Tuesday, 4 April 2017

Neenu Neene Illi Naanu Naane Song Lyrics

Neenu Neene Illi Naanu Naane Song Lyrics



ಚಿತ್ರ : ಗಡಿಬಿಡಿಗಂಡ (1993)
ಸಾಹಿತ್ಯ : ನಾದಬ್ರಹ್ಮ ಹಂಸಲೇಖ...
ಗಾಯಕರು : ಡಾ" ಎಸ್.ಪಿ.ಬಿ....
-----------------------------------------------------------
ಹ್ಮ್...... ಹಯ್ಯೋ....!
ನೀನು ನೀನೇ ಇಲ್ಲಿ ನಾನು ನಾನೇ ...
ನೀನು ನೀನೇ ಇಲ್ಲಿ ನಾನು ನಾನೇ...
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ...

ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ....

ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ

ನಾರದ ಶ್ರುತಿ ನೀಡಿ ತುಂಬುರ ಸ್ಮೃತಿ ಹಾಡಿ,
ಕೈಲಾಸವೆಲ್ಲ ನಾದೋಪಾಸನೆಯಾಗಿ....
ನಾರದ ಶ್ರುತಿ ನೀಡಿ ತುಂಬುರ ಸ್ಮೃತಿ ಹಾಡಿ,
ಕೈಲಾಸವೆಲ್ಲ ನಾದೋಪಾಸನೆಯಾಗಿ....
ಷಣ್ಮುಖಪ್ರಿಯ ರಾಗ..... ಷಣ್ಮುಖಪ್ರಿಯ ರಾಗ
ಮಾರ್ಗ ಹಿಂದೋಳವಾಗಿ, ನಡೆಸಿದೆ ದರ್‌ಬಾರು ರಾಗ..
ಹಾಡುವೆಯಾ ಪಲ್ಲವಿಯಾ..
ಕೇಳುವೆಯಾ, ಮೇಲೆ ಏಳುವೆಯಾ...

ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ....
ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ....

ಈ ಸ್ವರವೆ ವಾದ , ಈಶ್ವರ ನಿನಾದ....
ಜತಿಗತಿಜ ಕಾಗುಣಿತ ವೇದ....
ಶಿವಸ್ಮರಣೆ ಸಂಗೀತ ಸ್ವಾದ ...
ಗಮಕಗಳ ಪಾಂಡಿತ್ಯ ಶೋಧ....
ಸುಮತಿಗಳ ಸುಜ್ಞಾನ ಬೋಧ ....
ಪಲುಕುಗಳ ವಿಚಾರಣೆ ,ಕ್ಷಮಾಪಣೆ ,ವಿಮೋಚನೆ....

ಗೆಲುವುಗಳ ಆಲೋಚನೆ ,ಸರಸ್ವತಿ, ಸಮರ್ಪಣೆ....
ನವರಸ ಅರಗಿಸಿ ಪರವಶ ಪಳಗಿಸಿ ಅಪಜಯ ಅಡಗಿಸಿ ಜಯಿಸಲು ಇದು ಶಕುತಿಯ ಯುಕುತಿಯ ಪರಮಾರ್ಥ....

ಗಣಗಣ ಶಿವಗಣ ನಿಜಗುಣ ಶಿವಮನ ನಲಿದರೆ ಒಲಿದರೆ ಕುಣಿದರೆ ಅದೆ ಭಕುತಿಯ ಮುಕುತಿಯ ಪರಮಾರ್ಥ....

ನೀನು ನೀನೇ ಇಲ್ಲಿ ನಾನು ನಾನೇ
ಸಾ ಸಮಗಸರೀ ನಿಸಸನಿದ ದದನಿದಮ ಮಗಮದಾದಾದ್ದ ದಮದ ನೀನಿ ದದಾನಿ ಸಮಾಗ ನಿದದನಿ ದಮಪಸ
ನೀನು ನೀನೇ ಇಲ್ಲಿ ನಾನು ನಾನೇ...

ದನಿಸಗ ನಿಸ್ಸ ದನಿಸಗ ನಿಸಗಮ ಗಮ
ನಿಸಗಮ ಗಾಗಾ ಮಾಮಾ
ಗಸಗಸಗಸಗಸ ಮಗಮಗಮಗಮಗ
ಸಸಾ ಮಗ ಮಗ ಮಗ ಸನಿದಮಗಸ
ನೀನು ನೀನೇ ಇಲ್ಲಿ ನಾನು ನಾನೇ...

ಮಗಮಗಮಗ ಗಮಗಮಗಮಗ
ದಮದಮದಮ ಮನಿಸನಿಸನಿಸ
ಸಸಸ ಸಾಸ ಸಸ ಸಗಸನಿ ನಿಸನಿದ
ಸಸಾಸ ನಿದನಿ ಸಾನಿದಮದಮಗಸ
ಸಗಮಗ ಗಮದನಿ ಮದನಿಸ ಗಸಸನಿಸ ದನಿ
ಮದ ಮದನಿಸದ
ನೀನು ನೀನೇ ಇಲ್ಲಿ ನೀನು ನೀನೇ...

ಸಾ ಪಾ ಸಾ
ಸನಿಪಮಗಸನಿಪ ಸಾ
ಸಗಮಪಗ ಸಗಮಪಮಗ ಸಗಮಪ ಮಪಮಪ ನಿನಿಪಮಪಾ
ಸರಿಗಪದಪಗಪ ದಾ ಸದದಾ
ದಪಗಪಗರಿ ಸಸರಿಗರಿ
ಸಾರಿಮಪನಿಸ ಸರಿಮಪನಿಸ
ನಿಸರಿಪಮ ರಿಪಮ ರಿಸರಿ
ಸಾ ಮಸ ಮಸ ಮಪದಸರಿ ರೀ ಸಾ ದಪಮ
ಮಪದದ್ದಾಪ ಮಪದದ್ದಾಪ ಮಪದದ್ದಾಪಮ ಪಸದಾ
ಪಮಪದಸಾ ಪಮಪದರೀ
ಸರಿರಿ ಸರಿರಿ ಸರಿರಿ ಸರಿರಿ ಸರಿಸ ದಸರಿ ದಸರಿ ಪದಸರಿ ರಿಮಪದಸರಿ ರಿಮಪದಸರಿ ಸರಿಮಪದಸರಿ ಪನಿಸ ಗಪದ ರಿಮಪ ಸಗಮಗ ಸಮಗ ಸನಿದಮಗ
ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ.....

ಮಾತಾಡು ಸಾಕು ಮೌನ ಬಿಸಾಕು

ಮಾತಾಡು ಸಾಕು ಮೌನ ಬಿಸಾಕು
ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ
ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ
ತಲೆ ಮೇಲೆ ನೂರು ತಲೆ ಬೀಳಲಿ
ಭೂಮೀನೆ ಚೂರು ಚೂರಾಗಲಿ
ಪ್ರೀತೀಲಿ ನಾನು ನರ ರಾಕ್ಷಸ
ನರ ನಾಡಿ ಎಲ್ಲ ನಿನಗೆ ವಶ
ಯಾಕೆ ಹೀಗ್ಗೆ ಚಿಟ್ಟೆ ಆದೆ..ಮರೆಯಾಗಿ ಹೋದೆ
I Love You I Love You

ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ
ಮಚ್ಚಲ್ಲಿ ಮನಸು ಹೊಡೆದಾಕಿದೆ
ಹುಚ್ಚಾಗಿ ನಾನು ಅಲೆದಾಡಿದೆ
ನೀನೊಂದು ಮಾಯಾ ಮುತ್ತು ಕಣೆ
ಹಿಡಿಯೋದು ನನಗೆ ಗೊತ್ತು ಕಣೆ
ಯಾಕೆ ಹೀಗೆ ಚಿಟ್ಟೆ ಆದೆ ಮರೆಯಾಗಿ ಹೋದೆ
I Love You I Love You

ಮಾತಾಡು ಸಾಕು ಮೌನ ಬಿಸಾಕು
ಹೋರಾಡುವ ಧಮ್ಮ್ ಇದೆ
ಹುಡುಕಾಡುವ ದಿಲ್ ಇದೆ

Monday, 3 April 2017

ನೀನೇ ರಾಮ ನೀನೇ ಶಾಮ

ನೀನೇ ರಾಮ ನೀನೇ ಶಾಮ
ನೀನೇ ಅಲ್ಲಾ ನೀನೇ ಯೇಸು
ನೀನೇ ಕರ್ಮ ನೀನೇ ಧರ್ಮ
ನೀನೇ ಮರ್ಮ ನೀನೇ ಪ್ರೇಮ
ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ನನಗೇನು ಹೆಸರಿಲ್ಲ ಹೆಸರಲ್ಲಿ ನಾನಿಲ್ಲ
ಕಣಕಣ ಕಣದೊಳಗೆ ಕುಳಿತಿರುವೆ

ಮುಕುಂದ ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ

ನೀನೇ ರಾಮ ನೀನೇ ಶಾಮ
ನೀನೇ ಅಲ್ಲಾ ನೀನೇ ಯೇಸು

ಗುಡಿಯ ಕಟ್ಟಿದ ಬಡವನೆದೆಯ ಗುಡಿಯಲ್ಲಿರುವೆ ನಾನು
ಬೆಳೆಯ ನಡುವೆ ರೈತ ಬಸಿದ ಬೆವರಲಿರುವೆ ನಾನು
ಕೆಲಸ ನಿನದೆ ಫಲವು ನಿನದೆ ಛಲದ ಒಡೆಯ ನೀನು
ಇದನು ಮರೆತು ನನಗೆ ನಮಿಸಿ ಶ್ರಮವ ಪಡುವೆ ನೀನು
ಬಿಡು ಮತಗಳ ಜಗಳ ಇದೆ ಕೆಲಸವು ಬಹಳ
ನನ್ನ ಒಲಿಸಲು ಮರುಳ ಇರೋ ಮಾರ್ಗವು ಸರಳ
ನನ್ನ ಸೇರಲು ದಾರಿಯು ನೂರು
ಅದಕೇತಕೆ ಈ ತಕರಾರು
ಅಣು ಅಣು  ಅಣು ಒಳಗೆ  ಕುಳಿತಿರುವೆ

ಮುಕುಂದ ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ

ಯುಗದಯುಗದ ಮೃಗದ ಖಗದ ಉಸಿರಲಿರುವೆ ನಾನು
ಕಡಲ ಅಲೆಯ ಮಳೆಯ ಹನಿಯ ಪರಮ ಅಣುವೆ ನಾನು
ಹೊಸದು ಹೊಸದು ಹೆಸರ ಹೊಸೆದು ಕರೆವೆ ನನ್ನ ನೀನು
ನನಗೂ ನಿನಗೂ ನಡುವೆ ನೀನೇ ಗೋಡೆ ಕಟ್ಟಿದವನು
ನಾ ಇರುವೆ ಒಳಗೆ ನೀ ಹುಡುಕಿದೆ ಹೊರಗೆ
ಬಿಚ್ಚು ಮದದ ಉಡುಗೆ ನಡೆ ಬೆಳಕಿನ ಕಡೆಗೆ

ನಿಮ್ಮ ಜೀವದ ಮಾಲಿಕ ನಾನು
ನಿಮ್ಮ ಪಾಲಿನ ಸೇವಕ ನಾನು
ಕಣಕಣ ಕಣದೊಳಗೆ ನಾನಿರುವೆ

ಮುಕುಂದ ಮುರಾರಿ ಮುಕುಂದ ಮುರಾರಿ
ಮುಕುಂದ ಮುರಾರಿ ಮುಕುಂದ ಮುರಾರಿ

ನೀನೇ ರಾಮ ನೀನೇ ಶಾಮ
ನೀನೇ ಆಲೇ ನೀನೇ ಎಲ್ಲ