Monday, 18 December 2017

Yarale Ninna Mechidavanu Kannada Song Lyrics

Yarale Ninna Mechidavanu Kannada Song Lyrics


ಚಿತ್ರ: ಸಿಪಾಯಿ (1996)
ಸಾಹಿತ್ಯ-ಸಂಗೀತ: ಹಂಸಲೇಖ ನಾದಬ್ರಹ್ಮ
ಗಾಯನ: ಮನು, ಎಸ್. ಜಾನಕಿ & ಕೋರಸ್

ಯಾರೆಲೇ ನಿನ್ನ ಮೆಚ್ಚಿದವನು.. ಒ ಹೋಹೊ
ಯಾರೆಲೇ ಕೆನ್ನೆ ಕಚ್ಚುವವನು.. ಒ ಹೋಹೊ
ಯಾರೆಲೇ ಮಲ್ಲೆ ಮುಡಿಸುವವನು.. ಒ ಹೋಹೊ
ಯಾರೆಲೇ ಸೆರಗ ಎಳೆಯುವವನು.. ಒ ಹೋಹೊ

ಹೇಳೇ ಹುಡುಗಿ.. ಹೇಳೇ ಬೆಡಗಿ..
ನಿನ್ನ ಸೆರಗ ಎಳೆಯೋ ಹುಡುಗ ನಾನು ತಾನೇ
ನಿನ್ನ ಗಂಡ ನಾನೇ

ಇಲ್ಲಾ ಇಲ್ಲಾ.. ಆಗೋದಿಲ್ಲ..
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಜೀವದ ಗೊಂಬೆ ನಾನಮ್ಮ..
ಭೀಮನೆಂಬ ಮಣ್ಣು ಗೊಂಬೆ ಯಾಕಮ್ಮ..

ಗೊಂಬೆ ಬೇಕು ಪೂಜೆಗೆ
ಪೂಜೆ ಬೇಕು ಮನಸಿಗೆ
ಮನಸು ಬೇಕು ಪ್ರೀತಿಗೆ
ಪ್ರೀತಿ ಬೇಕು ಹೆಣ್ಣಿಗೆ

ಯಾರೆಲೇ ನೀನು ಮೆಚ್ಚಿದವನು.. ಒ ಹೋಹೊ
ಯಾರೆಲೇ ತಾಳಿ ಕಟ್ಟುವವನು.. ಒ ಹೋಹೊ
ಯಾರೆಲೇ ನಿನ್ನ ಕಾಡುವವನು.. ಒ ಹೋಹೊ
ಯಾರೆಲೇ ನಿನ್ನ ಕೂಡುವವನು.. ಒ ಹೋಹೊ

ಹೇಳೇ ಹುಡುಗಿ.. ಹೇಳೇ ಬೆಡಗಿ..
ನಿನ್ನ ಉಸಿರು ಹೇಳೋ ಹೆಸರು ನಂದು ತಾನೇ
ನಿನ್ನ ಗಂಡ ನಾನೇ

ಇಲ್ಲಾ ಇಲ್ಲಾ.. ಆಗೋದಿಲ್ಲ..
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

ಸಾವಿರ ಜನ್ಮ ಬರಲಮ್ಮ
ನನ್ನ ಪ್ರೀತಿ, ನನ್ನ ಪ್ರಾಣ ನಿನಗಮ್ಮ

ಚಂದಮಾಮ ಅಲ್ಲಿದೆ
ನೈದಿಲೆ ಹೂ ಇಲ್ಲಿದೆ
ಚಂದ್ರನೇ ಇಲ್ಲಿ ಬಂದರೆ
ಹೂವಿಗೇ ಭಯವಾಗದೆ

ಯಾರೆಲೇ ನಿನ್ನ ಮುದ್ದು ಗಂಡ.. ಒ ಹೋಹೊ
ಯಾರೆಲೇ ನಿನ್ನ ತುಂಟ ಗಂಡ.. ಒ ಹೋಹೊ
ಯಾರೆಲೇ ನಿನ್ನ ವೀರ ಗಂಡ.. ಓ ಹೋಹೊ
ಯಾರೆಲೇ ನಿನ್ನ ಧೀರ ಗಂಡ.. ಒ ಹೋಹೊ

ಹೇಳೇ ಹುಡುಗಿ.. ಹೇಳೇ ಬೆಡಗಿ..
ವೀರ ಧೀರ ಜೋಕುಮಾರ ನಾನು ತಾನೇ
ನಿನ್ನ ಗಂಡ ನಾನೇ

ಇಲ್ಲಾ ಇಲ್ಲಾ.. ಆಗೋದಿಲ್ಲ..
ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ
ಸಲಿಗೆ ಚಂದ ಅಲ್ಲ

Akashadinda Theralli Kannada Song Lyrics

Akashadinda Theralli Kannada Song Lyrics


ಚಿತ್ರ :ಬೇವು ಬೆಲ್ಲ
ಸಂಗೀತ -ಸಾಹಿತ್ಯ :ನಾದಬ್ರಹ್ಮ
ಹಾಡಿದವರು :S P B.Chithra

ಪಿ ಪೀಪಿ ಪಿ ಡುಂ ಡುಡು ಡುಂ ಡುಂ
ಆಕಾಶದಿಂದ ತೇರಿನಲ್ಲಿ ಚೆಲುವೆ ಬರ್ತಾಳೆ
ನಾಳೆ ನನ್ನ ಮದುವೆ ಆಗ್ತಾಳೆ
ಆಕಾಶದಿಂದ ತೇರಿನಲ್ಲಿ ಚೆಲುವೆ ಬರ್ತಾಳೆ
ನಾಳೆ ನನ್ನ ಮದುವೆ ಆಗ್ತಾಳೆ
ಓ..ಓ..ಓ..ಓ..ಓಹೋ

ಆಕಾಶದಿಂದ ತೇರಿನಲ್ಲಿ ಚೆಲುವೆ ಬರ್ತಾಳೆ
ನಾಳೆ ನನ್ನ ಮದುವೆ ಆಗ್ತಾಳೆ
ಕಾವೇರಿ ತಾಯಿ ಊರಿನಲ್ಲಿ ಒಲೆಯ ಹಚ್ಚ್ತಾಳೆ
ನನ್ನ ಮಕ್ಕಳ ತಾಯಿ ಆಗ್ತಾಳೆ,,,,
ಒಓ ಒಓ ಹೊ ಹೊ ಓಹೋ

ಬಾಳೆ ಮರಗಳೆ ತೆಂಗಿನ ಗರಿಗಳೆ
ಬನ್ನಿರಿ ಮಂಟಪಕೆ
ಎರೆಯುವೆ ನಿಮಗೆ ನೀರ ಸುರಿಯುವೆ
ನಿಮಗೆ ಸಾರ
ಮಲ್ಲಿಗೆ ಹೂಗಳೆ ತುಳಸಿ ದಳಗಳೆ
ಕುಳಿತಿರಿ ಧಾರೆಯಲಿ
ಮುಗಿಯುವೆ ನಿಮಗೆ ಕೈಯ ತೊಳೆಯುವೆ
ನಿಮಗೆ ಪಾದ
ಅಂಬಾಕರುಗಳೆ ಬನ್ನಿ ಮದುವೆಗೆ
ಲಡ್ಡು ಕೊಡುವೆನು ನಿಮ್ಮ ಬಾಯಿಗೆ

ಆಕಾಶದಿಂದ ತೇರಿನಲ್ಲಿ ಚೆಲುವೆ ಬರ್ತಾಳೆ
ನಾಳೆ ನನ್ನ ಮದುವೆ ಆಗ್ತಾಳೆ,,,,,,
ಕಸ್ತೂರಿ ಬೀರೋ ಊರಿನಲ್ಲಿ ದೀಪ ಹಚ್ತಾಳೆ
ನನ್ನ ಮನೆಗೆ ಕಳಶ ಇಡ್ತಾಳೆ
ಒಓ ಒಓ ಹೊ ಹೊ ಓಹೋ

ಬಾರೇ ಕೋಗಿಲೆ ಬಾರೇ ನೈದಿಲೆ
ವಧುವೆ ಬಂದವಳೆ
ಅವಳಿಗೆ ಸೋಬನ ಹಾಡಿ ಹಾಡಿನ ಆರತಿ ಮಾಡಿ
ಬಾರೆ ಹಣ್ಣೆಲೆ ಬಾರೇ ಚಿಗುರೆಲೆ
ಮಧುಮತಿ ನಿಂತವಳೇ
ಅವಳಿಗೆ ಮಾಲೆಯ ಹಾಕಿ ಗಾಳಿಯ ಗಂಧವ ತೀಡಿ
ಕೇಳೆ ಭೂಮಿಯೆ ನನ್ನ ಮಾತನು
ನಾನೇ ಇವಳಿಗೆ ಪತಿರಾಯನು

ಆಕಾಶದಿಂದ ತೇರಿನಲ್ಲಿ ಚೆಲುವ ಬರ್ತಾನೆ
ಬಾಳ ಬೆಳಗೊ ಸೂರ್ಯ ಆಗ್ತಾನೇ
ಅನುರಾಗ ಹರಿಯೋ ರಾತ್ರಿಯಲ್ಲಿ
ಪ್ರೀತಿ ಮಾಡ್ತಾನೆ ಆಸೆ ಬೆಳಗೋ
ಚಂದ್ರ ಆಗ್ತಾನೆ

ಒಓ ಒಓ ಹೊ ಹೊ ಓಹೋ

E Kannigu Hennigu Enu Snehavo song Lyrics

ಚಿತ್ರ: ಆಕಸ್ಮಿಕ
ರಚನೆ/ಸಂಗೀತ: ಹಂಸಲೇಖ
ಗಾಯಕ/ನಟ: ಡಾ. ರಾಜಕುಮಾರ್

ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ನೋಡಲು ಮೋಹಕ ಕೂಡಲು ಪ್ರೇರಕ
ಏನು ಮಾಯಾವೋ

ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ

ಮನದ ಒಳದ ತಿಳಿಯ ಜಲದ ಮೇಲೆ ಮನವೆಸೆದು
ಸಿಗದ ಜಗದ ಸುಖದ ತಳಕೆ ನನ್ನಾ ಬರಸೆಳೆದು
ಅಳುವ ಮೊಗದ ಒಳಗೆ ತೆರೆದ ಎದೆಗೆ ಜೊತೆ ಬೆಸೆದು
ಇಹದ  ಪರದ ಜಾನುಮಾಂತರದ ಕಥೆಯ ಪುಟ ತೆರೆದು
ಆಕಸ್ಮಿಕ ಎಂದಳೀ ಚಲುವ ಬಾರೆ
ಅನಿರೀಕ್ಷಿತ ತಂದಳೀ ಒಲವ ಬಾಲೆ
ಚಂದದ ಕನ್ಯೆಯೋ, ದಂತದ ಬೊಂಬೆಯೋ
ಏನು ಮಾಯೆಯೋ

ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ

ಸರಸಿ ಸರಸಿ ಚೆಲುವಿಗೆ ಅರಸಿ ಬಂದಳು ನನ್ನರಸಿ
ಕವನ ಕಾವ್ಯ ನಾಟ್ಯ ಗಮಕ ಕಲೆಗಳ ಸಿಂಗರಿಸೀ
ಕನಸು ಮನಸು ಬದುಕು ಭ್ರಮೆಯ ನಡುವೆ ಸಂಚರಿಸಿ
ಮೌನದ ಒಡವೆ ಧರಿಸಿ ನಕ್ಕಳು ಒಲವನು ಸಿಂಪಡಿಸೀ
ಆಕಸ್ಮಿಕ ಆದಳೀ  ಪ್ರೇಮ ಯೋಗ
ಅನಿರೀಕ್ಷಿತ ಅನಿಸಲಿ ಪ್ರಣಯ ರಾಗ
ಸ್ವರ್ಗಾದಿ ಸ್ಪರ್ಶವು ಸೌಕ್ಯದಿ ಸಂದ್ಯವು
ಏನು ಮಾಯೆಯೋ

ಈ ಕಣ್ಣಿಗೂ ಹೆಣ್ಣಿಗೂ ಏನು ಸ್ನೇಹವೋ
ಈ ಹೆಣ್ಣಿಗೂ ಪ್ರೀತಿಗೂ ಏನು ಬಂಧವೋ
ನೋಡಲು ಮೋಹಕ ಕೂಡಲು ಪ್ರೇರಕ
ಏನು ಮಾಯಾವೋ