Monday, 18 December 2017

E Sogasada Sanje Kannada Song

ಚಿತ್ರ: ದೇವತಾ ಮನುಷ್ಯ
ರಚನೆ: ಚಿ. ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಗಾಯಕ: ಡಾ. ರಾಜಕುಮಾರ್, ಮಂಜುಳ ಗುರುರಾಜ್   

ಗಂ:  ಈ ಸೊಗಸಾದ ಸಂಜೆ ।೨।
       ನಿನ್ನನ್ನು ನೋಡುತ ನನ್ನನ್ನೇ ಮರೆತೆ
       ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಹೆ:   ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ
       ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಗಂ:  ಈ ಸೊಗಸಾದ ಸಂಜೆ

ಗಂ:  ನಲ್ಲೆಯು ಮೂಡಿದ ಮಲ್ಲಿಗೆ ಹೂವು ಪ್ರೇಮದ ಗೀತೆ ಹಾಡಿದೆ ಇಂಪಾಗಿ
       ಕಂಪನ್ನು ಚೆಲ್ಲಿದೆ ಹಿತವಾಗಿ
ಹೆ:   ನಲ್ಲನ ನುಡಿಯು ಕೊಳಲಿನ ಧನಿಯು ಕಾಣೆನು ನಾನು ಕೇಳುತ ಬೆರಗಾಗಿ
       ಸಂತೋಷ ತುಂಬಿತು ಹಾಯಾಗಿ
ಗಂ:  ಓ..... ಪ್ರೇಮದ ಗಂಗೆ ಪ್ರಣಯದ ತುಂಗೆ ನಲ್ಲೆಯ ಮಾತುಗಳೆಲ್ಲ

ಹೆ:   ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ
ಜೊ: ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಜೊ: ಈ ಸೊಗಸಾದ ಸಂಜೆ

ಹೆ:   ಗೆಳೆಯೆನೆ ಇಂದು ಕಣ್ಣಲಿ ನಿನ್ನ ಪ್ರೇಮದ ಲೋಕ ನೋಡಿದೆ ನಾನೀಗ
       ನನ್ನಲ್ಲಿ ಮೂಡಿತು ಅನುರಾಗ
ಗಂ:  ಅರಗಿಣಿ ಕೂಡ ನಾಚಿತು ನಿನ್ನ ಮಾತನು ಕೇಳಿ ಹಾರಿದೆ ಓ ಜಾಣೆ
       ನಿನ್ನಂತೆ ಯಾರನು ನಾ ಕಾಣೆ
ಹೆ:   ಓ..... ಬಾಳಲಿ ಸರಸ ತುಂಬಿದ ಕಳಸ ಪ್ರೇಮವು ತುಂಬಿರುವಾಗ

ಗಂ:  ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ
       ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಹೆ:   ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ

ಜೊ: ಎಂದೆಂದೂ ಜೊತೆ ಇರುವ ಬಯಕೆ ಇಂದು ಏಕೆ
ಜೊ: ಈ ಸೊಗಸಾದ ಸಂಜೆ, ನಿನ್ನನ್ನು ನೋಡುತ ನನ್ನನ್ನೇ ಮರೆತೆ

No comments:

Post a Comment