Wednesday, 12 April 2017

Januma Niduttale Namma Thayi Song Lyrics

Januma Niduttale Namma Thayi Song Lyrics


ಚಿತ್ರ: ಬೇವು ಬೆಲ್ಲ (1993)
ಸಾಹಿತ್ಯ: ಹಂಸಲೇಖ
ಸಂಗೀತ: ಹಂಸಲೇಖ
ಹಾಡಿದವರು: ರಾಜೇಶ್ ಕೃಷ್ಣನ್

ಜನುಮ ನೀಡುತ್ತಾಳೆ ನಮ್ಮ ತಾಯಿ
ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ

ಜನುಮ ನೀಡುತ್ತಾಳೆ ನಮ್ಮ ತಾಯಿ
ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ

ಓದಿದರೂ ಗೀಚಿದರೂ ಒಲೆಯ ಊದಬೇಕು
ತಾಯಿಯಾಗಬೇಕು
ತಾಯಿ ನೆಲದ ಋಣ ತೀರಿಸಲೇಬೇಕು
ತಾಯಿ ಭಾಷೆ ನಿನ್ನ ಮಕ್ಕಳು ಕಲಿಬೇಕು
ಕಾವೇರಿ ನೀರಲ್ಲಿ ಬೇಳೆ ಬೇಯಿಸಬೇಕು

ಜನುಮ ನೀಡುತ್ತಾಳೆ ನಮ್ಮ ತಾಯಿ
ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ

ಜಾರಿದರೂ ಎಡವಿದರೂ ಕೈ ಹಿಡಿಯುತ್ತಾಳೆ
ತಾಯಿ ಕಾಯುತ್ತಾಳೆ
ಭೂಮಿ ತಾಯಿ ನೀ ಸತ್ತರು ಕರಿತಾಳೆ
ತಾಯಿ ಭಾಷೆ ನೀ ಹೋದರು ಇರುತಾಳೆ
ಸಾವಲ್ಲಿ ಕಾವೇರಿ ಬಾಯಿಗೆ ಸಿಗುತಾಳೆ

ಜನುಮ ನೀಡುತ್ತಾಳೆ ನಮ್ಮ ತಾಯಿ
ಅನ್ನ ನೀಡುತ್ತಾಳೆ ಭೂಮಿ ತಾಯಿ
ಮಾತು ನೀಡುತ್ತಾಳೆ ಕನ್ನಡ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ
ಪಾಪ ಕಳೆಯುತ್ತಾಳೆ ಕಾವೇರಿ ತಾಯಿ

No comments:

Post a Comment