Tuesday, 23 May 2017

Nalidide Jeevana Ganga

ಚಿತ್ರ: ಅದಲು ಬದಲು (೧೯೭೯/1979)
ಸಾಹಿತ್ಯ: ವಿಜಯನಾರಸಿಂಹ
ಸಂಗೀತ: ವಿಜಯಭಾಸ್ಕರ್
ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್

ನಲಿದಿದೆ ಜೀವನ ಗಂಗಾ
ಬಾಳಿನ ಭಾವ ತರಂಗ
ಒಲವೂ ನಲಿವೂ
ಎಂಥಾ ಸ್ಪಂದನ

ಹೃದಯದಲ್ಲಿ ಮಧುರ ಭಾವ
ರೂಪ ತಾಳಿ ನಿಂತಿದೆ
ಹೃದಯದಲ್ಲಿ ಮಧುರ ಭಾವ
ರೂಪ ತಾಳಿ ನಿಂತಿದೆ
ಒಲವಿನಲ್ಲಿ ಹರುಷ ಹಕ್ಕಿ
ಹಾರುವಂತೆ ಕಂಡಿದೆ
ಮನೆಗೆ ಶೋಭೆ ಮಡದಿ ನೀಡೆ
ರಂಗುವಲ್ಲಿ ನಗುತಲಿದೆ

ನಲಿದಿದೆ ಜೀವನ ಗಂಗಾ
ಬಾಳಿನ ಭಾವ ತರಂಗ
ಒಲವೂ ನಲಿವೂ
ಎಂಥಾ ಸ್ಪಂದನ

ರಸಿಕ ಜೀವ ಚೆಲುವಿಗಾಗಿ
ನಿನ್ನ ಸಂಗ ಕೋರಿತು
ರಸಿಕ ಜೀವ ಚೆಲುವಿಗಾಗಿ
ನಿನ್ನ ಸಂಗ ಕೋರಿತು
ಒಲವು ತಂದ ನೆರಳಿನಿಂದ
ಬಾಳು ಪೂರ್ಣ ಆಯಿತು
ಬೆಸುಗೆಯಾದ ಬದುಕಿನಲ್ಲಿ
ಅಂದ ಚೆಂದ ಚಿಗುರುತಿದೆ

ನಲಿದಿದೆ ಜೀವನ ಗಂಗಾ
ಬಾಳಿನ ಭಾವ ತರಂಗ
ಒಲವೂ ನಲಿವೂ
ಎಂಥಾ ಸ್ಪಂದನ

No comments:

Post a Comment