Friday, 14 July 2017

Pralayanthaka Kannada Movie Song

ಚಿತ್ರ: ಪ್ರಳಯಾಂತಕ (೧೯೮೪/1984)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಶಂಕರ್-ಗಣೇಶ್
ಹಾಡಿದವರು: ಎಸ್.ಪಿ.ಬಿ.

ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಚಿನ್ನ ನಾರೀಮಣಿ ಚಿಂತಾಮಣಿ ಕಟ್ಟೂವೆನ ಕರೀಮಣಿ
ಮನಸಲ್ಲಿ ಚಿಂತೆ ಮಾಡಬೇಡಮ್ಮ
ಇಂಥ ಜೋಡಿ ಈ ಊರಲ್ಲೇ ಇಲ್ಲಮ್ಮ
ಏನಿದೂ ಗೌರಮ್ಮ ಕಣ್ಣಲೀ ಕಾಡಿಗೆ
ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ

ರೇಶಿಮೆ ಸೀರೆ ಉಟ್ಟು ಕೈತುಂಬ ನೆರಿಗೆ ಇಟ್ಟು
ರೇಶಿಮೆ ಸೀರೆ ಉಟ್ಟು ಕೈತುಂಬ ನೆರಿಗೆ ಇಟ್ಟು
ನಡುವಲ್ಲಿ ಸಿಕ್ಕಿಸುವೆಯೆ ಜಯಮ್ಮ
ಅದು ನೆರಿಗೆಯಲ್ಲ ನನ್ನ ಮನಸು ಕೇಳಮ್ಮ
ಏನಿದೂ ಗೌರಮ್ಮ ಕಣ್ಣಲೀ ಕಾಡಿಗೆ
ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ

ಮಳೆಯಲಿ ನೆಂದಾಗ ಮರದಡಿಯಲಿ ನಿಂತಾಗ
ಮಳೆಯಲಿ ನೆಂದಾಗ ಮರದಡಿಯಲಿ ನಿಂತಾಗ
ಹಿತವಾಗಿ ನಡುಗುವೆಯೆ ಗಂಗಮ್ಮ
ಅದು ನಡುಕವಲ್ಲ ಮೈಯ ಮಿಂಚು ಕೇಳಮ್ಮ
ಏನಿದೂ ಗೌರಮ್ಮ ಕಣ್ಣಲೀ ಕಾಡಿಗೆ
ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ

ಕತ್ತಲೆಯು ಬಂದಾಗ ಮೆತ್ತೆಯಲಿ ಇರುವಾಗ
ಕತ್ತಲೆಯು ಬಂದಾಗ ಮೆತ್ತೆಯಲಿ ಇರುವಾಗ
ದಿಂಬನ್ನು ಅಪ್ಪುವೆಯ ಹೊನ್ನಮ್ಮ
ಅದು ದಿಂಬಲ್ಲ ನನ್ನ ಮೈ ಕೇಳಮ್ಮ
ಏನಿದೂ ಗೌರಮ್ಮ ಕಣ್ಣಲೀ ಕಾಡಿಗೆ
ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಹಿಂದೆ ನಾ ಬರುವೆ ಮುಂದೆ ನೀ ಹೋದಾಗ

No comments:

Post a Comment