Monday, 18 December 2017

Poojisalende Hugala Thande Kannada Song Lyrics

Poojisalende Hugala Thande Kannada Song Lyrics


ಆ......ಆ.......ಆ......
ಪೂಜಿಸಲೆಂದೇ ಹೂಗಳ ತಂದೆ
ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ...
ತೆರೆಯೋ ಬಾಗಿಲನು ರಾಮ...
ತೆರೆಯೋ ಬಾಗಿಲನು ರಾಮ...

ಪೂಜಿಸಲೆಂದೇ ಹೂಗಳ ತಂದೆ

ಮೋಡದಮೇಲೆ ಚಿನ್ನದ ನೀರು
ಚೆಲ್ಲುತ ಸಾಗಿದೆ ಹೊನ್ನಿನ ತೇರು
ಮಾಣಿಕ್ಯದಾರತಿ.....ಆ.....ಅ.....
ಮಾಣಿಕ್ಯದಾರತಿ ಉಷೆತಂದಿಹಳು
ತಾಮಸವೇಕಿನ್ನು ಸ್ವಾಮಿ....
ತೆರೆಯೋ ಬಾಗಿಲನು ರಾಮ

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ...
ಪೂಜಿಸಲೆಂದೇ ಹೂಗಳ ತಂದೆ

ಒಲಿದರು ಚೆನ್ನ ಮುನಿದರು ಚೆನ್ನ
ನಿನ್ನಾಸರೆಯೇ ಬಾಳಿಗೆ ಚೆನ್ನ
ನಾ ನಿನ್ನ ಪಾದದ ಧೂಳಾದರೂ ಚೆನ್ನ - 2
ಸ್ವೀಕರಿಸು ನನ್ನಾ...ಸ್ವಾಮಿ
ತೆರೆಯೋ ಬಾಗಿಲನು ರಾಮ.....

ಪೂಜಿಸಲೆಂದೇ ಹೂಗಳ ತಂದೆ
ದರುಶನ ಕೋರಿ ನಾ ನಿಂದೇ...
ತೆರೆಯೋ ಬಾಗಿಲನು ರಾಮ

ಪೂಜಿಸಲೆಂದೇ ಹೂಗಳ ತಂದೆ....

No comments:

Post a Comment