Monday, 18 December 2017

Ondu Malebillu Kannada Song Lyrics

Ondu Malebillu Kannada Song Lyrics


ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿವೆ ಬಾವನೇ ಬಾಕಿ ಇವೆ
ತೇಲಿ ನೂರಾರು ಮೈಲಿಯು ಸೇರಲು ಸನಿ ಸನಿಹ
ಮೋಡ ಸಾಗಿ ಬಂದಿದೆ ಪ್ರೀತಿಗೆ ಮುದ್ದಾಗಿ ಸೇರಿವೆ ಎರಡೂ ಸಹ……
ಏನನೋ ಮಾತಾಡಿವೆ ಭಾವನೆ ಬಾಕಿ ಇವೆ
ಒಂದು ಮಳೆಬಿಲ್ಲು ಒಂದು ಮಳೆಮೋಡ
ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ.

ಸನ್ನೆಗಳಿಗೆ ಸೋತ ಕಣ್ಣುಗಳಿವೆ ಕದ್ದು ಕೊಡುವುದಕೆ ಕಾದ ಮುತ್ತುಗಳಿವೆ
ಬೆರಳುಗಳು ಸ್ಪರ್ಶ ಬಯಸುತಿವೆ ಮನದ ಒಳಗೊಳಗೇ ಎಷ್ಟೋ ಆಸೆಗಳಿವೆ
ಎಂತಾ ಆವೇಗ ಈ ತವಕ ಸೇರೋ ಸಲುವಾಗಿ ಎಲ್ಲಾ ಅತಿಯಾಗಿ
ಎಲ್ಲೂ ನೋಡಿಲ್ಲ ಈ ತನಕ ಪ್ರೀತಿಗೆ ಒಂದು ಹೆಜ್ಜೆ ಮುಂದಾಗಿವೆ
ಏನೇನೋ ಮಾತಾಡಿವೆ ಯಾತಕೆ ಹೀಗಾಗಿವೆ
ಒಂದು ಮಳೆಬಿಲ್ಲು ಒಂದು ಮಳೆಮೋಡ

ನಾಚುತಲಿವೆ ಯಾಕೋ ಕೈಯ ಬಳೆ ಮಂಚ ನೋಡುತಿವೆ ಬಿಳೋ ಬೆವರ ಮಳೆ
ಬೆಚ್ಚಗೆ ಇದೆ ನೆಟ್ಟ ಉಸಿರ ಬೆಳೆ ದೀಪ ಮಲಗುತಿದೆ ಈ ರಗಳೆ
ತುಂಬಾ ಹೊಸದಾದ ಈ ಕಥನ ಒಮ್ಮೆ ನಿಶ್ಯಬ್ದ ಒಮ್ಮೆ ಸಿಹಿ ಯುದ್ಧ
ಎಲ್ಲೂ ಕೇಳಿಲ್ಲ ಈ ಮಿಥುನ ಪ್ರೀತಿಲಿ ಈ ಜೀವ ಒಂದಾಗಿವೆ
ಏನನೋ …. ಮಾತಲಿ ಮುದ್ದಾಡಿವೆ
ಒಂದು ಮಳೆಬಿಲ್ಲು
ಒಂದು ಮಳೆಮೋಡ
ಹೇಗೋ ಜೊತೆಯಾಗಿ
ತುಂಬಾ ಸೊಗಸಾಗಿ
ಏನನೋ ಮಾತಾಡಿವೆ
ಬಾವನೇ ಬಾಕಿ ಇವೆ

1 comment: