Sunday 23 April 2017

ಒಲವಿನ ಉದಯ ಕಂಡಿತು ಹೃದಯ

ಚಿತ್ರ: ನಾಗ ಕಾಳ ಭೈರವ (೧೯೮೧/1981)
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ಎಂ.ರಂಗ ರಾವ್
ಹಾಡಿದವರು: ಕೆ.ಜೆ.ಯೇಸುದಾಸ್, ಪಿ.ಸುಶೀಲಾ

ಒಲವಿನ ಉದಯ ಕಂಡಿತು ಹೃದಯ
ಎಲ್ಲಾ ಮೋಹಮಯ, ಎಲ್ಲಾ ಪ್ರೇಮಮಯ
ಒಲವಿನ ಕರೆಯ ಕೇಳುವ ಸಮಯ
ಎಲ್ಲಾ ಮಧುರಮಯ, ಎಲ್ಲಾ ಸ್ನೇಹಮಯ

ನನ್ನನು ವರಿಸಿ ತಾಳಿಯ ದರಿಸಿ
ನಾಳಿನ ಬಾಳನು ಬೆಳಗುವೆ ಅರಸಿ
ನನ್ನನು ವರಿಸಿ ತಾಳಿಯ ದರಿಸಿ
ನಾಳಿನ ಬಾಳನು ಬೆಳಗುವೆ ಅರಸಿ
ಚೆಲುವಿಗೆ ನನ್ನ ಒಲವನು ಬೆರಸಿ
ಚೆಲುವಿಗೆ ನನ್ನ ಒಲವನು ಬೆರಸಿ
ನಲಿಯುವೆ ರಾಣಿ ನಿನ್ನನು ಮೆರಸಿ

ಒಲವಿನ ಕರೆಯ ಕೇಳುವ ಸಮಯ
ಎಲ್ಲಾ ಮಧುರಮಯ, ಎಲ್ಲಾ ಸ್ನೇಹಮಯ

ಅರಿಶಿಣ ಕುಂಕುಮ ಭಾಗ್ಯವ ಮೆರೆದು
ಪುಣ್ಯದ ಜ್ಯೋತಿಯ ಪೂಜಿಸಿ ಪಡೆದು
ಅರಿಶಿಣ ಕುಂಕುಮ ಭಾಗ್ಯವ ಮೆರೆದು
ಪುಣ್ಯದ ಜ್ಯೋತಿಯ ಪೂಜಿಸಿ ಪಡೆದು
ಬಾಳಿನ ದೈವ ನೀನೆ ಎಂದು
ಬಾಳಿನ ದೈವ ನೀನೆ ಎಂದು
ಬಾಳುವೆ ನಾನು ಎಂದೆಂದೂ

ಒಲವಿನ ಉದಯ ಕಂಡಿತು ಹೃದಯ
ಎಲ್ಲಾ ಮೋಹಮಯ, ಎಲ್ಲಾ ಪ್ರೇಮಮಯ

ಮಂಗಳ ಸೂತ್ರದ ಮೋಹಿನಿಯನ್ನು
ಬೇಡೆನು ನಾನು ಬೇರೇನನ್ನು
ಮಂಗಳ ಸೂತ್ರದ ಮೋಹಿನಿಯನ್ನು
ಬೇಡೆನು ನಾನು ಬೇರೇನನ್ನು
ಸೇವೆಗೆ ನಾನು ಮೀಸಲು ಹೂವು
ಸೇವೆಗೆ ನಾನು ಮೀಸಲು ಹೂವು
ಸಂತಸವೆಲ್ಲ ಹೊಂದುವ ನಾವು

ಒಲವಿನ ಉದಯ ಕಂಡಿತು ಹೃದಯ
ಎಲ್ಲಾ ಮಧುರಮಯ, ಎಲ್ಲಾ ಪ್ರೇಮಮಯ
ಎಲ್ಲಾ ಪ್ರೇಮಮಯ

No comments:

Post a Comment