Tuesday, 4 April 2017

ಯುಗ ಯುಗಾದಿ ಕಳೆದರೂ

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

                    ಹೊಂಗೆ ಹೂವ ತೊಂಗಳಲಿ,
                    ಭೃಂಗದ ಸಂಗೀತ ಕೇಳಿ
                    ಮತ್ತೆ ಕೇಳ ಬರುತಿದೆ.
                    ಬೇವಿನ ಕಹಿ ಬಾಳಿನಲಿ
                    ಹೂವಿನ ನಸುಗಂಪು ಸೂಸಿ
                    ಜೀವಕಳೆಯ ತರುತಿದೆ.

ವರುಷಕೊಂದು ಹೊಸತು ಜನ್ಮ,
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ.
ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ, ಒಂದೇ ಹರೆಯ
ನಮಗದಷ್ಟೇ ಏತಕೋ.

                    ನಿದ್ದೆಗೊಮ್ಮೆ ನಿತ್ಯ ಮರಣ,
                    ಎದ್ದ ಸಲ ನವೀನ ಜನನ,
                    ನಮಗೆ ಏಕೆ ಬಾರದು?
                    ಎಲೆ ಸನತ್ಕುಮಾರ ದೇವ,
                    ಎಲೆ ಸಾಹಸಿ ಚಿರಂಜೀವ,
                    ನಿನಗೆ ಲೀಲೆ ಸೇರದೂ.

ಯುಗ ಯುಗಗಳು ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ದೈನಂದಿನ ಪ್ರಾರ್ಥನಾ ಶ್ಲೋಕಗಳು:

ದೈನಂದಿನ ಪ್ರಾರ್ಥನಾ ಶ್ಲೋಕಗಳು:

ಶ್ರೀ ಗಣಪತಿ ಶ್ಲೋಕ:

ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ |
ಅನೇಕ ದಂ ತಂ ಭಕ್ತಾನಾಂ ಏಕದಂತಮುಪಾಸ್ಮಹೇ ||

ಶ್ರೀ ಕೃಷ್ಣ ಶ್ಲೋಕ:

ವಸುದೇವಸುತಂ ದೇವಂ ಕಂಸ ಚಾಣೂರ ಮರ್ದನಂ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ||

ಶ್ರೀ ಶಾರದಾ ಶ್ಲೋಕ:

ಯಾ ಕುಂದೇಂದು ತುಷಾರಹಾರ ಧವಲಾ ಯಾ ಶುಭ್ರವಸ್ತ್ರಾವೃತಾ
ಯಾ ವೀಣಾವರದಂಡ ಮಂಡಿತ ಕರಾ ಯಾ ಶ್ವೇತಪದ್ಮಾಸನಾ |
ಯಾ ಬ್ರಹ್ಮಾಚ್ಯುತಶಂಕರ ಪ್ರಭೃತಿಭಿರ್ದೇವ್ಯೈ: ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿ:ಶೇಷಜಾಡ್ಯಾಪಹಾ ||

ಶ್ರೀ ಗುರುಸ್ತುತಿ:

ಗುರುರ್ಬ್ರಹ್ಮಾ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರ: |
ಗುರುಸ್ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮ: ||

ನವಗ್ರಹ ಶ್ಲೋಕ:

ನಮ: ಸೂರ್ಯಾಯ ಚಂದ್ರಾಯ ಮಂಗಲಾಯ ಬುಧಾಯ ಚ |
ಗುರುಶುಕ್ರಶ್ಯನಿಭ್ಯಶ್ಚ ರಾಹವೇ ಕೇತವೇ ನಮ: ||

ಶ್ರೀ ಲಕ್ಷ್ಮೀ ಶ್ಲೋಕ:

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ |
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮೀ ನಮೋಸ್ತುತೇ ||

ಶ್ರೀ ಲಕ್ಷ್ಮೀನರಸಿಂಹ ಶ್ಲೋಕ:

ಶ್ರೀಮತ್ಪಯೋನಿಧಿನಿಕೇತನ ಚಕ್ರಪಾಣೇ ಭೋಗೀಂದ್ರಭೋಗ ಮಣಿರಂಜಿತ-ಪುಣ್ಯಮೂರ್ತೇ |
ಯೋಗೀಶ ಶಾಶ್ವತ ಶರಣ್ಯ ಭವಾಬ್ಧಿಪೋತ ಲಕ್ಷ್ಮೀನರಸಿಂಹ ಮಮ ದೇಹಿ ಕರಾವಲಂಬಮ್ ||

ಶ್ರೀ ದತ್ತಾತ್ರೇಯ ಶ್ಲೋಕ:

ಜಟಾಧರಂ ಪಾಂಡುರಂಗಂ ಶೂಲಹಸ್ತ ಕೃಪಾನಿಧಿಂ |
ಸರ್ವರೋಗ ಹರಂ ದೇವಂ ದತ್ತಾತ್ರೇಯಮಹಂ ಭಜೇ ||

ಶ್ರೀ ರಾಘವೇಂದ್ರ ಶ್ಲೋಕ:

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಶ್ರೀ ದೇವೀ ಶ್ಲೋಕ:

ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ ||

ಶ್ರೀ ಶಿವ ಶ್ಲೋಕ:

ಪ್ರಭೋ ಶೂಲಪಾಣಿ ವಿಭೋ ವಿಶ್ವನಾಥ ಮಹಾದೇವ ಶಂಭೋ ಮಹೇಶ: ತ್ರಿನೇತ್ರ: |
ಶಿವಾಕಾಂತ: ಶಾಂತಸ್ಸ್ಮರಾರೇ ಪುರಾರೇತ್ವ ದನ್ಯೋ ವರೇಣ್ಯೋ ನ ಮಾಸೇ ನ ಗಣ್ಯ: ||

ಶ್ರೀ ಶಿವ ಶ್ಲೋಕ:

ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ |
ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮ: ||

ಶ್ರೀ ಆಂಜನೇಯ ಶ್ಲೋಕ:

ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಂ ಅರೋಗತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾದ್‍ಭವೇತ್ ||

ಶ್ರೀ ರಾಮ ಶ್ಲೋಕ:

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ ಸೀತಾಯಾ: ಪತಯೇ ನಮ: ||

ಶ್ರೀ ವಿಷ್ಣು ಶ್ಲೋಕ:

ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ |
ವಿಶ್ವಾಧಾರಂ ಗಗನಸದೃಶಂ ಮೇಘವರ್ಣಂ ಶುಭಾಂಗಂ ||
ಲಕ್ಷ್ಮೀಕಾಂತಂ ಕಮಲನಯನಮ್ ಯೋಗಿಭಿರ್ಧ್ಯಾನ ಗಮ್ಯಂ |
ವಂದೇ ವಿಷ್ಣುಂ ಭವಭಯ ಹರಂ ಸರ್ವಲೋಕೈಕನಾಥಂ ||

ಶ್ರೀ ಆಂಜನೇಯ ಶ್ಲೋಕ:

ಮನೋಜವಂ ಮಾರುತತುಲ್ಯ ವೇಗಂ |
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||
ವಾತಾತ್ಮಜಂ ವಾನರಯೂಥ ಮುಖ್ಯಂ |
ಶ್ರೀರಾಮದೂತಂ ಶಿರಸಾ ನಮಾಮಿ||

ಶ್ರೀ ದ್ವಾದಶ ಜ್ಯೋತಿರ್ಲಿಂಗ ಶ್ಲೋಕ:

ಸೋಮನಾಥಂ ಮಹಾಕಾಲಂ ಮಲ್ಲಿಕಾರ್ಜುನ ಮೇವ ಚ
ಓಂಕಾರೇಶಂ ವೈದ್ಯನಾಥಂ ನಾಗನಾಥಂ ತ್ರ್ಯಂಬಕಂ |
ಕೇದಾರೇಶಂ ವಿಶ್ವನಾಥಂ ರಾಮನಾಥಂ ಇಲೇಶ್ವರಂ
ಭೀಮಾಶಂಕರ ನಾಮಾನಂ ದ್ವಾದಶಾದ್ಯಾ: ಪ್ರಕೀರ್ತಿತಾ: ||

ಮಹಾ ಮೃತ್ಯುಂಜಯ ಮಂತ್ರ:

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ |
ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯಮಾಮೃತಾತ||

ಶ್ರೀ ರಾಮ ಶ್ಲೋಕ:

ವೈದೇಹಿಸಹಿತಂ ಸುರದ್ರುಮತಲೇ ಹೈಮೇ ಮಹಾಮಂಟಪೇ
ಮಧ್ಯೇ ಪುಷ್ಪಕಮಾಸನೇ ಮಣಿಮಯೇ ವೀರಾಸನೇ ಸುಸ್ಥಿತಮ್ |
ಅಗ್ರೇ ವಾಚಯತಿ ಪ್ರಭಂಜನಸುತೇ ತತ್ತ್ವಂ ಮುನಿಭ್ಯ: ಪರಂ
ವ್ಯಾಖ್ಯಾಂತಂ ಭರತಾದಿಭಿ: ಪರಿವೃತಂ ರಾಮಂ ಭಜೇ ಶ್ಯಾಮಲಮ್ ||

ಶಾಂತಿ ಮಂತ್ರಗಳು:

ಓಂ ಅಸತೋಮಾ ಸದ್ಗಮಯ | ತಮಸೋಮಾ ಜ್ಯೋತಿರ್ಗಮಯ | ಮೃತ್ಯೋರ್ಮಾ ಅಮೃತಂ ಗಮಯ|
|| ಓಂ ಶಾಂತಿ: ಶಾಂತಿ: ಶಾಂತಿ: ||
* * *
ಓಂ ಪೂರ್ಣಮದ: ಪೂರ್ಣಮಿದಂ| ಪೂರ್ಣಾತ್ ಪೂರ್ಣಮುದಚ್ಯತೇ|
ಪೂರ್ಣಸ್ಯ ಪೂರ್ಣಮಾದಾಯ| ಪೂರ್ಣಮೇವಾವಶಿಷ್ಯತೇ||
|| ಓಂ ಶಾಂತಿ: ಶಾಂತಿ: ಶಾಂತಿ: ||
* * *
ಓಂ ಸಹನಾವವತು |
ಸಹನೌ ಭುನಕ್ತು |
ಸಹವೀರ್ಯಂ ಕರವಾವಹೈ |
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ |
|| ಓಂ ಶಾಂತಿ: ಶಾಂತಿ: ಶಾಂತಿ: ||
* * *
ಓಂ ಶಂ ನೋ ಮಿತ್ರ: ಶಂ ವರುಣ:| ಶಂ ನೋ ಭವತ್ವರ್ಯಮಾ |
ಶಂ ನ ಇಂದ್ರೋ ಬೃಹಸ್ಪತಿ: |
ಶಂ ನೋ ವಿಷ್ಣುರುರುಕ್ರಮ: |
ನಮೋ ಬ್ರಹ್ಮಣೇ |
ನಮಸ್ತೇ ವಾಯೋ |
ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ | ತ್ವಮೇವಪ್ರತ್ಯಕ್ಷಂಬ್ರಹ್ಮವದಿಷ್ಯಾಮಿ|
ಋತಂ ವದಿಷ್ಯಾಮಿ |
ಸತ್ಯಂ ವದಿಷ್ಯಾಮಿ |
ತನ್ಮಾಮವತು ತದ್ವಕ್ತಾರಮವತು |
ಅವತು ಮಾಮ್ |
ಅವತು ವಕ್ತಾರಮ್ ||
|| ಓಂ ಶಾಂತಿ: ಶಾಂತಿ: ಶಾಂತಿ: ||
* * *

ಓಂ ಭದ್ರಂ ಕರ್ಣೇಭಿ: ಶೃಣುಯಾಮ ದೇವಾ|
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾ:| ಸ್ಥಿರೈರಂಗೈ ಸ್ತುಷ್ಟುವಾಗಂ ಸಸ್ತನೂಭೀರ್ವ್ಯಶೇಮ ದೇವಹಿತಂ ಯದಾಯು:|
ಸ್ವಸ್ತಿ ನ ಇಂದ್ರೋ ವೃದ್ಧಶ್ರವಾ:|
ಸ್ವಸ್ತಿ ನ: ಪೂಷಾ ವಿಶ್ವವೇದಾ:|
ಸ್ವಸ್ತಿ ನಸ್ತಾರ್ಕ್ಷೋ ಅರಿಷ್ಟನೇಮಿ:|
ಸ್ವಸ್ತಿನೋ ಬೃಹಸ್ತಿರ್ದದಾತು |
|| ಓಂ ಶಾಂತಿ: ಶಾಂತಿ: ಶಾಂತಿ: ||
* * *

ಓಂ ಯೋ ಬ್ರಹ್ಮಾಣಂ ವಿದದಾತಿ ಪೂರ್ವಂ|
ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈ|
ತಂ ಹ ದೇವಮಾತ್ಮಬುದ್ಧಿಪ್ರಕಾಶಂ ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೇ ||
|| ಓಂ ಶಾಂತಿ: ಶಾಂತಿ: ಶಾಂತಿ: ||

Neenu Neene Illi Naanu Naane Song Lyrics

Neenu Neene Illi Naanu Naane Song Lyrics



ಚಿತ್ರ : ಗಡಿಬಿಡಿಗಂಡ (1993)
ಸಾಹಿತ್ಯ : ನಾದಬ್ರಹ್ಮ ಹಂಸಲೇಖ...
ಗಾಯಕರು : ಡಾ" ಎಸ್.ಪಿ.ಬಿ....
-----------------------------------------------------------
ಹ್ಮ್...... ಹಯ್ಯೋ....!
ನೀನು ನೀನೇ ಇಲ್ಲಿ ನಾನು ನಾನೇ ...
ನೀನು ನೀನೇ ಇಲ್ಲಿ ನಾನು ನಾನೇ...
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ...

ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ
ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ....

ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ

ನಾರದ ಶ್ರುತಿ ನೀಡಿ ತುಂಬುರ ಸ್ಮೃತಿ ಹಾಡಿ,
ಕೈಲಾಸವೆಲ್ಲ ನಾದೋಪಾಸನೆಯಾಗಿ....
ನಾರದ ಶ್ರುತಿ ನೀಡಿ ತುಂಬುರ ಸ್ಮೃತಿ ಹಾಡಿ,
ಕೈಲಾಸವೆಲ್ಲ ನಾದೋಪಾಸನೆಯಾಗಿ....
ಷಣ್ಮುಖಪ್ರಿಯ ರಾಗ..... ಷಣ್ಮುಖಪ್ರಿಯ ರಾಗ
ಮಾರ್ಗ ಹಿಂದೋಳವಾಗಿ, ನಡೆಸಿದೆ ದರ್‌ಬಾರು ರಾಗ..
ಹಾಡುವೆಯಾ ಪಲ್ಲವಿಯಾ..
ಕೇಳುವೆಯಾ, ಮೇಲೆ ಏಳುವೆಯಾ...

ನೀನು ಎಂಬುವನಿಲ್ಲಿ ನಾದವಾಗಿರುವಾಗ
ನಾನೇನು ಹಾಡಲಯ್ಯ ದಾಸಾನುದಾಸ....
ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ....

ಈ ಸ್ವರವೆ ವಾದ , ಈಶ್ವರ ನಿನಾದ....
ಜತಿಗತಿಜ ಕಾಗುಣಿತ ವೇದ....
ಶಿವಸ್ಮರಣೆ ಸಂಗೀತ ಸ್ವಾದ ...
ಗಮಕಗಳ ಪಾಂಡಿತ್ಯ ಶೋಧ....
ಸುಮತಿಗಳ ಸುಜ್ಞಾನ ಬೋಧ ....
ಪಲುಕುಗಳ ವಿಚಾರಣೆ ,ಕ್ಷಮಾಪಣೆ ,ವಿಮೋಚನೆ....

ಗೆಲುವುಗಳ ಆಲೋಚನೆ ,ಸರಸ್ವತಿ, ಸಮರ್ಪಣೆ....
ನವರಸ ಅರಗಿಸಿ ಪರವಶ ಪಳಗಿಸಿ ಅಪಜಯ ಅಡಗಿಸಿ ಜಯಿಸಲು ಇದು ಶಕುತಿಯ ಯುಕುತಿಯ ಪರಮಾರ್ಥ....

ಗಣಗಣ ಶಿವಗಣ ನಿಜಗುಣ ಶಿವಮನ ನಲಿದರೆ ಒಲಿದರೆ ಕುಣಿದರೆ ಅದೆ ಭಕುತಿಯ ಮುಕುತಿಯ ಪರಮಾರ್ಥ....

ನೀನು ನೀನೇ ಇಲ್ಲಿ ನಾನು ನಾನೇ
ಸಾ ಸಮಗಸರೀ ನಿಸಸನಿದ ದದನಿದಮ ಮಗಮದಾದಾದ್ದ ದಮದ ನೀನಿ ದದಾನಿ ಸಮಾಗ ನಿದದನಿ ದಮಪಸ
ನೀನು ನೀನೇ ಇಲ್ಲಿ ನಾನು ನಾನೇ...

ದನಿಸಗ ನಿಸ್ಸ ದನಿಸಗ ನಿಸಗಮ ಗಮ
ನಿಸಗಮ ಗಾಗಾ ಮಾಮಾ
ಗಸಗಸಗಸಗಸ ಮಗಮಗಮಗಮಗ
ಸಸಾ ಮಗ ಮಗ ಮಗ ಸನಿದಮಗಸ
ನೀನು ನೀನೇ ಇಲ್ಲಿ ನಾನು ನಾನೇ...

ಮಗಮಗಮಗ ಗಮಗಮಗಮಗ
ದಮದಮದಮ ಮನಿಸನಿಸನಿಸ
ಸಸಸ ಸಾಸ ಸಸ ಸಗಸನಿ ನಿಸನಿದ
ಸಸಾಸ ನಿದನಿ ಸಾನಿದಮದಮಗಸ
ಸಗಮಗ ಗಮದನಿ ಮದನಿಸ ಗಸಸನಿಸ ದನಿ
ಮದ ಮದನಿಸದ
ನೀನು ನೀನೇ ಇಲ್ಲಿ ನೀನು ನೀನೇ...

ಸಾ ಪಾ ಸಾ
ಸನಿಪಮಗಸನಿಪ ಸಾ
ಸಗಮಪಗ ಸಗಮಪಮಗ ಸಗಮಪ ಮಪಮಪ ನಿನಿಪಮಪಾ
ಸರಿಗಪದಪಗಪ ದಾ ಸದದಾ
ದಪಗಪಗರಿ ಸಸರಿಗರಿ
ಸಾರಿಮಪನಿಸ ಸರಿಮಪನಿಸ
ನಿಸರಿಪಮ ರಿಪಮ ರಿಸರಿ
ಸಾ ಮಸ ಮಸ ಮಪದಸರಿ ರೀ ಸಾ ದಪಮ
ಮಪದದ್ದಾಪ ಮಪದದ್ದಾಪ ಮಪದದ್ದಾಪಮ ಪಸದಾ
ಪಮಪದಸಾ ಪಮಪದರೀ
ಸರಿರಿ ಸರಿರಿ ಸರಿರಿ ಸರಿರಿ ಸರಿಸ ದಸರಿ ದಸರಿ ಪದಸರಿ ರಿಮಪದಸರಿ ರಿಮಪದಸರಿ ಸರಿಮಪದಸರಿ ಪನಿಸ ಗಪದ ರಿಮಪ ಸಗಮಗ ಸಮಗ ಸನಿದಮಗ
ನೀನು ನೀನೇ ಇಲ್ಲಿ ನಾನು ನಾನೇ
ನೀನು ನೀನೇ ಇಲ್ಲಿ ನಾನು ನಾನೇ.....