Wednesday 5 April 2017

Nalla- Malage malage Gubbi Mari

ಸಂಗೀತ - ಸಾಹಿತ್ಯ ಡಾ!! ವಿ. ನಾಗೇಂದ್ರ ಪ್ರಸಾದ್
ಹಾಡಿ : ರಾಜೇಶ್ ಕೃಷ್ಣನ್
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮ
ಆ ಮರ್ಮ ಬಲ್ಲೋರು ಇಲ್ಲಿ ಯಾರಮ್ಮ
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಚಿತ್ರ ವಿಚಿತ್ರ ಕಣೆ ಲೋಕವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಬಾಳಲ್ಲಿ ನೋವೆಮ್ಬುದೆಲ್ಲ ಮಾಮೂಲಿ
ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ
ಲಾಭಾನ ಕೇಳೋದಿಲ್ಲ ಲಾಲಿ ಎಂದು
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ

Choriyagide Nanna Dil Song Lyrics

Choriyagide Nanna Dil Song Lyrics


ಚಿತ್ರ: ಪ್ರೀತ್ಸೋದ್ ತಪ್ಪಾ
ಸಂಗೀತ ಮತ್ತು ಗೀತರಚನೆ: ಹಂಸಲೇಖ

ಚೋರಿಯಾಗಿದೆ ನನ್ನ ದಿಲ್
ಕಳೆದುಕೊಳ್ಳೋದೆ ಒಂದು ಥ್ರಿಲ್
ಕಳ್ಳಿ ಸಿಕ್ಕಳು ಕದ್ದ ಕೈಯ್ಯಲಿ
ಅವಳ ಪಾಡು ಹೇಗೆ ಹೇಳಲಿ
ಮರೆತು ಅವಳ ಹೃದಯ ಕೊಟ್ಟಳೊ

ಮನೆಯೆ ಮೌನವಾಗಿದೆ ಮೌನ ಮಾತನಾಡಿದೆ
ಹಾಡು ಹಾಡಿದೆ ಈ ದಿಲ್
ಕಣ್ಣು ಕುಕ್ಕುತಾ ಇದೆ ಆಸೆ ಉಕ್ಕುತಾ ಇದೆ
ಪ್ರೀತಿ ಬೇಡಿದೆ ಈ ದಿಲ್
ನನ್ನ ನಿನ್ನ ಈ ಮೊದಲ ನೋಟವೆ
ಪ್ರೇಮ ಶಾಲೆಯ ಪ್ರಥಮ ಪಾಠವೆ
ದೇವರಾಣೆ ಮುಂದೆ ತಿಳಿಯದು

ಬಾರೆ ಬೇಗ ಹೋಗುವ ಪ್ರೇಮ ಶಾಲೆ ಸೇರುವ
ಅ ಆ ಇ ಈ ತಿದ್ದಲಿ ಈ ದಿಲ್
ಯಾರು ಗುರುಗಳೊ ಪ್ರೀತಿಗೆ ಯಾವ ಪಾಠವೋ ಮನಸಿಗೆ
ಎಂದು ಕೇಳಿದೆ ಈ ದಿಲ್
ನಾಲ್ಕು ಕಣ್ಗಳೆ ಪ್ರೇಮ ಪುಟಗಳು
ನಾಲ್ಕು ತುಟಿಗಳೆ ಪದ್ಯ ಪದಗಳು
ಪ್ರೀತಿಗ್ಯಾರು ಇಲ್ಲ ಗುರುಗಳು

Tuesday 4 April 2017

ಸೋನೆ ಸೋನೆ ಪ್ರೀತಿಯ ಸೋನೆ

ಏನಿದು ಮಾಯೆ.. ಏನಿದು ಮಾಯೆ
ಮನಸಿನ ಮುಗಿಲಲಿ ಮಾತಿನ ಮಳೆಯು ತುಂಬಿದೆ
ಹೊರಗೆ ಬಾರದೆ ನಿಂತಿದೆ
ಮಿಂಚಿದೆ ಗುಡುಗಿದೆ
ಸೋನೆ ಮಳೆಯಾಗಿ ಆದರೂ
ಮೆಲ್ಲ ಮೆಲ್ಲ ಬರಬಾರದೇ?
ಓ ..... ಸೋನೆ ....

ಸೋನೆ ಸೋನೆ ಪ್ರೀತಿಯ ಸೋನೆ
ಈ ಮಳೆ ಹೂಮಳೆ ಪ್ರೀತಿಯ ವರಗಳೆ
ಅಂದದ .... ಧರಣಿಯ
ತನುವಿನ ಪಥದಲಿ
ಪ್ರೀತಿಯ ಅಕ್ಷರ ಇಂದು ವೃಂದ ತಾವಾಗಿದೆ
ನಳಿನ ನರ್ತನ ಮಾಡಿದೆ

ಈ ಬ್ರಹ್ಮಾಂಡವೇ ನಾನು
ನನಗೆ ಸಂಗಾತಿ ನೀನು
ನಿನ್ನ ಪ್ರೀತಿ ತೋಳಲ್ಲಿ ನಾನು
ಕುಂತರೂ ನಿಂತರೂ

ನಿನ್ನದೇ ತುಂತುರು
ನೆನೆದಿದೆ ನನ್ನೆದೆ 

ಸೋನೆ ಸೋನೆ ಪ್ರೀತಿಯ ಸೋನೆ
ಸೋನೆ ಸೋನೆ ಪ್ರೀತಿಯ ಸೋನೆ
ನಿರ್ಮಲ ಕೋಮಲ ಶೀತಲ ಶಾಂತಲ
ಕಾವ್ಯದಾ .......
ಕಾವ್ಯದ ಕುಸುರಿಯೇ
ಕವನದ ಲಹರಿಯೇ
ಅಂದದ ಪ್ರತಿಮೆಯೇ
ನಿನ್ನ ಅಂದ ಛಂದೋಮಯ
ನಿನ್ನ ಭಾವ ವ್ಯಾಕರಣಮಯ 

ಸೋನೆ ಸೋನೆ ಸೋನೆ ಸೋನೆ

ಏನಿದು ಮಾಯೆ
ಏನಿದು ಮಾಯೆ
ಮನಸಿನ ಭೂಮಿಲಿ ಋತುವು ಬದಲಾದ ಹಾಗಿದೆ
ಆಸೆ ಮಲೆನಾಡು ಚಿಗುರಿದೆ

ಓ .... ಕನಸೇ
ಓ .... ನನಸೇ