Thursday 6 April 2017

Yaare Neenu Cheluve - Kushalave Kshemave

ಕುಶಲವೇ ಕ್ಷೇಮವೇ ಸೌಖ್ಯವೇ
ಓ ನನ್ನಾ ಪ್ರೀತಿಪಾತ್ರಳೇ
ಓದಮ್ಮಾ ನನ್ನ ಓಲೇ
ಹೃದಯ ಭಾವಲೀಲೇ
ಕಲ್ಪನೆಯೇ ಹೆಣ್ಣಾಗಿದೇ
ಕನಸುಗಳೇ ಹಾಡಾಗಿದೇ
ಯಾರೇ ನೀನು ಚೆಲುವೇ ಅಂದಿದೇ
[ಹೆಣ್ಣು]
ಕುಶಲವೇ ಕ್ಷೇಮವೇ ಸೌಖ್ಯವೇ
ನಾ ನಿನ್ನಾ ಓಲೆ ಓದಿದೆ
ತೆರೆದ ಹೃದಯವದೂ
ಪ್ರೇಮರೂಪವದೂ
ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ
ಓ...ಆ ನಿನ್ನ ಉಸಿರಿನಲೇ.. ಈ ಜೀವ ಜೀವಿಸಿದೇ..
ಮುದ್ದಾದ ಬರಹ ಮರೆಸಿದೆ ವಿರಹ
ಅಕ್ಷರಕ್ಕೆ ಯಾರೋ ಈ ಮಾಯಾಶಕ್ತಿ ತಂದಾರೋ
ಒಂದೊಂದೂ ಪತ್ರವೂ ಪ್ರೇಮದಾ ಗ್ರಂಥವೋ
ಓಲೆಗಳಿಗ್ಯಾರು ಈ ರಾಯಭಾರ ತಂದಾರೋ
ಓಲೆಗಳೇ ಬಾಳಾಗಿದೇ, ಓದುವುದೇ ಗೀಳಾಗಿದೇ
ಯಾರೋ ನೀನು ಚೆಲುವಾ ಅಂದಿದೇ
||ಕುಶಲವೇ||
ನೂರಾರು ಪ್ರೇಮದಾಸರೂ
ಪ್ರೀತಿಸಿ ದೂರವಾದರೂ
ನಾವಿಂದು ದೂರ ಇದ್ದರೂ
ವಿರಹಗಳೆ ನಮ್ಮ ಮಿತ್ರರೂ
ನೋಡದೇ ಇದ್ದರೂ ಪ್ರೀತಿಸೋ ಇಬ್ಬರೂ
ನೋಡೋರ ಕಣ್ಣಲ್ಲೀ ಏನೇನೋ ಹಾಡೋ ಹುಚ್ಚರು
ದೂರಾನೇ ಆರಂಭ, ಸೇರೋದೇ ಅಂತಿಮ
ಅಲ್ಲಿವರೆಗೂ ಯಾರೂ ಈ ಹುಚ್ಚು ಪ್ರೀತಿ ಮೆಚ್ಚರು
ದೂರದಲೇ ಹಾಯಾಗಿದೇ
ಕಾಯುವುದೇ ಸುಖವಾಗಿದೇ
ಯಾರೇ ನೀನೂ ಚೆಲುವೇ ಅಂದಿದೇ..
||ಕುಶಲವೇ||

Ninna Kannallide Song Lyrics

Ninna Kannallide Song Lyrics


ಚಿತ್ರ: ಚಿರು

ಸಂಗೀತ: ಗಿರಿಧರ್ ದಿವಾನ್

ಸಾಹಿತ್ಯ: ಜಯಂತ್ ಕಾಯ್ಕಿಣಿ

ಗಾಯಕ: ಸೋನು ನಿಗಮ್



ಹೇ..ಹೆ ಹೇ... ಲ ಲಾ ಲ... ಲ ಲಾ ಲಾ...

ಲಾ ಲ ಲಾ... ಲಾ ಲ ಲಾ...ಲಾ... ಲ ಲಾ...

ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ

ಇಂದು ನಿನ್ನಲ್ಲಿದೇ... ಏನೊ ಆಕರ್ಷಣೆ

ಹೃದಯದ ಹಾದಿ ಹಿಡಿಯಲೇ ಬೇಕು

ನೀ ಸುಮ್ಮನೇ...

ಹೇ..ಹೆ ಹೇ... ಯಾರಿಗೂ ತೀರದ ಖಾಸಗೀ ಸಂಭ್ರಮ ಪ್ರೀತಿಗೇ...



ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ

ಇಂದು ನಿನ್ನಲ್ಲಿದೇ... ಏನೊ ಆಕರ್ಷಣೆ

ಹೃದಯದ ಹಾದಿ ಹಿಡಿಯಲೇ ಬೇಕು

ನೀ ಸುಮ್ಮನೇ...



ಕಣ್ಣನು ಮುಚ್ಚಿ ನೋಡಿದರೂನೂ...

ಕಾಣುವ ಲೋಕ ಉನ್ಮಾದಕಾ...

ಸಂದಣಿಯಲ್ಲೂ ಕೇಳಿಸುವಂತ

ದೂರದ ರಾಗ ಸಂಮೋಹಕಾ...

ಇನ್ನೆಲ್ಲಿದೇ ಈ ರೀತಿಯಾ ಸದ್ದಿಲ್ಲದಾ ಆಮಂತ್ರಣಾ

ಹೋದಲ್ಲಿ ಬಂದಲ್ಲಿ ನಿಂತಲ್ಲಿ ರೋಮಾಂಚನಾ...

ಹೇ..ಹೆ ಹೇ... ಯಾರಿಗೂ ತೀರದ ಖಾಸಗೀ ಸಂಭ್ರಮ ಪ್ರೀತಿಗೇ...



ಕನಸಿನ ಮಾಯ ಕನ್ನಡಿಯಲ್ಲೀ

ಮೂಡಿದೆ ರೂಪ ಸಂತೋಷಕೇ...

ನೆನಪಿನ ನೂರು ಬಣ್ಣಗಳಲ್ಲೀ..

ಬಂದಿದೆ ಜೀವ ಸಂದೇಶಕೇ...

ಈ ಯಾನವೂ ಇನ್ನೂ ಖುಷೀ

ಇದ್ದಾಗಲೇ ಈ ಭಾವನೇ

ಬೇಕಿಲ್ಲ ಬಾಳಲ್ಲೀ ಬೇರೇನು ಸಂಪಾದನೇ...

ಹೇ..ಹೆ ಹೇ... ಯಾರಿಗೂ ತೀರದ ಖಾಸಗೀ ಸಂಭ್ರಮ ಪ್ರೀತಿಗೇ...



ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ

ಇಂದು ನಿನ್ನಲ್ಲಿದೇ... ಏನೊ ಆಕರ್ಷಣೆ

ಹೃದಯದ ಹಾದಿ ಹಿಡಿಯಲೇ ಬೇಕು

ನೀ ಸುಮ್ಮನೇ...

Wednesday 5 April 2017

Oora kannu..Yaara Kannu...Maari Kannu Hori Kannu - Ranga SSLC Lyrics

ಸಂಗೀತ: ಸಂದೀಪ್ ಚೌತ

ಗಾಯನ: ರಾಜು ಅನಂತಸ್ವಾಮಿ, ಸೋನಾ ಕಕ್ಕರ್



ಸೋನಾ: ಊರ ಕಣ್ಣು..ಉ ಯಾರ ಕಣ್ಣು..ಉ
ಮಾರಿ ಕಣ್ಣು..ಉ ಹೋರಿ ಕಣ್ಣು..ಉ
ಯಾವ ಮಸಳಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ

ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ


ರಾಜು: ಊರ ಕಣ್ಣು..ಉ ಯಾರ ಕಣ್ಣು..ಉ
ಮಾರಿ ಕಣ್ಣು..ಉ ಹೋರಿ ಕಣ್ಣು..ಉ
ಯಾವ ಮಸಳಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ

ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ


ಸೋನಾ: ಬದುಕು ಒಂದು ರೇಲಣ್ಣಾ
ವಿಧಿ ಅದರ ಎಜಮಾನ
ಅವನು ಹೋಗೊ ಒಂದು ಕಡೆಗೆ ಹೋಗಬೇಕಣ್ಣ


ರಾಜು: ವಿರಹ ಅನ್ನೊ ವಿಷವನ್ನ
ಕುಡಿಸುತಾನೆ ಬ್ರಹ್ಮಣ್ಣಾ
ಸತ್ಯವಾದ ಪ್ರೇಮಿಗಳಿಗೆ ಇಂತ ಬಹುಮಾನ


ಸೋನಾ: ನಮ್ಮ ಖಳನಾಯಕ ಮೇಲೆ ಇರೊ ಮಾಲಿಕ
ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ
ಊರ ಕಣ್ಣು..ಉ ಯಾರ ಕಣ್ಣು..ಉ
ಮಾರಿ ಕಣ್ಣು..ಉ ಹೋರಿ ಕಣ್ಣು..ಉ


ರಾಜು: ಯಾವ ಮಸಳಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ

ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ



ಸೋನಾ: ಹಣೆ ಬರಹಕೆ ಹೊಣೆ ಯಾರೂ
ಇಲ್ಲಿ ಬೊಂಬೆ ಎಲ್ಲಾರೂ
ಯಾವ ಮತ್ತು ಇರದಂತ ನೋವು ನೂರಾರೂ


ರಾಜು: ಇತಿಹಾಸ ಆದೊರು ಪ್ರೀತಿಯಲ್ಲಿ ಸೋತೋರು
ನಾವು ಚರಿತೆಯಾದರೆ ಸೇರಲಿ ಈ ಉಸಿರು
ನಮ್ಮ ಖಳನಾಯಕ ಮೇಲೆ ಇರೊ ಮಾಲಿಕಾ
ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ


ಸೋನಾ: ಊರ ಕಣ್ಣು..ಉ ಯಾರ ಕಣ್ಣು..ಉ
ಮಾರಿ ಕಣ್ಣು..ಉ ಹೋರಿ ಕಣ್ಣು..ಉ


ಇಬ್ರು: ಯಾವ ಮಸಳಿ ಕಣ್ಣು ಬಿತ್ತಮ್ಮಾ

ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ
ನಮ್ಮ ಪ್ರೀತಿ ಮ್ಯಾಲೆ