Monday, 18 December 2017

Raagavo Anuraagavo Kannada Song Lyrics

Raagavo Anuraagavo Kannada Song Lyrics


ರಾಗವೋ ಅನುರಾಗವೋ
ಚಿತ್ರ: ಯಾರಿವನು
ರಚನೆ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯಕರು: ಡಾ. ರಾಜಕುಮಾರ್, ಎಸ್. ಜಾನಕಿ

ಗಂ: ರಾಗವೋ ಅನುರಾಗವೋ
ಹೆ:  ಯೋಗವೋ ಶುಭಯೋಗವೋ
ಗಂ: ಬಯಸದೆ ಬಂದಿಂದೆ
ಹೆ:  ಹರುಷವ ತಂದಿದೆ
ಗಂ: ಒಲವ ನೀಡಿದೆ
ಹೆ:  ಒಲವ ನೀಡಿದೆ
ಗಂ: ರಾಗವೋ
ಹೆ:  ಅನುರಾಗವೋ
ಗಂ: ಯೋಗವೋ
ಹೆ:  ಶುಭಯೋಗವೋ

ಗಂ:  ಬಿಳುಪಾದ ಮಂಜು ನೆಲವೆಲ್ಲ ತುಂಬಿ ತಂಪು ಚೆಲ್ಲಿದೆ
        ಚಳಿಯಲೂ ಏನೊ ಹಿತವನು ಇಂದು ಈ ಸ್ನೇಹ ತಂದಿದೆ
ಹೆ:   ಭುವಿಯಲಿ  ಬೇರೆ ಹೊಸ ಲೋಕ ಕಂಡ ಭ್ರಾಂತಿ ಬಂದಿದೆ
        ಹಿಮದಲಿ ಸೇರಿ ಜಾರುವ ಆಸೆ ನನ್ನನ್ನು ಕಾಡಿದೆ
ಜೊ: ನನ್ನನ್ನು ಕಾಡಿದೆ

ಹೆ:  ರಾಗವೋ ಅನುರಾಗವೋ
ಗಂ:  ಯೋಗವೋ ಶುಭಯೋಗವೋ
ಹೆ:  ಬಯಸದೆ ಬಂದಿಂದೆ
ಗಂ:  ಹರುಷವ ತಂದಿದೆ
ಹೆ:  ಒಲವ ನೀಡಿದೆ
ಗಂ:  ಒಲವ ನೀಡಿದೆ
ಹೆ:  ರಾಗವೋ
ಗಂ: ಅನುರಾಗವೋ
ಹೆ:  ಯೋಗವೋ
ಗಂ: ಶುಭಯೋಗವೋ

ಹೆ:   ಸೊಗಸಾದ ನೋಟ ಹಿತವಾದ  ಆಟ ಸುಖವ ತಂದಿದೆ
ಗಂ:  ಅನುದಿನ ಹೀಗೆ ನಲಿಯುವ ಆಸೆ ಎದೆಯಲ್ಲಿ ತುಂಬಿದೆ
ಹೆ:   ದಿನವೆಲ್ಲ ಕೂಡಿ ಒಂದಾಗಿ ಹಾಡೊ ಬಯಕೆ ಬಂದಿದೆ
ಗಂ:  ಜೊತಯಲಿ ಜೋಡಿ ಹಕ್ಕಿಯ ಹಾಗೆ ಹಾರೋಣ ಎನಿಸಿದೆ

ಜೊ: ಹಾರೋಣ ಎನಿಸಿದೆ

ಗಂ: ರಾಗವೋ ಅನುರಾಗವೋ
ಹೆ:  ಯೋಗವೋ ಶುಭಯೋಗವೋ
ಗಂ: ಬಯಸದೆ ಬಂದಿಂದೆ
ಹೆ:  ಹರುಷವ ತಂದಿದೆ
ಗಂ: ಒಲವ ನೀಡಿದೆ
ಜೊ: ಒಲವ ನೀಡಿದೆ 

No comments:

Post a Comment