Tuesday 11 April 2017

Yuga Yugagale Sagali song Lyrics

Yuga Yugagale Sagali song Lyrics

ಚಿತ್ರ: ಹೃದಯ ಗೀತೆ
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ: ಎಂ ಎನ್  ವ್ಯಾಸರಾವ್
ನಿರ್ದೇಶನ: ಭಾರ್ಗವಾ
ಗಾಯಕರು: ಎಸ್ ಪಿ ಬಿ

ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ  ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ ನಮ್ಮ ಪ್ರೀತಿ ಶಾಶ್ವತ

ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ

ನಡುಗಲಿ ಭುವಿ ಬಿರಿಯಲಿ ನೀನೆ ಈ ಬಾಳ ಜೀವಾ
ಉರಿಯಲಿ ಕಿಡಿ ಸಿಡಿಯಲಿ ಏಕೆ ಈ ತಾಪ ಭಾವಾ
ಒಲವಿಂದು ತುಂಬಿ ಬಂದು ಮೈ ತುಂಬಾ ಮಿಂಚಿದೆ
ಒಡನಾಡಿ ಪ್ರೀತಿ ನೀಡು ಈ ನಿನ್ನ ಪ್ರೇಮಿಗೆ
ಈ ಭೀತಿ ಇನ್ನೇಕೆ ಈ ದೂರವೇಕೆ

ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ  ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ ನಮ್ಮ ಪ್ರೀತಿ ಶಾಶ್ವತ

ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ

ಭಯವಾ ಬಿಡು ನೀನು ನಿನಗಾಗಿ ಓಡೋಡಿ ಬಂದೆ
ಸುಖದಾ ಮಧು ನೀನು ಬದುಕಲ್ಲಿ ತಂಗಾಳಿ ತಂದೆ
ಅಮರ ಈ ಪ್ರೇಮ ಬರಲಾರದೆಂದೆಂದು ಸಾವು
ಧಹಿಸು ಈ ಮೌನ ಮನದಲ್ಲಿ ಏಕಿಂತ ನೋವು
ಈ ಪ್ರಾಣವೇ ಹೋಗಲಿ ಈ ಲೋಕವೇ ನೂಕಲಿ
ಎಂದೆಂದೂ ಸಂಗಾತಿ ನೀನೇ ......

ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ  ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಅ ಹ ಹ ಹಾ ಹಾ ...... ಅ ಹ ಹ ಹಾ ಹಾ ...... ಅ ಹ ಹ ಹಾ ಹಾ ...... ಅ ಹ ಹ ಹಾ ಹಾ ......

O Mallige Ninnondige Song Lyrics

O Mallige Ninnondige Song Lyrics

ಅನುರಾಗ ಸಂಗಮ
ಸಂಗೀತ: ವಿ ಮನೋಹರ್
ಸಾಹಿತ್ಯ: ವಿ ಮನೋಹರ್
ನಿರ್ದೇಶನ: ವಿ ಉಮಾಕಾಂತ್
ಗಾಯಕರು: ರಮೇಶ್ ಚಂದ್ರ

ಓ  ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
ಈ ಕಂಗಳು ಮಂಜಾದರೆ, ನಾ ತಾಳೆನು, ಭಯ ಬಿಡು ಸದಾ
ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ ..........

ಓ  ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ

ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು
ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು
ನಿನ್ನ ಕೂಡ ನೆರಳ ಹಾಗೆ ಇರುವೆ ನಾನು ಎಂದು ಹೀಗೆ , ಒಂಟಿಯಲ್ಲ ನೀ.......

ಓ  ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ

ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ
ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು, ಧೈರ್ಯ ತಾಳುತಾ

ಓ  ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ
ನಿನ್ನಾ ನೋವು ನನಗಿರಲಿ, ನೆಮ್ಮದಿ ಸವಿ ನಿನಗಿರಲಿ, ಸದಾ ಕಾಯುವೆ ..........
ಓ  ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ ಸದಾ ಸದಾ ಸದಾ

Sihi Muttu Sihi Muttu song lyrics

Sihi Muttu Sihi Muttu song lyrics

ನಾ ನಿನ್ನಾ ಮರೆಯಲಾರೆ
ಸಂಗೀತ: ರಾಜನ್ ನಾಗೇಂದ್ರ
ಸಾಹಿತ್ಯ:ಚಿ ಉದಯಶಂಕರ್
ನಿರ್ದೇಶನ: ವಿಜಯ್
ಗಾಯಕರು: ಪಿ ಬಿ ಶ್ರೀನಿವಾಸ್ & ಎಸ್ ಜಾನಕಿ

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...ಚಿನ್ನದ ತೋಳಲಿ ನನ್ನಾ ಬಳಸುತಾ.......
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...

ಚಿನಕುರಳಿ ಮಾತಿನಲ್ಲಿ ಹೂ ಬಾಣ ನೋಟದಲ್ಲಿ
ಕೋಪದಿ ಸಿಡಿದರೆ ಆನೆ ಪಟಾಕಿ
ನೀ ನಕ್ಕರು ಚೆಂದಾ, ನೀ ಅತ್ತರು ಅಂದ
ಕುಣಿಸುವೆ ತಣಿಸುವೆ ತುಂಟಾಟದಿಂದಾ
ಆ  ಅ ಅ ಆಅ ........ ಓ ಓ ಓ ಹೋ .....

ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...ಚಿನ್ನದ ತೋಳಲಿ ನನ್ನಾ ಬಳಸುತಾ.......
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಮತ್ತೊಂದು
ಕಂದಾ ಕೊಡುವೆಯಾ ...

ಮುತ್ತಂತೆ ನಿನ್ನ ನುಡಿಯೂ, ಒಂದೊಂದು ಜೇನ ಹನಿಯು
ಸವಿಯುತ ನಲಿವುದು ಈ ನನ್ನ ಜೀವಾ
ಈ ನಿನ್ನ ಸ್ನೇಹದಲ್ಲಿ, ನಾ ತೇಲಿ ಸ್ವರ್ಗದಲ್ಲಿ
ಮರೆಯುವೆ ಮನಸಿನ ನೂರೆಂಟು ನೋವಾ

ಆಹಾಹಾ ......... ಆಹಾಹಾ

ಸಿಹಿ ಮುತ್ತು ಸಿಹಿ ಮುತ್ತು ನಂಗೊಂದು, ಕೆನ್ನೆಗೆ ಗಲ್ಲಕೆ ಮತ್ತೊಂದು
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಇನ್ನೊಂದು

ನೀನು ಕೊಡುವೆಯಾ, ಚಿನ್ನದ ತೋಳಲಿ ನನ್ನಾ ಬಳಸುತಾ.......
ನಿನ್ನ ಚಿನ್ನದ ತೋಳಲಿ ನನ್ನಾ ಬಳಸುತಾ
ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು ,ಕೆನ್ನೆಗೆ ಗಲ್ಲಕೆ ಮತ್ತೊಂದು
ಇನ್ನೊಂದು ಮತ್ತೊಂದು, ಇನ್ನೊಂದು ಮತ್ತೊಂದು ಹಾ ...