Tuesday, 4 April 2017

ಮಾತಾಡು ಸಾಕು ಮೌನ ಬಿಸಾಕು

ಮಾತಾಡು ಸಾಕು ಮೌನ ಬಿಸಾಕು
ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ
ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ
ತಲೆ ಮೇಲೆ ನೂರು ತಲೆ ಬೀಳಲಿ
ಭೂಮೀನೆ ಚೂರು ಚೂರಾಗಲಿ
ಪ್ರೀತೀಲಿ ನಾನು ನರ ರಾಕ್ಷಸ
ನರ ನಾಡಿ ಎಲ್ಲ ನಿನಗೆ ವಶ
ಯಾಕೆ ಹೀಗ್ಗೆ ಚಿಟ್ಟೆ ಆದೆ..ಮರೆಯಾಗಿ ಹೋದೆ
I Love You I Love You

ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ
ಮಚ್ಚಲ್ಲಿ ಮನಸು ಹೊಡೆದಾಕಿದೆ
ಹುಚ್ಚಾಗಿ ನಾನು ಅಲೆದಾಡಿದೆ
ನೀನೊಂದು ಮಾಯಾ ಮುತ್ತು ಕಣೆ
ಹಿಡಿಯೋದು ನನಗೆ ಗೊತ್ತು ಕಣೆ
ಯಾಕೆ ಹೀಗೆ ಚಿಟ್ಟೆ ಆದೆ ಮರೆಯಾಗಿ ಹೋದೆ
I Love You I Love You

ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ

Monday, 3 April 2017

ನೀನೇ ರಾಮ ನೀನೇ ಶಾಮ

ನೀನೇ ರಾಮ ನೀನೇ ಶಾಮ
ನೀನೇ ಅಲ್ಲಾ ನೀನೇ ಯೇಸು
ನೀನೇ ಕರ್ಮ ನೀನೇ ಧರ್ಮ
ನೀನೇ ಮರ್ಮ ನೀನೇ ಪ್ರೇಮ
ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ
ಕಣಕಣ ಕಣದೊಳಗೆ ಕುಳಿತಿರುವೆ

ಮುಕುಂದ ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ

ನೀನೇ ರಾಮ ನೀನೇ ಶಾಮ
ನೀನೇ ಅಲ್ಲಾ ನೀನೇ ಯೇಸು

ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ ಬೆವರಲಿರುವೆ ನಾನು
ಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನು
ಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳ ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ ಇರೋ ಮಾರ್ಗವು ಸರಳ
ನನ್ನ ಸೇರಲು ದಾರಿಯು ನೂರು
ಅದಕೇತಕೆ ಈ ತಕರಾರು
ಅಣು ಅಣು  ಅಣು ಒಳಗೆ  ಕುಳಿತಿರುವೆ

ಮುಕುಂದ ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ

ಯುಗದಯುಗದ ಮೃಗದ ಖಗದ ಉಸಿರಲಿರುವೆ ನಾನು
ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನು
ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು
ನನಗೂ ನಿನಗೂ ನಡುವೆ ನೀನೇ ಗೋಡೆ ಕಟ್ಟಿದವನು
ನಾ ಇರುವೆ ಒಳಗೆ ನೀ ಹುಡುಕಿದೆ ಹೊರಗೆ
ಬಿಚ್ಚು ಮದದ ಉಡುಗೆ ನಡೆ ಬೆಳಕಿನ ಕಡೆಗೆ

ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ಕಣಕಣ ಕಣದೊಳಗೆ ನಾನಿರುವೆ

ಮುಕುಂದ ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ

ನೀನೇ ರಾಮ ನೀನೇ ಶಾಮ
ನೀನೇ ಆಲೇ ನೀನೇ ಎಲ್ಲ

Sunday, 2 April 2017

E Sundara Beladingala Song Lyrics

E Sundara Beladingala Song Lyrics


ಚಿತ್ರ: ಅಮೃತ ವರ್ಷಿಣಿ
ಗಾಯನ: ಎಸ್ ಪಿ ಬಾಲು, ಚಿತ್ರ
ನಟರು: ರಮೇಶ್, ಸುಹಾಸಿನಿ, ಶರತ್ ಬಾಬು

ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ ನನ್ನ ನಿನ್ನ ನಡುವಿನಲ್ಲಿ
ಈ ಸುಂದರ ಬೆಳದಿಂಗಳ ಈ ಕಂಪಿನ ಅಂಗಳದಲಿ ಹೃದಯದ ತಾಳದಲಿ
ಮೌನವೇ ರಾಗವು ಉಸಿರೇ ಭಾವವು ನಿನ್ನ ಈ ನಗೆಯ ಸವಿ ಶೃತಿಯಲ್ಲಿ ಓಹೋ.....

ದಿನ....ದಿನ.......ಕ್ಷಣ ಕ್ಷಣ ಚಿನ್ನ ನನ್ನ ನಿನ್ನ ಹಾಡಲಿ ಕುಣಿಸಿರುವೆ
ಮನ ಮನ ಮದೋತ್ತರ ಕಣ್ಣ ಅಂಚಲೇ ನಗಿಸಿರುವೆ
ಒಲವೆ........ಒಲವೆ ನಿನ್ನ ನಲಿವೊಂದೆ ವರವೆನ್ನುತ ನಾ ನಲಿವೆ
ಒಲವೆ ನಿನ್ನ ಗೆಲುವೊಂದೆ ಬಲವೆನ್ನುತ ನಾ ಬೆರೆವೆ

ನನ್ನ ಎದೆಯೊಳಗಿನ ಸ್ವರ ನುಡಿಸುವ ಕೈಗಳೇ ನಿನ್ನದು
ನಿನ್ನ ಕೈಗಳ ಜೊತೆ ಕೈ ಸೇರಿಸಿ ಜಗವ ಕೊಳ್ಳೋ ಮನಸು ನನ್ನದು

ಸಮ....ಸಮ......ಸರಿಗಮ ಸಮಾಗಮ ಇಂತ ವಿಸ್ಮಯ ಇದೆ ಮೊದಲು
ಘಮ ಘಮ ಎದೆಯೆಲ್ಲ ಇನ್ನು ಮಾತು ಬರಿ ತೊದಲು
ಉಸಿರೇ.....ಉಸಿರೇ ನಿನ್ನ ಉಸಿರಾಗಿ ಈ ಉಸಿರ ಬರೆದಿರುವೆ 
ನಮ್ಮ ಹಾಡಿಗೆ ಹೆಸರಾಗಲಿ ಕಾವೇರಿ ಕಲರವವೇ...
ನಿನ್ನ ನೆರಳಿನ ಸನಿಸನಿಹಕೆ ನನ್ನ ಕೊರಳಿನ ದನಿ ಹರಿಸಿ ಹರಿಸಿ
ನಿನ್ನ ಕನಸಿಗೆ ಹೊಸ ಹೆಸರನು ಬರೆಸಿ ಮೆರೆಸಿ ನಲಿಸಲಿರುವೆ......ಈ ಸುಂದರ......