Monday, 18 December 2017

Nanu Nimmavanu Nimma Maneyavanu Kannada Song

Nanu Nimmavanu Nimma Maneyavanu Kannada Song


ಚಿತ್ರ: ಪುರುಷೋತ್ತಮ (1992)
ಸಾಹಿತ್ಯ-ಸಂಗೀತ: ನಾದಬ್ರಹ್ಮ ಹಂಸಲೇಖ
ಗಾಯನ: ಡಾII ರಾಜ್ ಕುಮಾರ್

ನಾನು ನಿಮ್ಮವನು ನಿಮ್ಮ ಮನೆಯವನು
ನಾನು ನಿಮ್ಮವನು ನಿಮ್ಮ ಮನೆಯವನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು
ನಾನು ನಿಮ್ಮವನು ನಿಮ್ಮ ಮನೆಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು

ನಾನು ನಿಮ್ಮವನು ನಿಮ್ಮ ಮನೆಯವನು

ತಬ್ಬಲಿ ಕರುವಾಗಿ, ನಡುಬೀದಿಯ ಮಗುವಾಗಿ
ಜನಿಸಿದ ನನಗೆ ಸತ್ಯದ ಜೊತೆಗೆ ಬೆಸುಗೆ ಹಾಕಿದಿರಿ
ಕಣ್ಣನು ತೆರೆಸಿದಿರಿ, ಮನದೀಪವ ಬೆಳಗಿದಿರಿ
ಬದುಕಿಗೆ ಒಂದು ಗುರಿಯನು ತಂದು ದಾರಿ ತೋರಿದಿರಿ
ನಾನು ನಿಮ್ಮವನು ನಿಮ್ಮ ಋಣದವನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು
ನಾನು ನಿಮ್ಮವನು ನಿಮ್ಮ ಮನೆಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು

ನಾನು ನಿಮ್ಮವನು ನಿಮ್ಮ ನೆರೆಯವನು

ಬಡತನ ತೊಲಗಿಸುವೆ, ದಬ್ಬಾಳಿಕೆ ಅಡಗಿಸುವೆ
ಮಡಿಯುವವರೆಗೆ ದುಡಿಯುವೆ ನಿಮಗೆ
ಬೇರೇ ಗುರಿಯಿಲ್ಲ
ನ್ಯಾಯಕೆ ಜಯ ತರುವೆ, ಅನ್ಯಾಯವ ಬಡಿದಿಡುವೆ
ಹಸಿವಿನ ಕೂಗು ಅಳಿಯುವವರೆಗೂ
ದಣಿವೇ ನನಗಿಲ್ಲ
ನಾನು ನಿಮ್ಮವನು ನಿಮ್ಮ ಸ್ನೇಹಿತನು
ನಿಮ್ಮ ಕಂಬನಿ ಒರೆಸುವ ಮಗನು
ನಿಮ್ಮ ಚಿಂತೆಯ ಮರೆಸುವ ಮಗನು
ನಾನು ನಿಮ್ಮವನು ನಿಮ್ಮ ಮನೆಮಗನು
ನಿಮ್ಮ ನೋವಿಗೆ ಮಿಡಿಯುವೆ ನಾನು
ನಿಮ್ಮ ಸೇವೆಗೆ ದುಡಿಯುವೆ ನಾನು

ನಾನು ನಿಮ್ಮವನು...
ನಿಮ್ಮ ಮನೆಯವನು...
ನಾನು ನಿಮ್ಮವನು...
ನಿಮ್ಮ ಮನೆಮಗನು...

Shilegalu Sangeethava Haadide Kannada Song Lyrics

Shilegalu Sangeethava Haadide Kannada Song Lyrics


ಆ.. ಲಲಲ ಲಲಲ ಲಲಲ ಲಲಲ
ಸ ರಿ ಗ ಪ    ಗ ಪ ದ ಸ   ಪ ದ ಸ ರಿ ಗಾ
ಶಿಲೆಗಳು ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ
ಅನು ದಿನ ಅನು ಕ್ಷಣ ಕುಣಿಯುತಲೀ
ಶಿಲೆಗಳು ಸಂಗೀತವಾ ಹಾಡಿವೆ ||


ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ
ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಕುಣಿಯುವ ಕಾಲ್ಗೆಜ್ಜೆ ಘಲ ಘಲ ಎನುವಂತೆ
ಅರಳಿದ ಕಣ್ಬೆಳಕು ಫಳ ಫಳ ಹೊಳೆದಂತೆ
ಆ ಶಿಲ್ಪಿಯಾ ಹೊಂಗನಸಿನಾ
ಸೌಂದರ್ಯದಾ ಕನ್ನಿಕೆಯರೂ
ಕರವಾ ಮುಗಿದೂ ಶರಣೂ ಯಂದೂ
ಭಕುತಿಯಲೀ ಶ್ರೀಹರಿಯಾ ಸ್ತುತಿಸುತ
ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಶಿಲೆಗಳು ಸಂಗೀತವಾ
ಶಿಲೆಗಳು ಸಂಗೀತವಾ ಹಾಡಿ ..ಆ....   ಅ ಅ ಅ ಅ ಅ  ಆ..
ಶಿಲೆಗಳು ಸಂಗೀತವಾ ಹಾಡಿವೆ
ಬೇಲೂರ ಗುಡಿಯಲ್ಲಿ ಕೇಶವ ನೆದುರಲ್ಲಿ
ಅನು ದಿನ ಅನು ಕ್ಷಣ ಕುಣಿಯುತಲೀ .........
ಶಿಲೆಗಳು ಸಂಗೀತವಾ ಹಾಡಿವೆ ||

ಶಿಲೆಯಲೆ ಕಲೆಯನ್ನು ಸೆರೆಹಿಡಿದಾ ...
ಗಾ ರಿ ಸಾ ದ ಪ ದ  ಸಾ ದ ಪಾ ಗ ರಿ ಸ
ದಾ  ಸರಿಗರಿಸಾ    ರೀ ರೀ  ಗಪದಪಗಾ 
ಗಾಗಾಗಾ ಪದಸದಪಾ
ಗ ರಿ ಸ   ರಿ ಸ ದ   ಪ ದ ಸಾ
ಶಿಲೆಯಲೆ ಕಲೆಯನ್ನು ಸೆರೆಹಿಡಿದಾ
ಕಲೆಯನು ಶಿಲೆಯಲ್ಲಿ ಅರಳಿಸಿದಾ
ಉಳಿಯಿಂದ ಮೀಟಿ ಹೊಸ ನಾದ ತಂದು
ಹೊಸ ರೂಪ ತಂದ ಕಲೆಗಾರನ..
ಉಳಿಯಿಂದ ಮೀಟಿ ಹೊಸ ನಾದ ತಂದು
ಹೊಸ ರೂಪ ತಂದ ಕಲೆಗಾರನ..
ಯಾವ ರೀತಿ ಈಗ ನಾನು ಹಾಡಿ
ಹೊಗಳುದುವೋ  ಕುಣಿಯುದುವೋ ಎನ್ನುತ 
ಸಂಗೀತವಾ ಹಾಡಿವೆ
ಶಿಲೆಗಳು ಸಂಗೀತವಾ ಹಾಡಿವೆ ....

ಗ ರಿ ಸ   ಗ ರಿ ಸ   ದ ಸ   ರಿ ಗ  ರಿ ಗ  ಸ ರಿ ಗ ಪ
ದ ಪ ಪ   ದ ಪ ಪ   ಪ ಗ   ಗ ರಿ ರಿ ಸ  ಸ ದ ದಾ ಗಾ...
ಗಗ್ಗ ಗಾಗ  ಗ ಗ   ಗ ಗ ಗ ಗ   ಗ ಗ ಗ ಗ
ರಿ ಗ ಗ ಗ    ಸ ರಿ ರಿ ರಿ   ದ ಸ ಸ ಸ    ದ ಗ ಗ ಗ
ಪಪ್ಪ ಪಾಪ  ಪ ಪ    ಪ ಪ ಪ ಪ  ಪ ಪ ಪ ಪ
ದ ಪ ಪ ಗ   ಗ ರಿ ರಿ ಸ  ದ ಪ ಪ ಗ   ಗ ರಿ ರಿ ಸ
ಸ ರೀ ರಿ  ಸ ಗಾ ಗ   ರಿ ಪಾ ಪ   ಗ ದಾ ದ  ಸಾ....
ದ ದ ದ ಸಾ ಸ ಸ ಸ   ದ ದ ದ ಸಾ ಸ ಸ ಸ
ದ ದ ದ ರೀ ರಿ ರಿ ರಿ    ದ ದ ದ ರೀ ರಿ ರಿ ರಿ
ಗ ರಿ ಗ   ರಿ ಸ ರಿ  ಸ ದ ಸ    ದ ಪ ದ
ಗ ರಿ ಗ ಗ  ರಿ ಸ ರಿ ರಿ  ಸ ದ ಸ ಸ   ದ ಪ ದ ದ  ಗಾ..

Thayi Sharade Loka Poojithe Lyrics

Thayi Sharade Loka Poojithe Lyrics


ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ

ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಶಾಂತಿಯಾ ಉಳಿಸು
ಶಾಂತಿಯಾ ಉಳಿಸು

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ನಮ್ಮ ಕೋರಿಕೆ ಆಲಿಸಮ್ಮ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಆಸೆ ಪೂರೈಸೂ
ಆಸೆ ಪೂರೈಸೂ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ..