Tuesday, 23 May 2017

ನನ್ನ ಕನಸಿನ ರಾಣಿಯೆ ನಿಲ್ಲೇ ನಿಲ್ಲೇ ನನ್ನ ಮನಸಿನ ಮಲ್ಲಿಗೆ ನಿಲ್ಲೇ ಅಲ್ಲೇ

ಚಿತ್ರ: ಭಲೇ ಜೋಡಿ (೧೯೭೦/1970)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಆರ್.ರತ್ನ
ಹಾಡಿದವರು: ಪಿ.ಬಿ.ಶ್ರೀನಿವಾಸ್

ನನ್ನ ಕನಸಿನ ರಾಣಿಯೆ ನಿಲ್ಲೇ ನಿಲ್ಲೇ
ನನ್ನ ಮನಸಿನ ಮಲ್ಲಿಗೆ ನಿಲ್ಲೇ ಅಲ್ಲೇ
ನಿನ್ನ ಹೃದಯದ ಆಸೆಯನೆಲ್ಲಾ ಬಲ್ಲೇ
ನಲ್ಲೇ ನಿಲ್ಲೇ ಅಲ್ಲೇ, ನಲ್ಲೇ ನಿಲ್ಲೇ ಅಲ್ಲೇ
ನನ್ನ ಕನಸಿನ ರಾಣಿಯೆ ನಿಲ್ಲೇ ನಿಲ್ಲೇ
ನನ್ನ ಮನಸಿನ ಮಲ್ಲಿಗೆ ನಿಲ್ಲೇ ಅಲ್ಲೇ

ಬಿಡು ನಿನ್ನ ಸಿಡುಕು, ಯಾಕೀ ತಳಕು
ನನ್ನಾಸರೆಯು ನಿನಗಿರಬೇಕು
ಕೊಕ್ಕರೆ ಹಾಗೆ ನಡೆದುದು ಸಾಕು
ತೋಳಿಂದ ಬಳಸೊಂದ ಕೊಡಬೇಕು
ನಿಲ್ಲೇ ನನ್ನ ನಲ್ಲೇ, ನಿಲ್ಲೇ ನನ್ನ ನಲ್ಲೇ

ನನ್ನ ಕನಸಿನ ರಾಣಿಯೆ ನಿಲ್ಲೇ ನಿಲ್ಲೇ
ನನ್ನ ಮನಸಿನ ಮಲ್ಲಿಗೆ ನಿಲ್ಲೇ ಅಲ್ಲೇ

ನಾಚಿಕೆ ಏಕೆ, ಈ ಮೈ ಸೋಕೆ
ವದಿಸಿದೆ ಅಂದೇ, ನೀ ನನ್ನಾಕೆ
ಓಡಲು ಬಿಡೆನು ತಿಳಿದುಕೊ ಜೋಕೆ
ತುಟಿಗೊಂದು ಸಿಹಿಯ ಕಾಣಿಕೆ
ಬೇಕೇ ನನ್ನ ಜಿಂಕೆ, ಬೇಕೇ ನನ್ನ ಜಿಂಕೆ

ನನ್ನ ಕನಸಿನ ರಾಣಿಯೆ ನಿಲ್ಲೇ ನಿಲ್ಲೇ
ನನ್ನ ಮನಸಿನ ಮಲ್ಲಿಗೆ ನಿಲ್ಲೇ ಅಲ್ಲೇ
ನಿನ್ನ ಹೃದಯದ ಆಸೆಯನೆಲ್ಲಾ ಬಲ್ಲೇ
ನಲ್ಲೇ ನಿಲ್ಲೇ ಅಲ್ಲೇ, ನಲ್ಲೇ ನಿಲ್ಲೇ ಅಲ್ಲೇ
ನನ್ನ ಕನಸಿನ ರಾಣಿಯೆ ನಿಲ್ಲೇ ನಿಲ್ಲೇ
ನನ್ನ ಮನಸಿನ ಮಲ್ಲಿಗೆ ನಿಲ್ಲೇ ಅಲ್ಲೇ

No comments:

Post a Comment