ಚಿತ್ರ: ಸಿಂಹದ ಮರಿ (೧೯೯೭/1997)
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ಮನು, ಚಿತ್ರಾ
ನಿನ್ನ ಕಣ್ಣು ನನ್ನ ಕಣ್ಣು
ಮಿನುಗೊ ಪ್ರೇಮದ ಲೋಕ
ನಿನ್ನ ಮಾತು ನನ್ನ ಮಾತು
ಮುತ್ತಿನ ಪ್ರೇಮದ ಪಾಕ
ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಮುತ್ತು ಒಂದು, ನಮ್ಮ ಮುತ್ತು ಒಂದು
ತುಟಿ ಕರೆದಾಗ ಇಬ್ಬರೂ ಕೂಡಬೇಕು
ನಿನ್ನ ಕಣ್ಣು ನನ್ನ ಕಣ್ಣು
ಮಿನುಗೊ ಪ್ರೇಮದ ಲೋಕ
ನಿನ್ನ ಮಾತು ನನ್ನ ಮಾತು
ಮುತ್ತಿನ ಪ್ರೇಮದ ಪಾಕ
ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಮುತ್ತು ಒಂದು, ನಮ್ಮ ಮುತ್ತು ಒಂದು
ತುಟಿ ಕರೆದಾಗ ಇಬ್ಬರೂ ಕೂಡಬೇಕು
ಗಾಳಿ ಗಂಧ ಕೂಡಿ ಕಲೆತಾಗ ಗುಂಗಿನ ಯಾತ್ರೆಯಂತೆ
ನನ್ನ ನಿನ್ನ ಕಣ್ಣು ಕಲೆತಾಗ ಕನಸಿನ ಜಾತ್ರೆಯಂತೆ
ಹಬ್ಬದ ಹಬ್ಬ, ಪ್ರೀತಿಯ ಹಬ್ಬ
ಹಬ್ಬದ ಹಬ್ಬ ಪ್ರೀತಿಯ ಹಬ್ಬ
ಮರೆಸಿದೆ ಹಗಲು ರಾತ್ರಿ
ನಿನ್ನ ಕಣ್ಣು ನನ್ನ ಕಣ್ಣು
ಮಿನುಗೊ ಪ್ರೇಮದ ಲೋಕ
ನಿನ್ನ ಮಾತು ನನ್ನ ಮಾತು
ಮುತ್ತಿನ ಪ್ರೇಮದ ಪಾಕ
ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಮುತ್ತು ಒಂದು, ನಮ್ಮ ಮುತ್ತು ಒಂದು
ತುಟಿ ಕರೆದಾಗ ಇಬ್ಬರೂ ಕೂಡಬೇಕು
ಚೆಲುವೆ ಚೆಲುವೆ ನಿನ್ನ ಚೆಲುವನ್ನು ಪೂಜಿಸೊ ಮಂತ್ರ ನಾನು
ಚೆಲುವ ಚೆಲುವ ನಿನ್ನ ಮಂತ್ರಕ್ಕೆ ಸೋಲುವ ದಾಸಿ ನಾನು
ಸ್ನೇಹದ ಹೊಳೆಗೆ, ಮುತ್ತಿನ ಮಳೆಯ
ಸ್ನೇಹದ ಹೊಳೆಗೆ ಮುತ್ತಿನ ಮಳೆಯ
ಸುರಿಸಿದೆ ಪ್ರೀತಿಯ ಮೋಡ
ನಿನ್ನ ಕಣ್ಣು ನನ್ನ ಕಣ್ಣು
ಮಿನುಗೊ ಪ್ರೇಮದ ಲೋಕ
ನಿನ್ನ ಮಾತು ನನ್ನ ಮಾತು
ಮುತ್ತಿನ ಪ್ರೇಮದ ಪಾಕ
ಪ್ರೀತಿ ಒಂದು, ನಮ್ಮ ಪ್ರೀತಿ ಒಂದು
ಒಂದು ಪ್ರೀತಿಗೆ ಇಬ್ಬರೂ ಸೇರಬೇಕು
ಮುತ್ತು ಒಂದು, ನಮ್ಮ ಮುತ್ತು ಒಂದು
ತುಟಿ ಕರೆದಾಗ ಇಬ್ಬರೂ ಕೂಡಬೇಕು
No comments:
Post a Comment