Monday, 18 December 2017

Thayi Sharade Loka Poojithe Lyrics

Thayi Sharade Loka Poojithe Lyrics


ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ

ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಶಾಂತಿಯಾ ಉಳಿಸು
ಶಾಂತಿಯಾ ಉಳಿಸು

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ನಮ್ಮ ಕೋರಿಕೆ ಆಲಿಸಮ್ಮ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಆಸೆ ಪೂರೈಸೂ
ಆಸೆ ಪೂರೈಸೂ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ..

shruti seride Hithavagide Kannada song lyrics

shruti seride Hithavagide Kannada song lyrics


ಶ್ರುತಿ ಸೇರಿದೆ ಹಿತವಾಗಿದೆ
ಚಿತ್ರ: ಶ್ರುತಿ ಸೇರಿದಾಗ
ರಚನೆ: ಚಿ. ಉದಯಶಂಕರ್
ಸಂಗೀತ: ಟಿ. ಜಿ. ಲಿಂಗಪ್ಪ
ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ

ಹೆ:   ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ
ಗಂ:  ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ
ಹೆ:   ಶ್ರುತಿ ಸೇರಿದೆ
ಗಂ:  ಹಿತವಾಗಿದೆ

ಗಂ:  ಹೊಸ ರಾಗದ ಲತೆಯಲ್ಲಿ ಹೊಸ ಪಲ್ಲವಿ ಹೂವಾಗಿದೆ ।೨।
        ಹೊಸ ಆಸೆಯ ಕಂಪಿಂದ ಹೊಸ ಪ್ರೇಮವು ಸವಿಯಾಗಿದೆ ।೨।
ಹೆ:   ಹೊಸ ಲೋಕವು ಕಣ್ತುಂಬಿ ಹೊಸ ರೀತಿಯು ತಂದಾಗಿದೆ ।೨।
        ಬದುಕೆಲ್ಲಾ ಹಸಿರಾಗಿ, ಒಲವೊಂದೇ ಉಸಿರಾಗಿ

ಗಂ:  ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ
ಹೆ:   ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ

ಹೆ:   ಮಳೆಗಾಲವು ಬಂದಾಗಿದೆ, ನೆಲವೆಲ್ಲಾ ಹಸಿರಾಗಿದೆ ।೨।
        ಚಳಿಗಾಲವ ಕಂಡಾಗಿದೆ ಮಂಜಿನ ತೆರೆ ಹಾಸಿದೆ ।೨।
ಗಂ:  ಋತು ಚಕ್ರವು ಉರುಳಿರಲು ಬಾಳೆಂಬುವ ಬಳ್ಳಿಯಲಿ ।೨।
        ಹೊಸದೊಂದು ಮೊಗ್ಗಾಗಿ ತಂಪಾರದ ಬೆಳಕಾಗಿ

ಹೆ:   ಶ್ರುತಿ ಸೇರಿದೆ, ಹಿತವಾಗಿದೆ, ಮಾತೆಲ್ಲವು ಹಿಂಪಾಗಿದೆ
ಗಂ:  ಹಿತವಾಗಿದೆ
ಜೊ: ಮಾತೆಲ್ಲವು ಹಿಂಪಾಗಿದೆ
        ಶ್ರುತಿ ಸೇರಿದೆ, ಹಿತವಾಗಿದೆ

Jeevana Chaithra Kannada Song Lyrics

ಚಿತ್ರ: ಜೀವನ ಚೈತ್ರ
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ಮಂಜುಳಾ ಗುರುರಾಜ್

ಗಂ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
      ನೆನೆಯಲು ಕಾಮನ ಸುಮಬಾಣನ ಅದೇ ದಿನ
      ಕುಣಿಯಿತು ಮನ, ತಣಿಸುತ ನನ್ನಾ
      ನಯನದಿ ನಯನ ಬೆರೆತಾ ಕ್ಷಣ ।2।
ಹೆ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
      ನೆನೆಯಲು ಕಾಮನ ಸುಮಬಾಣನ ಅದೇ ದಿನ
      ಕುಣಿಯಿತು ಮನ, ತಣಿಸುತ ನನ್ನಾ
      ನಯನದಿ ನಯನ ಬೆರೆತಾ ಕ್ಷಣ ।2।
ಜೊ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ

ಗಂ:  ಶೃಂಗಾರದ ಸಂಗೀತದ ಸ್ವರ ಮೂಡುತಲಿರೇ
      ಅನುರಾಗದ ನವಪಲ್ಲವಿ ಎದೆ ಹಾಡುತಲಿರೇ
ಹೆ:  ಹಣ್ಣಾದೆನು ಹೆಣ್ಣಾದೆನು ನಸುಸಾಚಿಕೆ ಬರೇ
      ನಿನ್ನ ಆಸೆಯು ನನ್ನ ಆಸೆಯು  ಜೊತೆಯಾಗುತಲಿರೇ
ಗಂ:  ನಿನ್ನ ಚಲುವಿನಲೀ, ನಿನ್ನ ಒಲವಿನಲೀ, ಹುಸಿ ನಗುವಿನಲೀ, ಮೃದು ನುಡಿಗಳಲೀ
ಹೆ:  ಸಿಹಿ ಜೇನಿನ ಸವಿ ಕಂಡೆನು ನಿನ್ನ ನೋಡುತಲಿರೇ

ಜೊ: ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ

ಹೆ:  ಉಲ್ಲಾಸದೀ ತಂಗಾಳಿಯು ತನು ಸೋಕುತಲಿರೇ
      ಬಿಳಿಮೋಡವು ನಸುಗೆಂಪಿನ ರಂಗಾಗುತಲಿರೇ
ಗಂ:  ಸಂತೋಷದ ಉಯ್ಯಾಲೆಯು ತೂಗಾಡುತಲಿರೇ
      ಮಧುಮಾಸದ ನೆನಪಾಯಿತು ಹಿತವಾಗುತಲಿರೇ
ಹೆ:  ಮಾಮರಗಳಲೀ, ಹಸಿರೆಲೆಗಳಲೀ, ಮನತಣಿಸುತಲೀ, ಸುಖತುಂಬುತಲೀ
ಗಂ:  ಮರಿಕೋಗಿಲೆ ಹೊಸರಾಗದ ಧನಿ ಮಾಡುತಲಿರೇ

ಹೆ:  ನಿನ್ನ ಚೆಲುವ ವದನ ಕಮಲ ನಯನ ಸೆಳೆಯಲು ನಾ
ಗಂ:  ನೆನೆಯಲು ಕಾಮನ ಸುಮಬಾಣನ ಅದೇ ದಿನ
ಹೆ:  ಕುಣಿಯಿತು ಮನ, ತಣಿಸುತ ನನ್ನಾ
ಗಂ:  ನಯನದಿ ನಯನ ಬೆರೆತಾ ಕ್ಷಣ
ಹೆ:  ನಯನದಿ ನಯನ ಬೆರೆತಾ ಕ್ಷಣ