Tuesday 4 April 2017

ಬಂಗಾರದಿಂದ ಬಣ್ಣಾನ ತಂದ


ಹೋ ಹೋ ಹೋ ಹೇ ಹೇ ಹೇ....
ಲಾ ಲಲ ಲಲ ಲಾ
ತಂದಾನ ತಂದನಾ

ತನ್ ತಂದಾನ ತಂದ ತನ್ ತಂದಾನ ತಂದ
ತನ್ ತಂದಾನ ತಂದ ತನ್ ತಂದಾನ ತಂದ

ಬಂಗಾರದಿಂದ ಬಣ್ಣಾನ ತಂದ
ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ
ದಾಳಿಂಬೆಯಿಂದ ದಂತಾನ ತನ್ದ
ಮಕರಂದ ತುಂಬಿ ಅಧರಾನ ತಂದ
ನನ್ನನು ತಂದ ರುಚಿ ನೋಡು ಎಂದ

ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ ಪ

ಚಂದಮಾಮನಿಂದ ಹೊಳಪನು ತಂದ
ಬಾಳೆ ದಿಂಡಿನಿಂದ ನುಣುಪನು ತಂದ
ಅಂದ ಹೈ ಅಂದ ಹೈ
ಆಂದ ಚಂದ ಹೊರುವ ಕಂಬದ ಜೋಡಿಗೆ
ಮಿಂಚಿರಿ ಎಂದ
ಹಂಸದಿಂದ ಕೊಂಚ ನಡಿಗೆಯ ತಂದ
ನವಿಲಿಂದ ಕೊಂಚ ನಾಟ್ಯವ ತಂದ

ನಯವೊ ಹೈ ಲಯವೊ ಹೈ
ನಯವೊ ಲಯವೊ ರೂಪಾಲಯವೊ
ರಸಿಕನೆ ಹೇಳು ನೀ ಎಂದ
ತಂಗಾಳಿಯಿಂದ ಸ್ನೇಹಾನ ತಂದ
ಲತೆ ಬಳ್ಳಿ ಇಂದ ಸಿಗ್ಗನು ತಂದ
ಸಿಗ್ಗನು ಇವಳ ನಡುವಾಗು ಎಂದ
ನಡುವನ್ನು ಅಳಿಸಿ ಎದೆ ಭಾರ ತಂದ
ನನ್ನನ್ನು ಲತೆಗೆ ಮರವಾಗು ಎಂದ

ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ ೧

ಗಂಧ ತಂದನೊ ಗಮರುಗದಿಂದ
ರತಿಯ ತಂದನೊ ಅವನುರದಿಂದ
ಭ್ರಮರ ಹೈ ಅಮರ ಹೈ ಭ್ರಮರ ಅಮರ
ಕಂಪನ ಕಡಲ ದೋಣಿಗೆ ಕಾಮನ ತಂದ
ಭೂಮಿ ಸುತ್ತ ಇರೊ ಕಾಂತವ ತಂದ
ಬಾನಿನಿಂದ ಏಕಾಂತವ ತಂದ

ಒಲವು ಹಾ ಚೆಲುವು ಹಾ
ಒಲವು ಚೆಲುವು ಕೂಡೋ ಕಲೆಗೆ
ಘರ್ಷಣೆ ಆಕರ್ಷಣೆ ತಂದ

ಕರಿ ಮೋಡದಿಂದ ಮುಂಗುರುಳ ತಂದ
ಕೋಲ್ಮಿಂಚಿನಿಂದ ರತಿ ನೋಟ ತಂದ
ಜಲಧಾರೆಯಿಂದ ಒಲವನ್ನು ತಂದ
ಒಲವನ್ನು ಓಡೊ ನದಿಯಾಗು ಎಂದ
ನನ್ನನು ನದಿಗೆ ಕಡಲಾಗು ಎಂದ ೨

ಬಂಗಾರದಿಂದ ಬಣ್ಣಾನ ತಂದ
ಸಾರಂಗದಿಂದ ನಯನಾನ ತಂದ
ಮಂದಾರವನ್ನು ಹೆಣ್ಣಾಗು ಎಂದ

ತಂದಾನ ತಂದ ತಂದಾನ ತಂದ
ಅಪರೂಪದಂದ ನನಗಾಗಿ ತಂದ

ಸುಮತಿ ಸುಮತಿ ಶ್ರೀಮತಿ

ಕಾರ್ಯೇಷು ದಾಸಿ
ಕರಣೇಷು ಮಂತ್ರಿ
ಭೋಜ್ಯೇಷು ಮಾತಾ
ರೂಪೇಷು ಲಕ್ಷ್ಮೀ
ಕ್ಷಮಯಾ ಧರಿತ್ರಿ
ಶಯನೇಷು ರಂಭಾ

ಸುಮತಿ ಸುಮತಿ ಶ್ರೀಮತಿ
ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
ಸುಮತಿ ಸುಮತಿ ಶ್ರೀಮತಿ
ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ

ಅಡಿಗಡಿಗೊಂದು ಗುಡಿ ಪೂಜಿಸಿ ದಿನವಿಡಿ
ಪತಿಯೊಳಗಿರುವಳು ಸತಿಯು
ಸತಿಯು ಅವಳೆ ಮತಿಯು ಅವಳೆ
ಬಾಳಿನ ಹಾಡಿಗೆ ಶೃತಿಯು
ಪತಿಯಾ ಏಳಿಗೆ ಸತಿಯಾ ಕೈಲಿದೆ
ಪತಿ ಹಿತವೆ ಸುಖ ಮಾಂಗಲ್ಯವೆ ಮುಖ
ಎನ್ನುವ ಸತಿಯೆ ಉಸಿರಿರೊ ತನಕ

ಸುಮತಿ ಸುಮತಿ ಶ್ರೀಮತಿ
ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ

ಹೃದಯವು ಬೆಳಗಲು ಬದುಕದು ಮಿನುಗಲು
ಸತಿ ಮನಸೊಂದೆ ಜ್ಯೋತಿ
ಕರೆದರೆ ಚೈತ್ರವ ನೆನೆದರೆ ಸ್ವರ್ಗವ
ಪಡೆಯಲು ಸತಿಯೇ ಸ್ಪೂರ್ತಿ
ಪತಿಯೇ ದೈವವು ಎನುವಾ ಜೀವವು
ಏಳು ಹೆಜ್ಜೆಗಳ ತ್ಯಾಗ ಪ್ರೀತಿಗಳ
ಮೆರೆಯುವ ಸತಿಮಣಿ ದೇವತೆಗೆ ಸಮ
ಸುಮತಿ ಸುಮತಿ ಶ್ರೀಮತಿ
ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ

ಕಾರ್ಯೇಷು ದಾಸಿ
ಕರಣೇಷು ಮಂತ್ರಿ
ಭೋಜ್ಯೇಷು ಮಾತಾ
ರೂಪೇಷು ಲಕ್ಷ್ಮೀ
ಕ್ಷಮಯಾ ಧರಿತ್ರಿ
ಶಯನೇಷು ರಂಭಾ⁠⁠⁠⁠

ಯಾವುದೋ ಈ ಬೊಂಬೆ ಯಾವುದೋ

ನಿಸಗರಿಸ.........
ಈ ತಾಳ ಇದ್ದರೆ, ಹಾಡು ಬಾರದೆ
ಈ ಹಾಡು ಇದ್ದರೆ ನಿದ್ದೆ ಬಾರದೆ
ಈ ನಿದ್ದೆ ಬಂದರೆ, ಕನಸು ಬಾರದೆ
ಆ ಕನಸಿನಲ್ಲಿ ಈ ಬೊಂಬೆ ಕಾಣದೆ

ಯಾವುದೋ ಈ ಬೊಂಬೆ ಯಾವುದೋ
ಊರ್ವಶಿಯ ಕುಲವೋ ಮೇನಕೆಯ ಚೆಲುವೋ
ಯಾವುದೋ ಈ ಅಂದ ಯಾವುದೋ
ಬೇಲೂರಿನ ಶಿಲೆಯೋ ಶಾಂತಲೆಯ ಕಲೆಯೋ
ಕಾಳಿದಾಸನ ಪ್ರೇಮಗೀತೆಯೋ
ಕಾಳಿದಾಸನ ಪ್ರೇಮಗೀತೆಯೋ

ನೂರಾರು ಹೂಗಳಿದ್ದರು ಈ ಅಂದ ಬೇರೆ
ಆ ತಾರೆ ಮಿನುಗುತಿದ್ದರು ಈ ಕಣ್ಣೆ ಬೇರೆ...ನೀನ್ಯಾರೆ
ನೀನಿಲ್ಲಿ ಸುಮ್ಮನಿದ್ದರು ಒಳಮಾತೆ ಬೇರೆ
ಹಾಡಲ್ಲೆ ನೀನು ಇದ್ದರು, ಎದುರಿರುವ ತಾರೆ....ಹಲೋ ನೀನ್ಯಾರೆ?
ನನ್ನ ಮನದ ಪ್ರೇಮ ರಾಗಕೆ ನಿನ್ನ ಎದೆಯ ತಾಳ ಇದ್ದರೆ
ನಾನು ಹಾಡೋ ನೂರು ಭಾವಕೆ ನೀನು ಒಮ್ಮೆ ನೋಡಿ ನಕ್ಕರೆ ಸಾಕು.....
ಲಲಲಲ.....

ನೀನ್ಯಾರೋ ತಿಳಿಯದಿದ್ದರೂ ನನಗೆ ನೀ ರಾಧೆ
ಕಲ್ಲಾಗಿ ನಾನು ನಿಂತರು ಕರಗಿ ನೀರಾದೆ...ಏಕಾದೆ
ಈ ಹಾಡು ನಿನ್ನದಾದರೂ ರಾಗ ನಾನಾದೆ
ಯಾರೇನು ಹೇಳದಿದ್ದರೂ ನನಗೆ ಜೊತೆಯಾದೆ...ಹೇಗಾದೆ
ಇಂದು ನೆನ್ನೆ ನಾಳೆ ಯಾವುದು ನನಗೆ ಈಗ ನೆನಪು ಬಾರದು
ನಿನ್ನ ಬಿಟ್ಟು ನನ್ನ ಮನಸಿದು ಬೇರೆ ಏನು ಕೇಳಲಾರದು ರಾಧೆ........
ಲಲಲಲಲ.......