ಚಿತ್ರ: ರಸಿಕ (೧೯೯೪/1994)
 ಸಾಹಿತ್ಯ: ಹಂಸಲೇಖ
 ಸಂಗೀತ: ಹಂಸಲೇಖ
 ಹಾಡಿದವರು: ಚಿತ್ರಾ
 
 ಕಲೆಗಾರ ಆ ದೇವರು ಒಬ್ಬನೆ ಕಲೆಗಾರ
 ಮಾಮರಗಳ ಮಾಡಿದ ಕೋಗಿಲೆಗಳ ನೀಡಿದ
 ಪಂಚಮಸ್ವರ ಕೇಳುತ ದೇವರೆ ತಲೆದೂಗಿದ
 
 ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
 ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
 ನನ್ನ ಜೀವ, ನನ್ನ ಭಾವ, ಕಲಾದೇವನಿಗೆ ಸಿಂಗರಿಸೋ ಹೂಗಳು
 ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
 ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
 
 ಮಾಮರಗಳ ಮಾಡಿದ ಕೋಗಿಲೆಗಳ ನೀಡಿದ
 ಪಂಚಮಸ್ವರ ಕೇಳುತ ದೇವರೆ ತಲೆದೂಗಿದ
 ಕಲೆಯಲಿ ಅರಳುವ ಈ ಹೂವಿಗೆ
 ಒಲವಿನ ಹೃದಯದ ಪನ್ನೀರಿದೆ
 ನನ್ನೆದೆ ಪಲುಕುವ ಈ ರಾಗಕೆ
 ಪ್ರೀತಿಸಿ ಪಡೆದವನ ಶೃತಿ ಇದೆ
 ಈ ಹಾಡಲಿ ಅಪಸ್ವರವೆಲ್ಲಿದೆ
 ಈ ಬಾಳಲಿ ಅಪಜಯವೆಲ್ಲಿದೆ
 ನನ್ನ ಜೀವ, ನನ್ನ ಭಾವ, ಕಲಾದೇವನಿಗೆ ಸಿಂಗರಿಸೋ ಹೂಗಳು
 
 ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
 ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
 ನನ್ನ ಜೀವ, ನನ್ನ ಭಾವ, ಕಲಾದೇವನಿಗೆ ಸಿಂಗರಿಸೋ ಹೂಗಳು
 ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
 ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
