Sunday, 23 April 2017

ನಾನಿಂದು ನಿನ್ನಿಂದ ಆನಂದ ನೋಡಿದೆ

ಚಿತ್ರ: ಮತ್ತೆ ಹಾಡಿತು ಕೋಗಿಲೆ (೧೯೯೦/1990)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಸ್.ಪಿ.ಬಿ., ಚಿತ್ರಾ

ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ

ಹೂವಂತ ಮೈಯನು, ಕೈಸೋಕಿದಾಗಲೆ
ತನುವಲ್ಲಿ ನಲ್ಲೆ, ಮಿಂಚೇತಕೆ
ಹೂವಂತ ಮೈಯನು, ಕೈಸೋಕಿದಾಗಲೆ
ತನುವಲ್ಲಿ ನಲ್ಲೆ, ಮಿಂಚೇತಕೆ
ನೂರಾಸೆ ಹೀಗೇತಕೆ
ಈ ನಿನ್ನ ಕಣ್ಣಲಿ, ಬೆಳಕಾಗಿ ನಿಲ್ಲುವೆ
ಬದುಕಲ್ಲಿ ಎಂದೂ, ಸುಖ ತುಂಬುವೆ
ಈ ನಿನ್ನ ಕಣ್ಣಲಿ, ಬೆಳಕಾಗಿ ನಿಲ್ಲುವೆ
ಬದುಕಲ್ಲಿ ಎಂದೂ, ಸುಖ ತುಂಬುವೆ
ನಿನಗಾಗಿ ನಾ ಬಾಳುವೆ

ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ

ನುಡಿಯಲ್ಲಿ ಪ್ರೇಮವು, ನಡೆಯಲ್ಲಿ ಪ್ರೇಮವು
ಜೊತೆಯಲ್ಲಿ ನೀನು, ಬಂದಾಗಲೆ
ನುಡಿಯಲ್ಲಿ ಪ್ರೇಮವು, ನಡೆಯಲ್ಲಿ ಪ್ರೇಮವು
ಜೊತೆಯಲ್ಲಿ ನೀನು, ಬಂದಾಗಲೆ
ಬದುಕೆಲ್ಲವೂ ಪ್ರೇಮವೇ
ಈ ನಿನ್ನ ಸ್ನೇಹಕೆ, ಈ ನಿನ್ನ ಮೋಹಕೆ
ನಿಜವಾದ ನಿನ್ನ, ಅನುರಾಗಕೆ
ಈ ನಿನ್ನ ಸ್ನೇಹಕೆ, ಈ ನಿನ್ನ ಮೋಹಕೆ
ನಿಜವಾದ ನಿನ್ನ, ಅನುರಾಗಕೆ
ಕೊಡಲೇನೆ ಸಿಹಿ ಕಾಣಿಕೆ

ನಾನಿಂದು ನಿನ್ನಿಂದ ಆನಂದ ನೋಡಿದೆ
ನಾನಿಂದು ನಿನ್ನಿಂದ ಆನಂದ ನೋಡಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ
ಜೀವನ ಉಯ್ಯಾಲೆಯಾಗಿ ತೂಗಿದೆ

No comments:

Post a Comment