Showing posts with label Mojugara_sogasugara. Show all posts
Showing posts with label Mojugara_sogasugara. Show all posts

Sunday, 23 April 2017

Yaramma Ivanu Nasheya Huduga song lyrics

ಚಿತ್ರ: ಮೋಜುಗಾರ ಸೊಗಸುಗಾರ (೧೯೯೫/1995)
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ಮನು, ಮಂಜುಳಾ ಗುರುರಾಜ್

ಯಾರಮ್ಮ ಇವನು ನಶೆಯ ಹುಡುಗ
ಯಾರಮ್ಮ ಇವಳು ನಶೆಯ ಹುಡುಗಿ
ಚೆಲುವಿದೆ ಗೆಲುವಿದೆ ಒಲವಿನ ಅಮಲಿದೆ
ಲತೆಇದೆ ಸುಮವಿದೆ ಪ್ರಣಯದ ಮಧುವಿದೆ
ಯಾರಮ್ಮ ಇವಳು ನಶೆಯ ಹುಡುಗಿ
ಯಾರಮ್ಮ ಇವನು ನಶೆಯ ಹುಡುಗ

ಹೇ ತುಂಟ, ಬಿಡಿಸೊ ಈ ಒಗಟ
ಹುಟ್ಟಿದರೂ ದೇಹವಿಲ್ಲ, ದಕ್ಕಿದ ಮೇಲೂನು ತೃಪ್ತಿ ಇಲ್ಲ
ಹೇ ತುಂಟಿ, ಕೊಡಲೆ ಒಣ ಶುಂಠಿ
ಹುಟ್ಟುವುದು ಪ್ರೀತಿಯಮ್ಮ, ಆಸೆಗಳ ಹೊಟ್ಟೆ ತುಂಬದಮ್ಮ

ಯಾರಮ್ಮ ಇವಳು ನಶೆಯ ಹುಡುಗಿ
ಯಾರಮ್ಮ ಇವನು ನಶೆಯ ಹುಡುಗ

ಬಾ ಹತ್ತಿರ, ಹೇಳು ನೀ ಉತ್ತರ
ಕೂಡಿದರೆ ಓಡುವುದು, ಪ್ರೇಮಿಗಳ ವೈರಿ ಯಾವುದದು
ಆ ವಿರಹ, ವಿರಹ ಕಹಿ ಬರಹ
ವಿರಹವ ಕೂಗದಿರು, ಅದರ ಮಾತಿಲ್ಲಿ ಆಡದಿರು

ಯಾರಮ್ಮ ಇವನು ನಶೆಯ ಹುಡುಗ
ಯಾರಮ್ಮ ಇವಳು ನಶೆಯ ಹುಡುಗಿ
ಚೆಲುವಿದೆ ಗೆಲುವಿದೆ ಒಲವಿನ ಅಮಲಿದೆ
ಲತೆಇದೆ ಸುಮವಿದೆ ಪ್ರಣಯದ ಮಧುವಿದೆ
ಯಾರಮ್ಮ ಇವಳು ನಶೆಯ ಹುಡುಗಿ
ಯಾರಮ್ಮ ಇವನು ನಶೆಯ ಹುಡುಗ