Thursday, 23 February 2017

ಅವಳ ಹೆಜ್ಜೆ

ಚಿತ್ರ :ಅವಳ ಹೆಜ್ಜೆ
ಸಂಗೀತ:ರಾಜನ್ ನಾಗೇಂದ್ರ
ಸಾಹಿತ್ಯ:ಚಿ.ಉದಯ್ ಶಂಕರ್
ನಿರ್ದೇಶನ:ಭಾರ್ಗವ
ಗಾಯಕರು:ಎಸ್.ಪಿ.ಬಾಲಸುಬ್ರಮಣ್ಯಂ

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಈ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ನಯನದಲಿ ಕಾಂತಿ ಇಲ್ಲಾ,ತುಟಿಗಳಲಿ ನಗುವೇ ಇಲ್ಲಾ,
ಸವಿಯಾದ ಮಾತನು ಇಂದೇಕೋ ಕಾಣೆನು.
ನಿನ್ನ ಮನಸು ನಾನು ಬಲ್ಲೆ,ನಿನ್ನ ವಿಷಯವೆಲ್ಲ ಬಲ್ಲೆ,
ನೀನೇನು ಹೇಳದೆ,ನಾನೆಲ್ಲಾ ಹೇಳಲೇ,
ಏನಿಂತ ನಾಚಿಕೆ,ಕಣ್ಣೀರು ಏತಕೆ.


ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ಈ ಗುಡಿಯ ದೇವಿ ನೀನು,ಈ ತನುವಾ ಪ್ರಾಣ ನೀನು,
ಬಾಳಲ್ಲಿ ನೆಮ್ಮದಿ,ನಿನ್ನಿಂದ ಕಂಡೆನು,
ನೀ ಅಳಲು ನೋಡಲಾರೆ,ನೀ ಇರದೇ ಬಾಳಲಾರೆ,
ನನ್ನಲ್ಲಿ ಕೋಪವೇ,ನಾ ನಿನಗೆ ಬೇಡವೇ,
ನೀ ದೂರವಾದರೆ ನನಗಾರು ಆಸರೆ........


ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಸೋತಿದೆ ಈ ಮೊಗವೇಕೆ,......
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

ನೆರಳನು ಕಾಣದ ಲತೆಯಂತೆ,ಬಿಸಿಲಿಗೆ ಬಾಡಿದ ಹೂವಂತೆ,
ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ, ಏನು ನಿನ್ನ ಚಿಂತೆ,ಹೇಳೇ ನನ್ನ ಕಾಂತೆ,

Appa I Love You Pa

ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದೂಗಾರ ಅಪ್ಪ

ಹಗಲು ಬೆವರಿನ ಕೂಲಿಕಾರ
ರಾತ್ರಿ ಮನೆಯಲಿ ಚೌಕಿದಾರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ
ಗದರೋ ಮೀಸೆಕಾರ ಮನಸೇ ಕೋಮಲ
ನಿನ್ನ ಹೋಲೊ ಕರ್ಣ ಯಾರಿಲ್ಲ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದೂಗಾರ ಅಪ್ಪ

ಬೆರಳನ್ನು ಹಿಡಿದರೆ ವಿಶ್ವಾಸವು ಬೆಳೆವುದು
ಹೆಗಲಲ್ಲಿ ಕುಳಿತರೆ ಕುತೂಹಲ ತಣಿವುದು
ನಾನು ಓದೋ ಪಾಠದಲಿ ಅದು ಯಾಕೆ ನಿನ್ನ ಹೆಸರಿಲ್ಲ ನಿನ್ನ ಹಾಗೆ ಯಾಕೆ  ಯಾರಿಲ್ಲ
ನೀನು ಇರುವ ಧೈರ್ಯದಲ್ಲಿ ಯಾರೊಂದಿಗೂ ನಾ ಸೋಲಲ್ಲ ನಿನ್ನ ಪ್ರೀತಿ ಮುಂದೆ ಏನಿಲ್ಲ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ

ನಿನ್ನ ಅಂಗಿ ಬೆವರಲಿ ನಮ್ ಅನ್ನ ಅಡಗಿದೆ
ಮಗಳೇ ಅನ್ನೋ ಮಾತಿನಲಿ ನಿನ್ನ ಮಮತೆ ತಿಳಿದಿದೆ
ತಾಯಿ ಮಾತ್ರ ತವರಲ್ಲ ತಂದೆ ಇರದೇ ತಾಯಿಲ್ಲ ಆಕಾಶದಂತೆ ನಿನ್ನ ಮನಸ್ಸಪ್ಪ
ನಾನು ಎಂದೂ ಹೇಳಿಲ್ಲ ಯಾಕಂತ ನಂಗು ತಿಳಿದಿಲ್ಲ ನೀನು ಅಂದ್ರೆ ಅಚ್ಚು ಮೆಚ್ಚಪ್ಪ
ಅಪ್ಪ  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಅಪ್ಪ…  ಐ ಲವ್ ಯೂ ಪಾ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ

Asura

ಕರುಣೆ ಇಲ್ಲದ ಧರಣಿಯ ಕಂಡೆ, ಕೆಂಡವ ಕಾರುವ ಗಗನವ ಕಂಡೆ,
ವಿಷವನು ತೂರುವ ಗಾಳಿಯ ಕಂಡೆ, ಎದೆಯನು ಉರಿಸುವ ಬೆಂಕಿಯ ಕಂಡೆ,
ಸುಳಿಯನು ಮುಳುಗಿಸೋ ನೀರನು ಕಂಡೆ, ಬೊಗಸೆಯ ನೀರಲು ಸುಳಿಯನು ಕಂಡೆ,
ಹೂವಿನ ಎದೆಯೆಲಿ ಮುಳ್ಳನು ಕಂಡೆ, ಹಿಮದಲಿ ಜ್ವಾಲಮುಖಿಯನು ಕಂಡೆ,
ರೆಕ್ಕೆಯ ಬಿಚ್ಚದ ಹಕ್ಕಿಯ ಕಂಡೆ, ಹಾಡಲು ಬಾರೆದ ಕೋಗಿಲೆ ಕಂಡೆ,
ಮುತ್ತೆ ಇಲ್ಲದ ಕಡಲನು ಕಂಡೆ, ಗಂಧವ ಚಲ್ಲದ ಹೂ ಗಳ ಕಂಡೆ,
ಜೇನನು ಹೀರದ ದುಂಬಿಯ ಕಂಡೆ, ದಿನಗಳ ನುಂಗುವ ಕ್ಷಣಗಳ ಕಂಡೆ,
ದಿಕ್ಕುಗಳಿಲ್ಲದ ದಾರಿಯ ಕಂಡೆ, ದಾರಿಗಳಿಲ್ಲದ ದಿಕ್ಕನು ಕಂಡೆ,
ಮೋಡದ ಹನಿಯಲು ಬೆವರನು ಕಂಡೆ, ಗಾಳಿಯ ಎದೆಯಲು ನಡುಕವ ಕಂಡೆ,
ಮಳೆಯ ಬಿಲ್ಲಲು ಕೊಳೆಯನು ಕಂಡೆ, ಇಬ್ಬನಿ ಕಣ್ಣಲು ಕಂಬನಿ ಕಂಡೆ,
ಗರ್ಭದ ಒಳಗೂ ಅಳುವನು ಕಂಡೆ, ಕೆಚ್ಚಲ ಹಾಲಲು ವಿಷವನು ಕಂಡೆ,
ಕಬ್ಬಿನ ಎದೆಯಲಿ ಬೇವನು ಕಂಡೆ, ನಗುವಿನ ಹೆಸರಲಿ ನೋವನು ಕಂಡೆ,
ಸಂಬಂಧಗಳಲಿ ಬಂಧನ ಕಂಡೆ, ಬಂಧನ ಬಿಡಿಸುವ ಕಂಪನ ಕಂಡೆ,
ಜೀವನಕೊಂದು ಯೌವ್ವನ ಕಂಡೆ , ಯೌವ್ವನಕೊಂದು ಜೀವನ ಕಂಡೆ,
ಚಪ್ಪಾಳೆಗಳಲ್ಲು ಸಿಡಿಲನು ಕಂಡೆ, ಬೆವರಿಳಿಸುವ ಬೆಳದಿಂಗಳ ಕಂಡೆ,
ಅಬಡುಗಚ್ಚುವ ನಿದ್ರೆಯ ಕಂಡೆ, ಪಲ್ಲವಿ ಇಲ್ಲದ ಚರಣವ ಕಂಡೆ,
ಗಂಡೆದೆಯಲ್ಲು ಗ್ರಹಣವ ಕಂಡೆ, ಸ್ವತಂತ್ರವಿಲ್ಲದ ಗಾಳಿಯ ಕಂಡೆ,
ಬಾನೆ ಇಲ್ಲದ ಬಾನಾಡಿ ಕಂಡೆ, ಜಾತಕ ವಿಲ್ಲದ ಕನಸನು ಕಂಡೆ,
ಜ್ನ್ಯಾಪಕ ವಿಲ್ಲದ ನೆನಪನು ಕಂಡೆ, ತೂಕವೇ ಇಲ್ಲದ ಮಾತನು ಕಂಡೆ,
ಸಿಡಿಲೆರೆಯುವ ತಿರುಮೌನವ ಕಂಡೆ, ಚೆಲುವಿನ ಮುಖದಲಿ ಕುರೂಪ ಕಂಡೆ,
ಒಲವಿನ ವ್ಯಾಘ್ರ ಸ್ವರೂಪ ಕಂಡೆ, ರೂಚಿಗಳೇ ಇಲ್ಲದ ಊಟವ ಕಂಡೆ,
ಅಭಿರುಚಿ ಕಾಣದ ಪಾಠವ ಕಂಡೆ, ಅಳುವ ವಯಸಲಿ ಆಸೆಯ ಕಂಡೆ,
ಆಡೋ ವಯಸಲಿ ಅವಲತಿ ಕಂಡೆ, ಕಲಿಯೋ ವಯಸಲಿ ಬಲಿಯನು ಕಂಡೆ,
ಒಂಟಿ ತನದಲಿ ಗಾಯವ ಕಂಡೆ, ಜಂಟಿ ತನದಲಿ ಮಾಯಾವ ಕಂಡೆ,
ನವಿಲು ಕಾಣದ ಗರಿಯನು ಕಂಡೆ, ಗುರುವೇ ಇಲ್ಲದೆ ಗುರಿಯನು ಕಂಡೆ,
ಸೂರ್ಯನ ಕನ್ನಲು ತೇವವ ಕಂಡೆ, ಇರುಳಲಿ ಬೆಳಗಿನ ಜಾವವ ಕಂಡೆ,
ರಾಜರು ಕಟ್ಟಿದ ಕೋಶವ ಕಂಡೆ, ಕೋಶವ ಮುರಿಯುವ ಶಾಸನ ಕಂಡೆ,
ದಾಸರು ಕಾಣದ ಪದವನ್ನು ಕಂಡೆ, ಬಡತನಕಿಂತಲೂ ಬಡತನ ಕಂಡೆ,
ಧರ್ಮರಾಯನಲು ಸುಳ್ಳನು ಕಂಡೆ, ಅಂಜನೆಯನಲು ಅಹಂ ಮ್ಮು ಕಂಡೆ,
ತಾಯಿಮಾತಲು ತಪ್ಪನು ಕಂಡೆ, ಭುವನೆಶ್ವರಿಯಲು ಬೇಧವ ಕಂಡೆ,
ನೆತ್ತರು ತುಂಬಿದ ಅನ್ನವ ಕಂಡೆ, ಹುಟ್ಟು ಸಾವಿನ ನಂಟನು ಕಂಡೆ,
ಧಗೆಯಲಿ ಚಿಗುರಿನ ಸ್ಪರ್ಶ ಕಂಡೆ, ಹಗೆಯಲ್ಲಿ ಸಲ್ಲದ ಹರುಷ ಕಂಡೆ,
ಸಹಿಸುವ ಆಸರೆಯೊಂದು ಕಂಡೆ, ದಹಿಸುವ ಧಮನಿಗಳನ್ನು ಕಂಡೆ,
ಸ್ನೇಹದ ಕೋಟಿ ಪವಾಡ ಕಂಡೆ, ದ್ರೋಹದ ಹೊಸ ಮುಖವಾಡ ಕಂಡೆ,
ಇಳಿಸಲು ಆಗದ ಹೊರೆಯನು ಕಂಡೆ, ಹಣೆ ಬರಹಕೆ ಪ್ರತಿ ಹೊಣೆಯನು ಕಂಡೆ,
ಛಲದ ಮನಸಿಗೆ ಚಾವಡಿ ಕಂಡೆ, ಮನಸಾ ಕುಕ್ಕಿಸೋ ಲೇವಡಿ ಕಂಡೆ,
ಸೋಲುಗಳಲ್ಲೇ ಗೆಲುವನು ಕಂಡೆ, ಗೆಲುವಲೆ ಸೋಲಿನ ರುಚಿಯನು ಕಂಡೆ,
ಕಣ್ಣಗಳ ತಿವಿಯುವ ಕನ್ನಡಿ ಕಂಡೆ, ಬದುಕನೇ ಕಲುಕುವ ಮುನ್ನುಡಿ ಕಂಡೆ,
ಇಳಿಜಾರಿನಲ್ಲ ದಿಣ್ಣೆಯ ಕಂಡೆ, ದಿಣ್ಣೆಯಲಿ ಇಳಿಜಾರನು ಕಂಡೆ,
ಹೆಣವನ ದಾರಿಯ ಬೆಜವ ಕಂಡೆ, ಮೂಗನ ಎದೆಯಲು ರಾಗವ ಕಂಡೆ,
ಮೂರ್ಖನ ಕೈಯಲ್ಲಿ ಮಾರ್ಗವ ಕಂಡೆ, ಕಾಲದ ಕೈಯಲ್ಲಿ ಕಂಡ್ಗವ ಕಂಡೆ,
ಜೊತೆಯಲಿ ಬಾಳುವ ಕಥೆಗಳ ಕಂಡೆ, ಕಥೆಯಾಗಿರು ಜೊತೆಯ ಕಂಡೆ,
ಜೀವನದೂದಕೂ ನೋವನೆ ಕಂಡೆ, ಆದರು ಪ್ರೀತಿಯು ಕಾಣಲಿಲ್ಲ,
ಭಯಸಿದ್ದೊಂದು ಸಿಗಲಿಲ್ಲ, ಸತ್ತು ಬದುಕೋ ಬದುಕೆಕಿನ್ನು, ಪ್ರೀತಿಸೊ
ಮರಣ ಕಂಡೇ...