Monday, 18 December 2017

Bhumi Thayane Kannada Song Lyrics

Bhumi Thayane Kannada Song Lyrics


ಭೂಮಿ ತಾಯಾಣೆ ನೀ ಇಷ್ಟ ಕಣೆ
ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ-  2
ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ -2
ಏ ಚೂಟಿ…..ಏ ನಾಟಿ……

ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ - 2
ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ - 2
ನೀ ಚೂಟಿ……ನೀ ಘಾಟಿ……

ಗಂಡು : ಪೇಟೆ ಹೆಣ್ಣ,ಬಣ್ಣ ಕಂಡೆ,ಕೊಂಚ ದಂಗಾಗಿ ನಾ ದೂರ ನಿಂತೆ
ತುಂಟಿ ನೀನು,ಅಂಟಿಕೊಂಡೆ,ಪ್ರೀತಿ ನಂಟಾಗಿ ಸಲ್ಲಾಪ ತಂದೆ
ಹೆಣ್ಣು : ಕೊಂಕು ಮಾತು,ನನ್ನ ಸೋಕಿ,ಮೋಹ ಮಿಂಚಾಗಿ ಮೈಯೆಲ್ಲ ಬೆಂಕಿ
ಮೋಡಿ ಮಾಡಿ,ಕಾಡಿ ಬೇಡಿ,ಹೊಂದಿ ಈ ಸ್ನೇಹ ಹಣ್ಣಾಯ್ತು ಕೂಡಿ

ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಗಂಡು : ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೆಣ್ಣು : ಆಹಾ.. ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ

ಗಂಡು : ಕಣ್ಣ ನೋಟ,ಆಸೆ ತಂದೆ,ನಿನ್ನ ಸಹವಾಸ ಹಾಲ್ಜೇನಿನಂತೆ
ನನ್ನ ನೀನು,ನಿನ್ನ ನಾನು,ನಂಬಿ ಬೆರೆಯೋಣ ಹೂದುಂಬಿಯಂತೆ
ಹೆಣ್ಣು : ನೆನ್ನೆ ನಾಳೆ,ಎಲ್ಲಾ ಮೀರಿ,ರಂಗು ರಂಗಾಗಿ ಬೆರೆಯೋಣ ಸೇರಿ
ಎಲ್ಲಿ ನೀನೋ,ಅಲ್ಲಿ ನಾನೂ,ಎಂದೂ ಒಂದಾಗಿ ಸಾಗೋಣ ದಾರಿ

ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಗಂಡು : ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೆಣ್ಣು : ಹಹ..ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ಹೇ ಚೂಟಿ…..
ಗಂಡು : ನೀ ಘಾಟಿ…
ಗಂಡು : ಭೂಮಿ ತಾಯಾಣೆ ನೀ ಇಷ್ಟ ಕಣೆ
ಹೆಣ್ಣು : ಅಯ್ಯೋ ಮಂಕಣ್ಣ ನೀ ನನ್ನಾವನೇ
ಗಂಡು : ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೆಣ್ಣು : ಹಹ..ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ಹೇ ಚೂಟಿ…..
ಗಂಡು : ನೀ ಘಾಟಿ…

Thananam Thananam Kannada Song Lyrics

Thananam Thananam Kannada Song Lyrics


ತನನಂ ತನನಂ.. ತನನಂ ತನನಂ..
ತನನಂ ತನನಂ ಎನಲು ಮನಸು ನೀನೆ ಕಾರಣ..
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ..
ಉಸಿರೆ ಮೇಳಾ.. ಹಾಡೆ ಮಂತ್ರಾ..
ಆಕಾಶ ಭೂಮಿ ಎಲ್ಲಾ ಚಪ್ಪರಾ.....

ತನನಂ ತನನಂ.. ತನನಂ ತನನಂ..
ತನನಂ ತನನಂ ಎನಲು ಮನಸು ನೀನೆ ಕಾರಣ..
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ..
ಉಸಿರೆ ಮೇಳಾ.. ಹಾಡೆ ಮಂತ್ರಾ..
ಆಕಾಶ ಭೂಮಿ ಎಲ್ಲಾ ಚಪ್ಪರಾ.....
ತನನಂ ತನನಂ.. ತನನಂ ತನನಂ..
ತನನಂ ತನನಂ ಎನಲು ಮನಸು ನೀನೆ ಕಾರಣ..

ಮದುವೆ ಮುಗಿದಮೇಲೆ.. ಮಾತೆ ನಿಲಿಸೋಣ..
ಹೋಗಿ ಬಂದು ಹೋಗಿ.. ಪ್ರೀತಿ ಮಾಡೋಣ..
ಕಣ್ಣಲ್ಲಿ ಕಾಮನ್ನಾ.. ಕಂಡಾಗ ಕರೆಯೋಣ..
ಅವನಿಂದ ಸರಿಯಾಗಿ.. ಸರಸಾನ ಕಲಿಯೋಣ..
ತಂದಾನತಾನನಾನ ತಾನಾನನ..
ಗಾಳಿನೆ ತೂರದಂತ ಆಲಿಂಗನಾ..
ತಂದಾನತಾನನಾನ ತಾನಾನನ..
ಕೇಳೆನ್ನ ಕಿವಿತುಂಬಾ ಪ್ರೇಮಾಯಣ..
ನನ್ನ ಕೃಷ್ಣನು ನೀನು,
ನನ್ನ ರುಕ್ಮಿಣಿ ನೀನು,
ನಂಗು ನಿಂಗು ನಾಳೆ ಕಲ್ಯಾಣ.

ತನನಂ ತನನಂ.. ತನನಂ ತನನಂ..
ತನನಂ ತನನಂ ಎನಲು ಮನಸು ನೀನೆ ಕಾರಣ..
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ..

ಹುಡುಗಿ ರಾಗಿಮುದ್ದೆ.. ನುಂಗೊಹಾಗಿಲ್ಲ..
ಹುಡುಗ ಬೆಣ್ಣೆಮುದ್ದೆ.. ಕರಗೋಹಾಗಿಲ್ಲ..
ಪಂಚಾಂಗ ನೋಡೊಣ.. ಸೋಬಾನೆ ಹಾಡೋಣ..
ಮುದ್ದೇನು ಬೆಣ್ಣೇನು.. ಆ ರಾತ್ರಿ ಮುಗಿಸೋಣ..
ತಂದಾನತಾನನಾನ ತಾನಾನನ..
ತಾನಾಗಿ ಹುಟ್ಟುವುದೆ ಆಲಾಪನಾ..
ತಂದಾನತಾನನಾನ ತಾನಾನನ..
ತನ್ನನ್ನೆ ನೀಡುವುದೆ ಆರಾಧನಾ..
ನನ್ನ ನಾಯಕಿ ನೀನು,
ನನ್ನ ನಾಯಕ ನೀನು,
ನಂಗು ನಿಂಗು ನಾಳೆ ಕಲ್ಯಾಣ.

ತನನಂ ತನನಂ.. ತನನಂ ತನನಂ..
ತನನಂ ತನನಂ ಎನಲು ಮನಸು ನೀನೆ ಕಾರಣ..
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ..
ಉಸಿರೆ ಮೇಳಾ.. ಹಾಡೆ ಮಂತ್ರಾ..
ಆಕಾಶ ಭೂಮಿ ಎಲ್ಲಾ ಚಪ್ಪರಾ......
ತನನಂ ತನನಂ ಎನಲು ಮನಸು ನೀನೆ ಕಾರಣ..
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ...

Olave Jeevana Sakshatkara Kannada Song Lyrics

Olave Jeevana Sakshatkara Kannada Song Lyrics


ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ

ದುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ
ದುಂಭಿಯ ಹಾಡಿನ ಜ್ಹೆಂಕರದಲ್ಲೂ
ಗಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲು
ತುಂಬಿದೆ ಒಲವಿನ ಸಾಕ್ಷಾತ್ಕಾರ

ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ

ವಸಂತ ಕೋಗಿಲೆ ಪಂಚ ಮನೋಹರ
ಗಂದಾರ ಭಾಷೆಯ ಹಕ್ಕಿಗಳಿಂಚರ
ಈ ಮಲೆನಾಡಿನ ಭೂರಮ್ಯ ಶೃಂಗಾರ
ಚೆಲುವಿನ ಒಲವಿನ ಸಾಕ್ಷಾತ್ಕಾರ

ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ

ಒಲವಿನ ಪೂಜೆಗೆ ಒಲವೇ ಮಂದಾರ
ಒಲವೇ ಬದುಕಿನ ಬಂಗಾರ
ಒಲವಿನ ನೆನಪೇ ಹೃದಯಕೆ ಮಧುರ
ಒಲವೇ ದೈವದ ಸಾಕ್ಷಾತ್ಕಾರ

ಒಲವೇ ಜೀವನ ಸಾಕ್ಷಾತ್ಕಾರ
ಒಲವೇ ಮರೆಯದ ಮಮಕಾರ
ಒಲವೇ ಮರೆಯದ ಮಮಕಾರ