Tuesday, 4 April 2017

ಘಮ ಘಮಾ ಘಮ್ಮಾಡಿಸ್ತಾವ ಮಲ್ಲಿಗಿ | ನೀ ಹೊರಟಿದ್ದೀಗ ಎಲ್ಲಿಗೀ

ಘಮ ಘಮಾ ಘಮ್ಮಾಡಿಸ್ತಾವ ಮಲ್ಲಿಗಿ | ನೀ ಹೊರಟಿದ್ದೀಗ ಎಲ್ಲಿಗೀ ?
ಘಮ ಘಮಾ..................... || ಪಲ್ಲವಿ ||


ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
ಕನಸು ತೇಲಿ ಬರತಾವ ಹುಡುಕಿ ||
ನೀ ಹೊರಟಿದ್ದೀಗ ಎಲ್ಲಿಗೀ ?


ಚಿಕ್ಕಿ ತೋರಿಸ್ತಾವ ಚಾಚಿ ಬೆರಳ
ಚಂದ್ರಮ ಕನ್ನಡಿ ಹರಳ
ಮನ ಸೋತು ಆಯಿತು ಮರುಳ ||
ನೀ ಹೊರಟಿದ್ದೀಗ ಎಲ್ಲಿಗೀ ?


ನೆರಳಲ್ಲಾಡತಾವ ಮರದ ಬುಡsಕ
ಕೆರಿ ತೆರಿ ನೂಗತಾವ ದಡಕs
ಹೀಂಗ ಬಿಟ್ಟು ಎಲ್ಲಿ ನನ್ನ ನಡsಕ
ನೀ ಹೊರಟಿದ್ದೀಗ ಎಲ್ಲಿಗೀ ?


ನನ್ನ ನಿನ್ನ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ ||
ನೀ ಹೊರಟಿದ್ದೀಗ ಎಲ್ಲಿಗೀ ?


ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದರ ಕನಸು
ರಾಯ ತಿಳಿಯಲಿಲ್ಲ ನಿನ್ನ ಮನಸು ||
ನೀ ಹೊರಟಿದ್ದೀಗ ಎಲ್ಲಿಗೀ ?

- ಅಂಬಿಕಾತನಯದತ್ತ

Mareyada Pustaka Odalu Koduveya Song Lyrics

Mareyada Pustaka Odalu Koduveya Song Lyrics 


ಮರೆಯದ ಪುಸ್ತಕ ಲಿರಿಕ್ಸ್ – ರಥಾವರ

ಮರೆಯದ ಪುಸ್ತಕ ಓದಲು ಕೊಡುವೆಯಾ
ಮರೆಯದೆ ಅದರಲಿ ಕನಸನು ಇದುವೆಯ
ಬೇಡವೆನುತಲಿ ಬಂದೆ ವಾಲಿಯುತ
ಸಮಯ ಮರೆಸಿ ನಯನ ಬೆರಸಿ
ನಡೆಸು ಮ್ಯಾಡ್ಯೂರ ವಿನಿಮಯ

ಡಾಳಾದಾಗಿದೆ ಹೃದವೀಡು
ತುಮಿಬಿಕೊಳ್ಳಲು ನೆಂಪುಗಳ
ಹಬ್ಬದತ್ನಟೆ ಕಾಲ್ರ್ಯುವೇನು
ನಿನ್ನ ಸಂಗಡ ನಿಮಿಸಗಳ
ತೋಳಿನಲ್ಲಿ ಇರಲು ನಾನು
ನೋಡಬೇಡ ಜೋಗವನು
ನೆರಳು ಹೆಣೆದಿದೆ ಕೊರಳು ಬಿಗಿದಿದೆ
ಸಪರ್ಶ್ಡಲ್ಲೇ ಬರೆದು ಬಿಡಲೇ
ಮರುಳು ಮನದ ಕವಿತೆಯ
ಮರೆಯದ ಪುಸ್ತಕ ಓದಲು ಕೊಡುವೆಯಾ
ಮರೆಯದೆ ಅದರಲಿ ಕನಸನು ಇದುವೆಯ

ನಿನ್ನ ನೆನೆದರೆ ಆಗುವದು
ನಾನು ಕುಡಿಯುವ ನೀರು ಸಿಹಿ
ಗಾಳಿಯಂತೆ ಆವರಿಸಿ
ಮೆಲ್ಲ ಊಸಿರಲಿ ಮಾಡು ಸಹಿ
ನಡೆಯುತಿರಲು ನಿನ್ನ ದ್ಯಾನ
ಮಂನ್ಸೆ ಒಂದು ಮಾಡುವನಾ
ಬರಲು ಸನಿಹಕೆ ಸಣ್ಣ ಹೆದರಿಕೆ
ಇರುವ ಗೆರೆಯ ಅಳಿಸಿಬಿಡುವ
ನಿನ್ನ ಸೆಳೆತ ಅತಿಶಯ
ಮರೆಯದ ಪುಸ್ತಕ ಓದಲು ಕೊಡುವೆಯಾ
ಮರೆಯದೆ ಅದರಲಿ ಕನಸನು ಇದುವೆಯ
ಬೇಡವೆನುತಲಿ ಬಂದೆ ವಾಲಿಯುತ
ಸಮಯ ಮರೆಸಿ ನಯನ ಬೆರಸಿ
ನಡೆಸು ಮ್ಯಾಡ್ಯೂರ ವಿನಿಮಯ

Hudugi Kannu Loaded Gannu Song Lyrics

Hudugi Kannu Loaded Gannu Song Lyrics


ಹುಡುಗಿ ಕಣ್ಣು ಲಿರಿಕ್ಸ್ – ರಥಾವರ
ಹುಡುಗಿ ಕಣ್ಣು ಲೋಡೆಡ್ ಗನ್ನು

ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟ್-ಇಗೆ ಬುಲೆಟ್-ಉ ವನ್ ಬೈ ವನ್-ಉ
ಎದೆಯ ಡೋಲು ಆಗಿಧೆ ಹೋಲ್-ಉ
ಆದ್ರೂ ಹಾಕ್ತೈತೆ ತಾಳ ಕೇಳು
ಹುಡುಗರ ಹಾರ್ಟ್-ಈಗೂ ಹೆಲ್ಮೆಟ್ ಹಾಕ್ಕೊಳೊ
ಆಪ್ಷನ್ ನೀಡು ದೇವರೇ
ಚಂದಾನಿ ರಾತ್ ಮೇ
ಚೂರು ಕಣ್ಣೀರು ಸಾಲ ಮಾಡೋಣ
ಚಂದಾನಿ ಚೌಕ್ ಮೇ
ಹಾಳಾದ್ ದಿಲ್ ಅನ್ನೇ ಸಲೆ-ಉ ಮಾಡೋಣ
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟ್-ಇಗೆ ಬುಲೆಟ್-ಉ ವನ್ ಬೈ ವನ್-ಉ

ಹುಡುಗಿ ಹಿಂದೆ ಬಿದ್ದರೆ
ಸಿಕ್ಕಾಪಟ್ಟೆ ತೊಂದರೆ
ಜೀವ ಗೀವ ನೋಂದರೆ
ಬಿಟ್ಕೋ ಬೀರು ಸಿಕ್ಕರೆ

ನಗ್ಞಗ್ತಾನೆ ಕೊಲ್ತಾವ್ಲೇ
ನಾನಕನ್ಸಲ್ಲಿ ನೋಡ್ತಾವ್ಲೇ
ಡೇ ಅಂಡ್ ನೈಟ್-ಉ ಕಾಡ್ತಾವ್ಲೇ
ಕಣ್ಣ ಮುಚ್ಚೇ ಆಡ್ತಾವ್ಲೇ
ಬೆನ್ನ ಮೇಲೆ ಬರೆದ ಸಾಲು ಆಳಿಸೆ ಇಲ್ಲ ಇನ್ನೂ
ನನ್ನ ನೋಡಿ ಅಳ್ತಾ ಐತೆ ಬೀದಿ ದೀಪನು
ಚಂದಾನಿ ರಾತ್ ಮೇ
ಚೂರು ಕಣ್ಣೀರು ಸಾಲ ಮಾಡೋಣ
ಚಂದಾನಿ ಚೌಕ್ ಮೇ
ಹಾಳಾದ್ ದಿಲ್ ಅನ್ನೇ ಸಲೆ-ಉ ಮಾಡೋಣ
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟ್-ಇಗೆ ಬುಲೆಟ್-ಉ ವನ್ ಬೈ ವನ್-ಉ

ಹುಚ್ಚು ಹಿಡ್ಸೋರು ಹುಡ್ಗೀರೆ ಮಚ್ಚು ಹಿಡ್ಸೋರು ಹುಡ್ಗೀರೆ
ಸುಕ್ಕ ಹೋದ್ಸೋರು ಹುಡ್ಗೀರೆ ಚಟ್ಟ ಏರ್ಸೋರು ಹುಡ್ಗೀರೆ
ಹುಡ್ಗಿ ಬಿಟ್ಟು ಬಾಟಲಿ ಹಿಡಿದೆ ಪ್ರೇಮ ಗಿಮಾ ಕ್ಯಾನ್ಸಲ್
ಕುದ್ಕಂಡ್ ಹಂಗೆ ಮಲ್ಕಂದ್‌ಬಾರ್ದು ಎಸ್ಕೋ ಒಂಧ್ ಪಾರ್ಸಲ್
ಚಂದಾನಿ ರಾತ್ ಮೇ
ಚೂರು ಕಣ್ಣೀರು ಸಾಲ ಮಾಡೋಣ
ಚಂದಾನಿ ಚೌಕ್ ಮೇ
ಹಾಳಾದ್ ದಿಲ್ ಅನ್ನೇ ಸಲೆ-ಉ ಮಾಡೋಣ
ಹುಡುಗಿ ಕಣ್ಣು ಲೋಡೆಡ್ ಗನ್ನು
ಹಾರ್ಟ್-ಇಗೆ ಬುಲೆಟ್-ಉ ವನ್ ಬೈ ವನ್-ಉ