Monday 18 December 2017

Ondu Malebillu Kannada Song Lyrics

Ondu Malebillu Kannada Song Lyrics


ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ ಬಾವನೇ ಬಾಕಿ ಇವೆ
ತೇಲಿ ನೂರಾರು ಮೈಲಿಯು ಸೇರಲು ಸನಿ ಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ ಮುದ್ದಾಗಿ ಸೇರಿವೆ ಎರಡೂ ಸಹ……
ಏನನೋ ಮಾತಾಡಿವೆ ಭಾವನೆ ಬಾಕಿ ಇವೆ
ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ.

ಸನ್ನೆಗಳಿಗೆ ಸೋತ ಕಣ್ಣುಗಳಿವೆ ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ
ಬೆರಳುಗಳು ಸ್ಪರ್ಶ ಬಯಸುತಿವೆ ಮನದ ಒಳಗೊಳಗೇ ಎಷ್ಟೋ ಆಸೆಗಳಿವೆ
ಎಂತಾ ಆವೇಗ ಈ ತವಕ ಸೇರೋ ಸಲುವಾಗಿ ಎಲ್ಲಾ ಅತಿಯಾಗಿ
ಎಲ್ಲೂ ನೋಡಿಲ್ಲ ಈ ತನಕ ಪ್ರೀತಿಗೆ ಒಂದು ಹೆಜ್ಜೆ ಮುಂದಾಗಿವೆ
ಏನೇನೋ ಮಾತಾಡಿವೆ ಯಾತಕೆ ಹೀಗಾಗಿವೆ
ಒಂದು ಮಳೆಬಿಲ್ಲು ಒಂದು ಮಳೆಮೋಡ

ನಾಚುತಲಿವೆ ಯಾಕೋ ಕೈಯ ಬಳೆ ಮಂಚ ನೋಡುತಿವೆ ಬಿಳೋ ಬೆವರ ಮಳೆ
ಬೆಚ್ಚಗೆ ಇದೆ ನೆಟ್ಟ ಉಸಿರ ಬೆಳೆ ದೀಪ ಮಲಗುತಿದೆ ಈ ರಗಳೆ
ತುಂಬಾ ಹೊಸದಾದ ಈ ಕಥನ ಒಮ್ಮೆ ನಿಶ್ಯಬ್ದ ಒಮ್ಮೆ ಸಿಹಿ ಯುದ್ಧ
ಎಲ್ಲೂ ಕೇಳಿಲ್ಲ ಈ ಮಿಥುನ ಪ್ರೀತಿಲಿ ಈ ಜೀವ ಒಂದಾಗಿವೆ
ಏನನೋ …. ಮಾತಲಿ ಮುದ್ದಾಡಿವೆ
ಒಂದು ಮಳೆಬಿಲ್ಲು
ಒಂದು ಮಳೆಮೋಡ
ಹೇಗೋ ಜೊತೆಯಾಗಿ
ತುಂಬಾ ಸೊಗಸಾಗಿ
ಏನನೋ ಮಾತಾಡಿವೆ
ಬಾವನೇ ಬಾಕಿ ಇವೆ

Bhagyada Laxmi Baaramma Song Lyrics

Bhagyada Laxmi Baaramma Song Lyrics


ಭಾಗ್ಯದ ಲಕ್ಷ್ಮೀ ಬಾರಮ್ಮ
ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ
ಸೌಭಾಗ್ಯದ ಲಕ್ಷ್ಮೀ ಬಾರಮ್ಮ ।। ಪಲ್ಲವಿ ।।

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ ।। ೧ ।।

ಕನಕವೃಷ್ಟಿಯ ಕರೆಯುತ ಬಾರೆ
ಮನಕೆ ಮಾನವ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ ।। ೨ ।।

ಅತ್ತಿತ್ತಗಲದೆ ಭಕ್ತರ ಮನೆಯಲಿ
ನಿತ್ಯ ಮಹೋತ್ಸವ ನಿತ್ಯ ಸುಮಂಗಲಿ
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ ।। ೩ ।।

ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತ ಪಂಕಜಲೋಚನೆ
ವೆಂಕಟರಮಣನ ಬಿಂಕದ ರಾಣಿ ।। ೪ ।।

ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆವುಳ್ಳ ಅಳಗಿರಿ ರಂಗನ
ಚೊಕ್ಕ ಪುರಂದರ ವಿಠ್ಠಲನ ರಾಣಿ⁠⁠ ।। ೫ ।।

ಸಾಹಿತ್ಯ: ಪುರಂದರ ದಾಸ

Shankara Shashidhar Kannada Song Lyrics

Shankara Shashidhar Kannada Song Lyrics


ಓಂ  ....... ಓಂ ....... ಓಂ
ಶಂಕರ ಶಶಿಧರ ಗಜ ಚರ್ಮಮಾಂಬರ  ಗಂಗಾಧರ ಹರನೇ
ಸುಂದರ ಸ್ಮರಹರ  ಗೌರಿ ಮನೋಹರ ಜಯ ಪರಮೇಶ್ವರನೇ
ಶಂಕರ ಶಶಿಧರ ಗಜ ಚರ್ಮಮಾಂಬರ  ಗಂಗಾಧರ ಹರನೇ
ಸುಂದರ ಸ್ಮರಹರ  ಗೌರಿ ಮನೋಹರ ಜಯ ಪರಮೇಶ್ವರನೇ

ಜಯ ಜಯ ಶಂಕರನೇ ....... ಜಯ ವಿಶ್ವೇಶ್ವರನೇ,.......
ಜಯ ಜಯ ಶಂಕರನೇ.......  ಜಯ ವಿಶ್ವೇಶ್ವರನೇ,.......

ಓಂ.......  ಓಂ.......  ಓಂ ....... ಓಂ
ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ,
ಶೂಲಿಕ ಪರ್ತಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ
ಈಶ ಗಿರೀಶ ಮಹೇಶ ಉಮೇಶ ಜಯ ವಿಶ್ವೇಶ್ವರನೇ,
ಶೂಲಿಕ ಪರ್ತಿ ತ್ರಿನೇತ್ರ ತ್ರಿಯಂಬಕ ಜಯ ಮೃತ್ಯುಂಜಯನೇ
ಜಯ ಮೃತ್ಯುಂಜಯನೇ ........
ಭಕುತಿಗೆ ಬೇಗನೆ ಒಲಿಯುವ ದೇವನೇ ಜಯ ತ್ರಿಪುರಾಂತಕನೇ
ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ
ಭಕುತಿಗೆ ಬೇಗನೆ ಒಲಿಯುವ ದೇವನೇ ಜಯ ತ್ರಿಪುರಾಂತಕನೇ
ಬೇಡಿದ ವರಗಳ ಆ ಕ್ಷಣ ನೀಡುವ ಸಾಂಬ ಸದಾಶಿವನೇ

ಜಯ ಜಯ ಶಂಕರನೇ.......  ಜಯ ವಿಶ್ವೇಶ್ವರನೇ,.......
ಜಯ ಜಯ ಶಂಕರನೇ ....... ಜಯ ವಿಶ್ವೇಶ್ವರನೇ,.......

ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ
ಲೋಕವ ರಕ್ಷಿಸೇ ವಿಷವನು ಕುಡಿದ ಕರುಣಾಸಾಗರನೇ
ಋಷಿಗಳ ಹೃದಯದಿ ಮನೆಯನು ಮಾಡಿದ ತ್ರಿಭುವನ ಪಾಲಕನೇ
ಲೋಕವ ರಕ್ಷಿಸೇ ವಿಷವನು ಕುಡಿದ ಕರುಣಾಸಾಗರನೇ
ಕರುಣಾಸಾಗರನೇ.......

ಶಂಕರ ಶಶಿಧರ ಗಜ ಚರ್ಮಮಾಂಬರ  ಗಂಗಾಧರ ಹರನೇ
ಸುಂದರ ಸ್ಮರಹರ  ಗೌರಿ ಮನೋಹರ ಜಯ ಪರಮೇಶ್ವರನೇ

ಜಯ ಜಯ ಶಂಕರನೇ ....... ಜಯ ವಿಶ್ವೇಶ್ವರನೇ,.......
ಜಯ ಜಯ ಶಂಕರನೇ.......  ಜಯ ವಿಶ್ವೇಶ್ವರನೇ,  (ಕೋರಸ್ )

ಜಯ ಜಯ ಶಂಕರನೇ.......  ಜಯ ವಿಶ್ವೇಶ್ವರನೇ.......
ಶಶಿಧರನೇ ....... ಹರನೇ ....... ಶಿವನೇ .......