Monday, 18 December 2017

Santhasa Araluva Samaya Kannada Song lyrics

Santhasa Araluva Samaya Kannada Song lyrics


ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯ
ಇದು ರಮ್ಯ ಚೈತ್ರಕಾಲ |೨|
ಸುಂದರ ನುಡಿಯಿದು ಗೆಳತಿ
ಸಂಗಾತಿಯಾಗುವಾ
ಶೃಂಗಾರ ಕಾವ್ಯ ರಮ್ಯ |೨| ||ಪಲ್ಲವಿ||

ಮಂಜಿನೆಡೆಯಲಿ ಮುಂಜಾನೆ ಬಣ್ಣ
ಹೃದಯದೊಳಗೆ ಸಂತೋಷ ತಾನ
ಮಂಜಿನೆಡೆಯಲಿ ಮುಂಜಾನೆ ಬಣ್ಣ
ಹೃದಯದೊಳಗೆ ಸಂತೋಷ ತಾನ

ಬಿರಿದ ಹೂವು, ನಗುವ ತಾಣ |೨|
ಮಿನುಗೊ ರಂಗು ಭೂಮಿ ಬಾನ
ಇದು ರಮ್ಯ ಚೈತ್ರ ಕಾಲ |೨|

ಸುಂದರ ನುಡಿಯಿದು ಗೆಳತಿ
ಸಂಗಾತಿಯಾಗುವಾ
ಶೃಂಗಾರಕಾವ್ಯ ರಮ್ಯ |೨|

ಚಿಂತೆಯಿರುವ ಮನದಲ್ಲಿ ಮೌನ
ದೂರಸರಿಸಿ ಮರೆಯಾಗಿಸೋಣ
ನಲಿವು ನೋವು ಬರಲಿ ಏನು |೨|
ಬಾಳು ನಮ್ಮ ಮಧುರ ಗಾನ.....
ಶೃಂಗಾರಕಾವ್ಯ ರಮ್ಯ |೨|


ಕಂಗಳ ಬೆಳಕು ಬೆಳದಿಂಗಳಾಗಿ
ತಿಂಗಳ ಬೆಳಕು ಅನುರಾಗವಾಗಿ
ಕುಸುಮರಾಶಿ ಹರುಷವಾಗಿ
ನಲಿಯುವಾಗ ಮಿಡಿದ ರಾಗ.....
ಇದು ರಮ್ಯ ಚೈತ್ರ ಕಾಲ |೨|

ಸಂತಸ ಅರಳುವ ಸಮಯ
ಮರೆಯೋಣ ಚಿಂತೆಯ
ಇದು ರಮ್ಯ ಚೈತ್ರಕಾಲ |೨|

1 comment: