Monday, 18 December 2017

Yara Huvu Yara Mudigo Kannada Song Lyrics

Yara Huvu Yara Mudigo Kannada Song Lyrics 


ಚಿತ್ರ: Besuge
ಸಾಹಿತ್ಯ: Shyamasundar Kulkarni
ಸಂಗೀತ: Vijay Bhaskar
ಗಾಯಕರು: S P Bhalasubramanyam
ವರ್ಷ: 1976

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಮುಖದಿ ಒಂದು ಭಾವನೆ ಕಣ್ಣಲೇನೋ ಕಾಮನೆ
ಒಂದು ಮನದ ಯೋಚನೆ ಒಂದು ಮನಕೆ ಸೂಚನೆ
ಯಾರೂ ಅರಿಯಲಾರರು ಯಾರ ಪಾಲು ಯಾರಿಗೋ ಯಾರಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಒಂದು ಸುಮವು ಅರಳಿತು ದುಂಬಿಯನ್ನು ಒಲಿಸಿತು
ಮೋಹ ಪಾಶ ಎಸೆಯಿತು ಒಂದು ಪಾಠ ಕಲಿಸಿತು
ಇಂಥ ಪಾಠ ಕಲಿಸಲು ಗುರುವು ಯಾರು ಯಾರಿಗೋ ಯಾರಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಎಂದೋ ಹುಟ್ಟಿದಾಸೆಯೂ ಇಂದು ಮನವ ತಟ್ಟಿತು
ಮನದ ಕದವ ತೆರೆಯಲು ಬೇರೆ ಗುರಿಯ ಮುಟ್ಟಿತು
ಯಾರು ಹೇಳಬಲ್ಲರು ಯಾರ ಪಯಣ ಎಲ್ಲಿಗೋ ಎಲ್ಲಿಗೋ...

ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ
ಇಂಥ ಪ್ರೇಮದಾಟದಿ ಯಾರ ಹೃದಯ ಯಾರಿಗೋ
ಯಾವ ಹೂವು ಯಾರ ಮುಡಿಗೋ
ಯಾರ ಒಲವು ಯಾರ ಕಡೆಗೋ

Dundu Mallige Mathadeya Kannada Song Lyrics

Dundu Mallige Mathadeya Kannada Song Lyrics


ದುಂಡು ಮಲ್ಲಿಗೆ ಮಾತಾಡೆಯಾ
ಚಿತ್ರ: ನನ್ನ ದೇವರು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: 1982

ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ

ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ

ನೀನಾಡೋ ಮಾತೆಲ್ಲಾ ಜೇನಂತೆ ನೀ ಹಾಡೋ ಸಂಗೀತ ಇಂಪಂತೆ
ನೀನಾಡೋ ಮಾತೆಲ್ಲಾ ಜೇನಂತೆ ನೀ ಹಾಡೋ ಸಂಗೀತ ಇಂಪಂತೆ
ಆಸೆ ಬಂದಂತೆ ಸೋತು ನಾ ನಿಂತೆ ಓ ಹೆಣ್ಣೇ ಬಲ್ಲೆಯಾ

ನಗುವಾಗ ಈ ಮೊಗವು ಶಶಿಯಂತೆ ನಲಿದಾಗ ಕುಣಿದಾಡೋ ನವಿಲಂತೆ
ನಗುವಾಗ ಈ ಮೊಗವು ಶಶಿಯಂತೆ ನಲಿದಾಗ ಕುಣಿದಾಡೋ ನವಿಲಂತೆ
ನಿನ್ನ ಕಂಡಂದೆ ಒಲಿದು ನಾ ಬಂದೆ ನಿನ್ನನ್ನು ಬಯಸಿದೆ
ಬಂದೀಗ ಸೇರಿದೆ

ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ

ನಿನ್ನಂಥ ಹೆಣ್ಣನ್ನು ಕಂಡಿಲ್ಲ ಯಾರಲ್ಲೂ ನಾ ಹೀಗೆ ಸೇರಿಲ್ಲ
ನಿನ್ನಂಥ ಹೆಣ್ಣನ್ನು ಕಂಡಿಲ್ಲ ಯಾರಲ್ಲೂ ನಾ ಹೀಗೆ ಸೇರಿಲ್ಲ
ಏಕೋ ನಾ ಕಾಣೆ ನಂಬು ನನ್ನಾಣೆ ಒಲವಿಂದ ಸೇರೆಯಾ

ನನ್ನಾಸೆ ನಿನ್ನಲ್ಲಿ ಏಕಿಲ್ಲ ಈ ಮೌನ ನಿನಗಿನ್ನೂ  ಸರಿಯಲ್ಲ
ನನ್ನಾಸೆ ನಿನ್ನಲ್ಲಿ ಏಕಿಲ್ಲ ಈ ಮೌನ ನಿನಗಿನ್ನೂ  ಸರಿಯಲ್ಲ
ನೋಡು ನೀನಿಲ್ಲಿ ಬೇರೆ ಯಾರಿಲ್ಲ ಕಣ್ಣಲ್ಲೇ ಕೊಲುವೆಯಾ
ಇಲ್ಲ ಮುತ್ತೊಂದ ಕೊಡುವೆಯಾ

ದುಂಡು ಮಲ್ಲಿಗೆ ಮಾತಾಡೆಯಾ
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ ಸಂಕೋಚ ತುಂಬಿ ಹೋಗಿ
ನಾಚಿ ನೀನು ಮೊಗ್ಗಾದೆಯಾ
ದುಂಡು ಮಲ್ಲಿಗೆ ಮಾತಾಡೆಯಾ

Naaniruvude Ninagagi Kannada Movie song Lyrics

ಚಿತ್ರ: ನಾನಿರುವುದೆ ನಿನಗಾಗಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ
ವರ್ಷ: ೧೯೭೯

ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ

ಕೈಜಾರಿದ ಮುತ್ತೊಂದು ಕೈ ಸೇರಿತು ತಾ ಬಂದು
ಹೊಸ ಹರುಷ ಪ್ರತಿ ನಿಮಿಷ ಶಾಂತಿ ನೀಡಿತು ನನಗಿಂದು

ನಿನಗಾಸರೆ ನಾನಾಗಿ ನನ್ನ ಕೈಸೆರೆ ನೀನಾಗಿ
ಕನಸುಗಳು ನನಸಾಗಿ ಬಾಳು ಹೊನ್ನಿನ ಕಡಲಾಗಿ
ಹೊಸತನ ಕಾಣುವ ಹಾಯಾಗಿ

ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ

ನನ್ನಾಸೆಯ ಹೂವಾಗಿ ನನ್ನೊಲವಿನ ಜೇನಾಗಿ
ಜೊತೆಯಲ್ಲೆ ಒಂದಾಗಿ ಎಂದು ನೀನಿರು ಸುಖವಾಗಿ

ನಾ ನೋಡುವ ಕಣ್ಣಾಗಿ ನಾ ಹಾಡುವ ಹಾಡಾಗಿ
ಬಾಳಿನಲಿ ಬೆಳಕಾಗಿ ಸೇರು ನನ್ನಲಿ ಹಿತವಾಗಿ
ಹೊಸತನ ಕಾಣುವ ಹಾಯಾಗಿ

ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ
ನೀನಿರುವೆ ನನಗಾಗಿ ನಾನಿರುವುದೆ ನಿನಗಾಗಿ
ಕುಂಕುಮವಿರುವುದೇ ಹಣೆಗಾಗಿ
ಅರಳಿದ ಹೂವು ಮುಡಿಗಾಗಿ
ಶುಭದಿನ ಕಾದಿದೆ ನಮಗಾಗಿ