Thursday 6 April 2017

Kambada Myalina Gombeye Song Lyrics

ಸಾಹಿತ್ಯ: ಗೋಪಾಲ್ ಯಾಗ್ನಿಕ್
ಸಂಗೀತ: ಸಿ. ಅಶ್ವಥ್
ಗಾಯನ: ಸಂಗೀತ ಕಟ್ಟಿ

ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ|
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ ಉತ್ತಾರವಾ||

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ||

ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ|
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ ಉತ್ತಾರವಾ||

ನೀರೊಲೆಯ ನಿಗಿ ಕೆಂಡ ಸತ್ಯವೇ
ಈ ಅಭ್ಯಂಜನವಿನ್ನೂ ನಿತ್ಯವೇ|
ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ
ನಿನ್ನ ವಾಸನೀ ಹರಡಿರಲಿ ಹೀಗೆಯೇ ||೨||

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ||

ಒಪ್ಪಿಸುವೆ ಹೂ-ಹಣ್ಣು ಭಗವಂತ
ನೆಪ್ಪಿಲೆ ಹರಸುನಗಿ ಇರಲೆಂತ|
ಕಪ್ಪುರವ ಬೆಳಗುವೆ ದೇವನೇ
ತಪ್ಪದೆ ಬರಲೆನ್ನ ಗುಣವಂತ ||೨||

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ||

ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ|
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ ಉತ್ತಾರವಾ||

Yaare Neenu Cheluve - Kushalave Kshemave

ಕುಶಲವೇ ಕ್ಷೇಮವೇ ಸೌಖ್ಯವೇ
ಓ ನನ್ನಾ ಪ್ರೀತಿಪಾತ್ರಳೇ
ಓದಮ್ಮಾ ನನ್ನ ಓಲೇ
ಹೃದಯ ಭಾವಲೀಲೇ
ಕಲ್ಪನೆಯೇ ಹೆಣ್ಣಾಗಿದೇ
ಕನಸುಗಳೇ ಹಾಡಾಗಿದೇ
ಯಾರೇ ನೀನು ಚೆಲುವೇ ಅಂದಿದೇ
[ಹೆಣ್ಣು]
ಕುಶಲವೇ ಕ್ಷೇಮವೇ ಸೌಖ್ಯವೇ
ನಾ ನಿನ್ನಾ ಓಲೆ ಓದಿದೆ
ತೆರೆದ ಹೃದಯವದೂ
ಪ್ರೇಮರೂಪವದೂ
ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ
ಓ...ಆ ನಿನ್ನ ಉಸಿರಿನಲೇ.. ಈ ಜೀವ ಜೀವಿಸಿದೇ..
ಮುದ್ದಾದ ಬರಹ ಮರೆಸಿದೆ ವಿರಹ
ಅಕ್ಷರಕ್ಕೆ ಯಾರೋ ಈ ಮಾಯಾಶಕ್ತಿ ತಂದಾರೋ
ಒಂದೊಂದೂ ಪತ್ರವೂ ಪ್ರೇಮದಾ ಗ್ರಂಥವೋ
ಓಲೆಗಳಿಗ್ಯಾರು ಈ ರಾಯಭಾರ ತಂದಾರೋ
ಓಲೆಗಳೇ ಬಾಳಾಗಿದೇ, ಓದುವುದೇ ಗೀಳಾಗಿದೇ
ಯಾರೋ ನೀನು ಚೆಲುವಾ ಅಂದಿದೇ
||ಕುಶಲವೇ||
ನೂರಾರು ಪ್ರೇಮದಾಸರೂ
ಪ್ರೀತಿಸಿ ದೂರವಾದರೂ
ನಾವಿಂದು ದೂರ ಇದ್ದರೂ
ವಿರಹಗಳೆ ನಮ್ಮ ಮಿತ್ರರೂ
ನೋಡದೇ ಇದ್ದರೂ ಪ್ರೀತಿಸೋ ಇಬ್ಬರೂ
ನೋಡೋರ ಕಣ್ಣಲ್ಲೀ ಏನೇನೋ ಹಾಡೋ ಹುಚ್ಚರು
ದೂರಾನೇ ಆರಂಭ, ಸೇರೋದೇ ಅಂತಿಮ
ಅಲ್ಲಿವರೆಗೂ ಯಾರೂ ಈ ಹುಚ್ಚು ಪ್ರೀತಿ ಮೆಚ್ಚರು
ದೂರದಲೇ ಹಾಯಾಗಿದೇ
ಕಾಯುವುದೇ ಸುಖವಾಗಿದೇ
ಯಾರೇ ನೀನೂ ಚೆಲುವೇ ಅಂದಿದೇ..
||ಕುಶಲವೇ||

Ninna Kannallide Song Lyrics

Ninna Kannallide Song Lyrics


ಚಿತ್ರ: ಚಿರು

ಸಂಗೀತ: ಗಿರಿಧರ್ ದಿವಾನ್

ಸಾಹಿತ್ಯ: ಜಯಂತ್ ಕಾಯ್ಕಿಣಿ

ಗಾಯಕ: ಸೋನು ನಿಗಮ್



ಹೇ..ಹೆ ಹೇ... ಲ ಲಾ ಲ... ಲ ಲಾ ಲಾ...

ಲಾ ಲ ಲಾ... ಲಾ ಲ ಲಾ...ಲಾ... ಲ ಲಾ...

ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ

ಇಂದು ನಿನ್ನಲ್ಲಿದೇ... ಏನೊ ಆಕರ್ಷಣೆ

ಹೃದಯದ ಹಾದಿ ಹಿಡಿಯಲೇ ಬೇಕು

ನೀ ಸುಮ್ಮನೇ...

ಹೇ..ಹೆ ಹೇ... ಯಾರಿಗೂ ತೀರದ ಖಾಸಗೀ ಸಂಭ್ರಮ ಪ್ರೀತಿಗೇ...



ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ

ಇಂದು ನಿನ್ನಲ್ಲಿದೇ... ಏನೊ ಆಕರ್ಷಣೆ

ಹೃದಯದ ಹಾದಿ ಹಿಡಿಯಲೇ ಬೇಕು

ನೀ ಸುಮ್ಮನೇ...



ಕಣ್ಣನು ಮುಚ್ಚಿ ನೋಡಿದರೂನೂ...

ಕಾಣುವ ಲೋಕ ಉನ್ಮಾದಕಾ...

ಸಂದಣಿಯಲ್ಲೂ ಕೇಳಿಸುವಂತ

ದೂರದ ರಾಗ ಸಂಮೋಹಕಾ...

ಇನ್ನೆಲ್ಲಿದೇ ಈ ರೀತಿಯಾ ಸದ್ದಿಲ್ಲದಾ ಆಮಂತ್ರಣಾ

ಹೋದಲ್ಲಿ ಬಂದಲ್ಲಿ ನಿಂತಲ್ಲಿ ರೋಮಾಂಚನಾ...

ಹೇ..ಹೆ ಹೇ... ಯಾರಿಗೂ ತೀರದ ಖಾಸಗೀ ಸಂಭ್ರಮ ಪ್ರೀತಿಗೇ...



ಕನಸಿನ ಮಾಯ ಕನ್ನಡಿಯಲ್ಲೀ

ಮೂಡಿದೆ ರೂಪ ಸಂತೋಷಕೇ...

ನೆನಪಿನ ನೂರು ಬಣ್ಣಗಳಲ್ಲೀ..

ಬಂದಿದೆ ಜೀವ ಸಂದೇಶಕೇ...

ಈ ಯಾನವೂ ಇನ್ನೂ ಖುಷೀ

ಇದ್ದಾಗಲೇ ಈ ಭಾವನೇ

ಬೇಕಿಲ್ಲ ಬಾಳಲ್ಲೀ ಬೇರೇನು ಸಂಪಾದನೇ...

ಹೇ..ಹೆ ಹೇ... ಯಾರಿಗೂ ತೀರದ ಖಾಸಗೀ ಸಂಭ್ರಮ ಪ್ರೀತಿಗೇ...



ನಿನ್ನ ಕಣ್ಣಲ್ಲಿದೇ.. ಒಂದು ಸಂಭಾಷಣೆ

ಇಂದು ನಿನ್ನಲ್ಲಿದೇ... ಏನೊ ಆಕರ್ಷಣೆ

ಹೃದಯದ ಹಾದಿ ಹಿಡಿಯಲೇ ಬೇಕು

ನೀ ಸುಮ್ಮನೇ...