ಚಿತ್ರ: ಅಭಿಮನ್ಯು (೧೯೯೦/1990)
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ಎಸ್.ಪಿ.ಬಿ., ಮಂಜುಳಾ ಗುರುರಾಜ್
ಕಲ್ಲಿಗೆ ಪ್ರಾಣ ನೀಡಿದ ರಾಮ ನೀನಾದೆ, ನೀನಾದೆ
ಗಂಗೆಗೆ ಶಿರವ ನೀಡಿದ ಶಿವನು ನೀನಾದೆ, ಗಂಗೆ ನಾನಾದೆ
ಮಾನವರೆಲ್ಲ ದೇವರು ಅಲ್ಲ ಕೇಳಮ್ಮ
ಇರುಳಿನ ಮನೆಗೆ ಬಾಳಿನ ದೀಪ ನೀನಾದೆ, ನೀನಾದೆ
ಮರಳಿನ ಮೇಲೆ ಆದರ ತೋರೊ ನೀರಾದೆ, ಗಂಗೆ ನೀನಾದೆ
ಹೂವಿನ ಜೊತೆಯಲ್ಲಿ ನಾರಿಗು ಬೆಲೆ ಇಲ್ಲಿ
ಕನಿಕರಿಸಿ ಕರುಣಿಸಿದ ಒಲವಿರಿಸಿ ಬದುಕಿಸಿದ, ದೇವರ ರೂಪವಿದೆ
ದೇವರ ನೆಲದಲ್ಲಿ ಭೇದವೆ ಇರದಿಲ್ಲಿ
ಎಲ್ಲರಿಗು ಬಾಳು ಇದೆ ಸಿಹಿಕಹಿಯ ಪಾಲು ಇದೆ, ನನ್ನದು ಏನು ಇದೆ
ನೀನೇನೆ ಅಂದರೂ ನೀನೇನೆ ದೇವರು
ಆಕಾಶ ತಂದರೂ ನಾನಲ್ಲ ದೇವರು
ಬದುಕಿಗೆ ವರವಾಗಿ ನಿನ್ನನೆ ತಂದವ ದೇವರು ಕೇಳಮ್ಮ
ಕಲ್ಲಿಗೆ ಪ್ರಾಣ ನೀಡಿದ ರಾಮ ನೀನಾದೆ, ನೀನಾದೆ
ಇರುಳಿನ ಮನೆಗೆ ಬಾಳಿನ ದೀಪ ನೀನಾದೆ, ನೀನಾದೆ
ಈ ಮನೆ ಹೊಸಿಲಲ್ಲಿ ಕುಂಕುಮ ಇರುವಂತೆ
ನಾನಿರುವೆ ಕಾದಿರುವೆ ನೀ ಬರಲು ಪೂಜಿಸುವೆ, ಅಳಿದರು ಜೊತೆ ಇರುವೆ
ಎದೆಯಲಿ ನಿನ್ನ ಜಾಗ ಬದುಕಲಿ ಸಮ ಭಾಗ
ಮುಡುಪಿಡುವೆ ಮನಕೊಡುವೆ ಜಗದೆದುರು ಜೊತೆ ನಡೆವೆ, ಈ ಆಣೆಯ ನೆನಪಿಡುವೆ
ನೀನಾದೆ ಗೋಪುರ ನಾನಾದೆ ನೂಪುರ
ನಾನೊಂದು ಕಾರಣ ನೀನೆಂದೂ ತೋರಣ
ಬದುಕಿಗೆ ವರವಾಗಿ ನಿನ್ನನೆ ತಂದವ ದೇವರು ಕೇಳಯ್ಯ

No comments:
Post a Comment