Enayto idenayto Song Lyrics
ಚಿತ್ರ: ವಂಶಿಸಾಹಿತ್ಯ: ವೀ ನಾಗೇಂದ್ರ ಪ್ರಸಾದ್
ಏನಾಯ್ತೋ, ಇದೇನಾಯ್ತೋ? ವಿಧಿ ಆಟ ಏನಾಯ್ತೋ?
ನೀನಿಲ್ಲ ನಿನ್ನೋರಿಲ್ಲ, ನಿನ್ನ ನೆರಳೇ ನಿನಗಿಲ್ಲ..
ಸಂಚಾರಿ.. ಸಂಚಾರಿ.. ಸಂಚಾರಿ.. ನಡೀ..
ನಡೆಸೋನು ವಿಧಿ ನೋಡು, ನಡೆಯೋದೇ ನಿನ್ನ ಪಾಡು..
ಏನಾಯ್ತೋ, ಇದೇನಾಯ್ತೋ?
ಯಾರನ್ನು ಕೊಲ್ಲಲು ಆಯುಧ ನೀನು? ಏನನ್ನು ಗೆಲ್ಲಲು ದಾಳವು ನೀನು
ನಿನ್ನ ಕೋಪ ತಾಪ, ನಿನಗೇನೆ ಶಾಪ, ಮುಂದೇನು ನೀ ಹೇಳೆಯಾ..
ನುಚ್ಚು ನೂರು ಆಯ್ತೆ ಹೆತ್ತೋಳ ಆಸೆ,
ಕರಗುವುದೇ ವಿಧಿ ಹೃದಯ, ಅದುವರೆಗೂ ತಡೆಯುವೆಯಾ?
ಏನಾಯ್ತೋ, ಇದೇನಾಯ್ತೋ?
ನನ್ನವರಿಲ್ಲ ತನ್ನವರಿಲ್ಲ, ವಿಧಿಯ ಎದುರು ನಿಲ್ಲುವರಿಲ್ಲ
ನಿನ್ನ ಪ್ರೀತಿ ಪ್ರೇಮ ನೀರಲ್ಲಿ ಹೋಮ ಆಗೋಯ್ತೆ ಓ ಜೀವವೇ..
ನಿನ್ನ ಮಿತ್ರ ನೀನೇ ಶತ್ರುನೂ ನೀನೇ
ನಿನಗ್ಯಾರೋ ಕಡಿವಾಣ, ಅವತಾರ ಸರಿಯೇನಾ?
ಏನಾಯ್ತೋ, ಇದೇನಾಯ್ತೋ?
No comments:
Post a Comment