Showing posts with label Yava Hu Yara Mudigo. Show all posts
Showing posts with label Yava Hu Yara Mudigo. Show all posts

Monday, 10 April 2017

Yava Hu Yara Mudigo Kannada Song Lyrics

Yava Hu Yara Mudigo Kannada Song Lyrics


ಯಾವ ಹೂವು ಯಾರ ಮುಡಿಗೊ
ಹಾಡು: ಯಾವ ಹೂವು ಯಾರ ಮುಡಿಗೊ /
ಚಿತ್ರ: ಬೆಸುಗೆ  (1976)
ಸಾಹಿತ್ಯ: ಶ್ಯಾಮಸುಂದರ್ ಕುಲಕರ್ಣಿ
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಎಸ್. ಪಿ. ಬಾಲಸುಬ್ರಹ್ಮಣ್ಯಂ

ಯಾವ ಹೂವು ಯಾರ ಮುಡಿಗೊ.. ಯಾರ ಒಲವು ಯಾರ
ಕಡೆಗೊ...
ಯಾವ ಹೂವು ಯಾರ ಮುಡಿಗೊ.. ಯಾರ ಒಲವು ಯಾರ
ಕಡೆಗೊ...
ಇಂಥ ಪ್ರೇಮದಾಟದೆ ಯಾರ ಹೃದಯ ಯಾರಿಗೋ..
ಯಾವ ಹೂವು ಯಾರ ಮುಡಿಗೊ.. ಯಾರ ಒಲವು ಯಾರ
ಕಡೆಗೊ...
ಮುಖದಿ ಒಂದು ಭಾವನೆ.. ಕಣ್ಣಲೇನೋ ಕಾಮನೆ..
ಮುಖದಿ ಒಂದು ಭಾವನೆ..ಎ.. ಕಣ್ಣಲೇನೋ ಕಾಮನೆ..ಎ..
ಒಂದು ಮನದ ಯೋಚನೆ..ಎ.. ಒಂದು ಮನಕೆ ಸೂಚನೆ..ಎ..
ಯಾರೂ ಅರಿಯಲಾರಲು(ರು)...
ಯಾರ ಪಾಲು ಯಾರಿಗೋ.. ಯಾ..ರಿಗೋ...
ಯಾವ ಹೂವು ಯಾರ ಮುಡಿಗೊ.. ಯಾರ ಒಲವು ಯಾರ
ಕಡೆಗೊ...
ಒಂದು ಸುಮವು ಅರಳಿತು.. ದುಂಬಿಯನ್ನು ಒಲಿಸಿತು..
ಒಂದು ಸುಮವು ಅರಳಿತು..ಉ.. ದುಂಬಿಯನ್ನು ಒಲಿಸಿತು..
ಮೋಹಪಾಶ ಎಸೆಯಿತು.. ಒಂದು ಪಾಠ ಕಲಿಸಿತು..
ಇಂಥ ಪಾಠ ಕಲಿಸಲು.. [ಹ..ಹ..] ಗುರುವು ಯಾರು ಯಾರಿಗೋ...ಓ..
ಯಾರಿಗೋ...
ಯಾವ ಹೂವು ಯಾರ ಮುಡಿಗೊ.. ಯಾರ ಒಲವು ಯಾರ
ಕಡೆಗೊ...
ಎಂದೋ ಹುಟ್ಟಿದಾಸೆಯು... ಇಂದು ಮನವ ತಟ್ಟಿತು..
ಎಂದೋ ಹುಟ್ಟಿದಾಸೆಯೂ.. ಇಂದು ಮನವ ತಟ್ಟಿತು..
ಮನದ ಕದವ ತೆರೆಯಲು.. ಬೇರೆ ಗುರಿಯ ಮುಟ್ಟಿತು..
ಯಾರು ಹೇಳಬಲ್ಲರು..ಉ..
ಯಾರ ಪಯಣ ಎಲ್ಲಿಗೋ... ಎಲ್ಲಿ..ಗೋ...
ಯಾವ ಹೂವು ಯಾರ ಮುಡಿಗೊ.. ಯಾರ ಒಲವು ಯಾರ
ಕಡೆಗೊ...
ಇಂಥ ಪ್ರೇಮದಾಟದೆ ಯಾರ ಹೃದಯ ಯಾರಿಗೋ..
ಯಾವ ಹೂವು ಯಾರ ಮುಡಿಗೊ.. ಯಾರ ಒಲವು ಯಾರ
ಕಡೆಗೊ...