Monday, 18 December 2017

Akashadalli Baanadiyagi Kannada Song Lyrics

Akashadalli Baanadiyagi Kannada Song Lyrics


ಚಿತ್ರ: ಕಾವೇರಿ (1975)
ರಚನೆ: ವಿಜಯನಾರಸಿಂಹ
ಸಂಗೀತ: ಎಂ. ರಂಗರಾವ್
ಗಾಯನ: ಪಿ.ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿ


ಆಕಾಶದಲ್ಲಿ ಬಾನಾಡಿಯಾಗಿ
ದನಿಯ ಬೆರೆಸಿ ಹಾಡುವ
ನಲಿ ನಲಿವ ನಗು ನಗುವ ಬಾ…
ಆನಂದದಿಂದ ಒಂದಾದ ಬಂಧ
ಸೊಗದ ಶುಭದ ಸಂಗಮ
ಮೃದು ಮಧುರ ಇದು ಅಮರ ಬಾ… ।। ಪಲ್ಲವಿ ।।

ತೇಲಿ ತೇಲಿ ಹೋಗುವ
ದೂರ ದೂರ ಸಾಗುವ
ಮಧುರ ಮಿಲನ ಸುಧೆಯ ಪಾನ
ಇಲ್ಲೆ ಇಂದ್ರ ವೈಭವ
ಹೃದಯ ಮೌನ ಭಾಷೆಯ
ಕಣ್ಣ ಮಿಂಚು ಸನ್ನೆಯ
ಒಲವ ಕರೆಯ ಸರಸ ಸಮಯ
ನೋಡು ಪ್ರೇಮ ಮಾಯೆಯ ।। ೧ ।।

ಜಾತಿ ಮತವ ಮೀರಿದ
ಪ್ರೇಮ ರಾಜ್ಯ ಸಂಪದ
ನಿನಗೆ ನನಗೆ ಅವನ
ಕೊಡುಗೆ ಅದನೆ ಹಂಚಿಕೊಳ್ಳುವ
ಹೊನ್ನ ಮಳೆಯು ಬೀಳಲಿ
ನಮ್ಮ ಒಲವ ಬಾಳಲಿ
ನನಗೆ ನೀನು ನಿನಗೆ ನಾನು
ಒಂದೇ ತಾಣವಾಗುವಾ ।। ೨ ।।

No comments:

Post a Comment