Sunday, 23 April 2017

Belli Kaalungura Song Lyrics

Belli Kaalungura Song Lyrics

ಚಿತ್ರ: ಬೆಳ್ಳಿ ಕಾಲುಂಗುರ
ಹಾಡಿದವರು: ಎಸ್ ಜಾನಕಿ, ??
ನಟರು: ಮಾಲಾಶ್ರಿ, ಸುನಿಲ್, ತಾರ

ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಓ.....
ಲಾಲಾ.....
ಈ ಮಿಂಚುಗಳಲ್ಲೇ ಸಾರವಿದೆ
ಸಾರದಲ್ಲೇ ಸಂಸಾರವಿದೆ
ಅಂಗುಲಿಯಲ್ಲೇ ಮಂಗಳದ ಬಂಧನವಾಗಿದೆ ಬಂಧನವಾಗಿದೆ
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಬಾಳ ಕಡಲಲಿ ಪ್ರೇಮ ನದಿಗಳ ಸಂಧಿ ಸಮಯದಲಿ
ಮಿಂಚುವ ಮಿನುಗುವ ಸಾಕ್ಷಿ ಈ ಕಾಲುಂಗುರ
ನಾದಗಡಲಲಿ ವೇದ ಘೋಷದ ಸಪ್ತಪದಿಗಳಲಿ
ಬದುಕಿನ ಬಂಡಿಗೆ ಸಾರಥಿ ಕಾಲುಂಗುರ
ಶುಕವ ತರುವ ಸತಿ ಸುಖವ ಕೊಡುವ
ಮನ ಮನೆಯ ನೆಲದಲಿ ಗುನುಗುವ ಒಡವೆಯೋ
ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ
ಆದಿ ಕಾಲದ ವೇದ ಮೂಲದ ಸತಿಯ ಆಭರಣ
ಚೆಲುವಿಗೆ ಒಲವಿಗೆ ಗೌರವ ಕಾಲುಂಗುರ
ಐದು ಮುತ್ತುಗಳಾರು ಮುಡಿವಳೋ ಅವಳೆ ಮುತ್ತೈದೆ
ಸಿಂಧೂರ ಮಾಂಗಲ್ಯ ಮೂಗುತಿ ಓಲೆ ಕಾಲುಂಗುರ
ಹೃದಯ ತೆರೆದು ಉಸಿರೊಡೆಯ ತರದು
ಗಂಡು ಹೆಣ್ಣಿಗೆ ನೀಡುವ ಆಣೆಯ ಉಡುಗೊರೆ
ಬೆಳ್ಳಿ ಕಾಲುಂಗುರ.......

Thangaliyalli Naanu Teli Bande Song Lyrics

Thangaliyalli Naanu Teli Bande Song Lyrics


ಚಿತ್ರ:ಜನ್ಮ ಜನ್ಮದಾ ಅನುಬಂಧ
ಸಂಗೀತ:ಇಳೆಯರಾಜ
ಸಾಹಿತ್ಯ:ಉದಯಶಂಕರ್
ನಿರ್ದೇಶನ:ದಿ ಶಂಕರನಾಗ್
ಗಾಯಕರು: ಎಸ್. ಜಾನಕಿ
ಓಹೋ......ಹೋ ............. ಓಹೋ......ಹೋ .............
ತಂಗಾಳಿಯಲ್ಲಿ ನಾನು ತೇಲಿ ಬಂದೆ....
ನಿನ್ನನ್ನು ಪ್ರೀತಿಯಿಂದ ಸೇರಲೆಂದೇ...
ಓ ಇನಿಯಾ .........ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲೂ..ಬಾ... ಬಾ....
ನನ್ನನು ಸೇರಲು... ಓಹೋ......ಹೋ .............
ನಿನ್ನಾ ಎಲ್ಲೂ ಕಾಣದೆ ಹೋಗಿ....
ನನ್ನಾ ಜೀವ ಕೂಗಿ ಕೂಗಿ...
ಏಕಾಂಗಿಯಾಗಿ ನಾನು ನೊಂದು ಹೋದೇ.....
ಹೀಗೇಕೆ ದೂರ ಮಾಡಿದೇ.....
ಓ ಇನಿಯಾ .........ಆಹಾ..ಹಾ ...ಹಾ .......
ನನ್ನನು ಸೇರಲು...ಬಾ...ಬಾ......
ನನ್ನನು ಸೇರಲು...
ಓಹೋ......ಹೋ .............
ಏತಕೆ ಹೀಗೆ ಅಲೆಯುತಲಿರುವೇ...?
ಯಾರನು ಹೀಗೆ ಹುಡುಕುತಲಿರುವೇ..?
ಕಣ್ಣಲ್ಲಿ ನನ್ನಾ ಬಿಂಬ ಇಲ್ಲವೇನು...
ನೀ ಕಾಣೆ ಏನು ನನ್ನನ್ನೂ....
ಓ ಇನಿಯಾ........ ಆಹಾ ..ಹಾ ...ಹಾ .......
ನನ್ನನು ಸೇರಲು... ಬಾ... ಬಾ......
ನನ್ನನು ಸೇರಲು....
ತಂಗಾಳಿಯಲ್ಲಿ ನಾನು ತೇಲಿ ಬಂದೇ...
ನಿನ್ನನ್ನು ಪ್ರೀತಿಯಿಂದ ಸೇರಲೆಂದೇ....
ಓ ಇನಿಯಾ .........
ಓ ಇನಿಯಾ .........ಆಹಾ ..ಹಾ ...ಹಾ .......
ನನ್ನನು ಸೇರಲು ಬಾ... ಬಾ....
ನನ್ನನು ಸೇರಲು ಓಹೋ......ಹೋ .............

Nagu Endide Manjina Bindu song Lyrics

Nagu Endide Manjina Bindu song Lyrics


ಪಲ್ಲವಿ ಅನುಪಲ್ಲವಿ
ಹಾಡಿದವರು: ಎಸ್ ಜಾನಕಿ
ನಟರು: ಲಕ್ಷ್ಮಿ, ಅನಿಲ್ ಕಪೂರ್
ನಗು ಎಂದಿದೆ ಮಂಜಿನ ಬಿಂದು 
ನಲಿ ಎಂದಿದೆ ಗಾಳಿ ಇಂದು
ಚಿಲಿ ಪಿಲಿ ಎಂದು ಹಕ್ಕಿಯು ಹೇಳಿದೆ ಈಗ ಬಾ ಬಾ
ಜೊತೆಯಲಿ ಕೂಡಿ ನಮ್ಮಂತೆ ಹಾರು ನೀ ಬೇಗ ಬಾ ಬಾ
ಹಾರಲು ಆಗದೆ ಸೋತಿರಲು
ಬಾಳಿಗೆ ಗೆಳೆಯನು ಬೇಕಿರಲು
ಬಯಸಿದೆ ಅರಸಿದೆ ನಾ
ಕಂಡೆ ಈಗಲೇ ನಾ
ನನ್ನ ಸ್ನೇಹಿತನ....
ಇದೆ ನಗುವ ಮನದ ಸ್ಪಂದ
ಸವಿ ಮಧುರ ಮಮತೆ ಬಂಧ
ಆ....ತನನ....
ಹಾಡುವ ಬಾ ಬಾ ನದಿ ಅಲೆ ಕೊಡುವುದು ಜಾಗ ಈಗ
ಕುಣಿಯುವ ಬಾ ಬಾ ಮಳೆ ಹನಿ ತರುವುದು ತಾಳ ಮೇಳ
ಪ್ರಕೃತಿಯು ಬರೆದ ಕವನವಿದು
ಮಮತೆಯ ಸೊಗಸಿನ ಪಲ್ಲವಿಯು
ಸುಂದರ ಸ್ನೇಹವಿದು
ಇಂತ ಅನುಬಂಧ ಎಂತ ಆನಂದ
ಇದೆ ನಗುವ ಮನದ ಸ್ಪಂದ
ಸವಿ ಮಧುರ ಮಮತೆ ಬಂಧ