸಂತೋಷದ ಉಯ್ಯಾಲೆಯು ತೂಗಾಡುತಲಿರೇ
      ಮಧುಮಾಸದ ನೆನಪಾಯಿತು ಹಿತವಾಗುತಲಿರೇ
ಹೆ:  ಮಾಮರಗಳಲೀ, ಹಸಿರೆಲೆಗಳಲೀ, ಮನತಣಿಸುತಲೀ, ಸುಖತುಂಬುತಲೀ
ಗಂ:  ಮರಿಕೋಗಿಲೆ ಹೊಸರಾಗದ ಧನಿ ಮಾಡುತಲಿರೇ

ಹೆ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
ಗಂ:  ನೆನೆಯಲು ಕಾಮನ ಸುಮಬಾಣನ ಅದೇ ದಿನ
ಹೆ:  ಕುಣಿಯಿತು ಮನ, ತಣಿಸುತ ನನ್ನಾ
ಗಂ:  ನಯನದಿ ನಯನ ಬೆರೆತಾ ಕ್ಷಣ
ಹೆ:  ನಯನದಿ ನಯನ ಬೆರೆತಾ ಕ್ಷಣ